ದುಲ್ಕರ್ ಸಲ್ಮಾನ್ ಮುಖ್ಯ ಭೂಮಿಕೆಯಲ್ಲಿರುವ ಸೀತಾ ರಾಮಂ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹನು ರಾಘವಪುಡಿ ನಿರ್ದೇಶನದ ರೋಮ್ಯಾಂಟಿಕ್ ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿದ್ದಾರೆ. ನಿನ್ನೆ ಈದ್ ಉಲ್-ಅಧಾ ಸಂದರ್ಭದಲ್ಲಿ, ಸೀತಾ ರಾಮಂ ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ವಿಶೇಷ ನೋಟವನ್ನು ಬಿಡುಗಡೆ ಮಾಡಿದರು. ಹಿಜಾಬ್ ಧರಿಸಿರುವ ರಶ್ಮಿಕಾ ಮಂದಣ್ಣ ಅವರು ಈದ್ ಉಲ್-ಅಧಾ ಶುಭಾಶಯಗಳನ್ನು ತಿಳಿಸಿದ್ದಾರೆ.
ಇದನ್ನೂ ಓದಿ: Bigg Boss Kannada: ಶುರುವಾಗಲಿದೆ ಮಿನಿ ಬಿಗ್ಬಾಸ್! ಯಾರಿಗೆಲ್ಲ ಅವಕಾಶ?
ಅಫ್ರೀನ್ ಎಂಬ ಕಾಶ್ಮೀರಿ ಮುಸ್ಲಿಂ ಹುಡುಗಿಯಾಗಿ ರಶ್ಮಿಕಾ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ಮುಸ್ಲಿಂ ಮಹಿಳೆ ಉಡುಗೆಯಲ್ಲಿ ಸಲಾಮ್ ಹೇಳುತ್ತಿದ್ದಾರೆ. ಲೆಫ್ಟಿನೆಂಟ್ ರಾಮ್ ಆಗಿ ದುಲ್ಕರ್ ಸಲ್ಮಾನ್ ಮತ್ತು ಸೀತೆಯಾಗಿ ಮೃಣಾಲ್ ಠಾಕೂರ್ ಕಾಣಿಸಿಕೊಳ್ಳಲಿದ್ದಾರೆ.
#EidAdhaMubarak from Rebellious #Afreen, to you and your family...#SitaRamam@dulQuer @mrunal0801 @hanurpudi @iamRashmika @iSumanth @Composer_Vishal @VyjayanthiFilms @SwapnaCinema @SonyMusicSouth #SitaRamamOnAug5 #EidAlAdha pic.twitter.com/WFJV8CYRsl
— Vamsi Kaka (@vamsikaka) July 10, 2022
ಸೀತಾ ರಾಮಂನಲ್ಲಿ ತರುಣ್ ಭಾಸ್ಕರ್, ಶತ್ರು, ಭೂಮಿಕಾ ಚಾವ್ಲಾ, ಗೌತಮ್ ಮೆನನ್, ಪ್ರಕಾಶ್ ರಾಜ್, ರುಕ್ಮಿಣಿ ವಿಜಯ್ ಕುಮಾರ್, ಸಚಿನ್ ಖೇಡೇಕರ್, ಮುರಳಿ ಶರ್ಮಾ ಮತ್ತು ವೆನ್ನೆಲಾ ಕಿಶೋರ್ ಸಹ ನಟಿಸಿದ್ದಾರೆ.
ಇದನ್ನೂ ಓದಿ: Kiccha Sudeep: ನಟ ಸುದೀಪ್ ಕಾಲಿಗೆ ಪೆಟ್ಟು.. ಉಪೇಂದ್ರ ಅವರಿಗೆ ಕ್ಷಮೆ ಕೇಳಿದ ಕಿಚ್ಚ
ಬ್ರಿಗೇಡಿಯರ್ ವಿಷ್ಣು ಶರ್ಮಾ ಪಾತ್ರದಲ್ಲಿ ಸುಮಂತ್ ನಟಿಸುತ್ತಿದ್ದಾರೆ. ಸ್ವಪ್ನಾ ಸಿನಿಮಾ ಬ್ಯಾನರ್ ಅಡಿಯಲ್ಲಿ ಅಶ್ವಿನಿ ದತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿಶಾಲ್ ಚಂದ್ರಶೇಖರ್ ಸಂಗೀತ ನೀಡುತ್ತಿದ್ದು, ವೈಜಯಂತಿ ಮೂವೀಸ್ ಪ್ರಸ್ತುತಪಡಿಸುವ ಈ ಸೀತಾ ರಾಮಂ ಚಲನಚಿತ್ರವು ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಆಗಸ್ಟ್ 5, 2022 ರಂದು ಬಿಡುಗಡೆಯಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.