Rashmika Mandanna : ರಶ್ಮಿಕಾ ಬಾಯಲ್ಲಿ ಕನ್ನಡ..ಯಪ್ಪೊ ಏನಿದು ದುರಂತ ಎಂದ ನೆಟ್ಟಿಗರು..!

Rashmika Mandanna Talking in Kannada : ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅಭಿಮಾನಿಗಾಗಿ ಕನ್ನಡದಲ್ಲಿ ಮಾತನಾಡಿದ್ದಾರೆ. ಆದರೆ ಅದರಲ್ಲೂ ತೆಲುಗು ಮಿಕ್ಸ್‌ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.

Written by - Savita M B | Last Updated : Jul 11, 2023, 12:42 PM IST
  • ರಶ್ಮಿಕಾ ಮಂದಣ್ಣ ಟಗರು ಚಿತ್ರದ ನಂತರ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲ
  • ತೆಲುಗು ಹಾಗೂ ಹಿಂದಿ ಸಿನಿಮಾಗಳಿಗೆ ಹೆಚ್ಚು ಒಲವು ನೀಡುತ್ತಾರೆ
  • ನಟಿ ಕನ್ನಡದಲ್ಲಿ ಮಾತನಾಡಿರುವ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.
Rashmika Mandanna : ರಶ್ಮಿಕಾ ಬಾಯಲ್ಲಿ ಕನ್ನಡ..ಯಪ್ಪೊ ಏನಿದು ದುರಂತ ಎಂದ ನೆಟ್ಟಿಗರು..!  title=

Rashmika Mandanna : ಬಾಲಿವುಡ್‌ನಲ್ಲಿ ಸೆಟಲ್‌ ಆಗಿರುವ ರಶ್ಮಿಕಾ ಮಂದಣ್ಣ ಟಗರು ಚಿತ್ರದ ನಂತರ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲ. ತೆಲುಗು ಹಾಗೂ ಹಿಂದಿ ಸಿನಿಮಾಗಳಿಗೆ ಹೆಚ್ಚು ಒಲವು ನೀಡುತ್ತಾರೆ. ಕನ್ನಡ ಮಾತನಾಡದೇ ಇರುವುದಕ್ಕೆ ಆಗ್ಗಾಗ್ಗೆ ನೆಟ್ಟಿಗರಿಂದ ಟ್ರೋಲ್‌ ಕೂಡಾ ಆಗುತ್ತಾರೆ. ಇದೀಗ ನಟಿ ಕನ್ನಡದಲ್ಲಿ ಮಾತನಾಡಿರುವ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

ಕಿರಿಕ್‌ ಪಾರ್ಟಿ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟ ರಶ್ಮಿಕಾ ಕನ್ನಡದಲ್ಲಿ ಕೆಲವೆ ಕೆಲವು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಇನ್ನು ಚಮಕ್‌ ಸಿನಿಮಾದ ನಂತರ 2018ರಲ್ಲಿ ಚಲೋ ಸಿನಿಮಾದ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟರು ಇನ್ನು ಈ ಸಿನಿಮಾ ಅವರಿಗೆ ಬಿಗ್‌ ಬ್ರೇಕ್‌ ನೀಡಿತು. ಅಲ್ಲಿಂದ ಸರತಿಯಲ್ಲಿ ಸಿನಿಮಾಗಳ ಅವಕಾಶಗಳು ನಟಿಗೆ ಬರಲಾರಂಭಿಸಿದವು.

ಇದನ್ನೂ ಓದಿ-ದೀಪಿಕಾ-ಅಲಿಯಾ ಅಲ್ಲ ಈಕೆಯೇ ನೋಡಿ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ! ನಿಮಿಷಕ್ಕೆ ಚಾರ್ಜ್ ಎಷ್ಟು ಗೊತ್ತಾ?

ಇನ್ನು ನಟಿ ರಶ್ಮಿಕಾ ಆಲ್ಬಮ್‌ ಸಾಂಗ್‌ನಲ್ಲಿ ಹೆಜ್ಜೆ ಹಾಕುವುದರ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟರು. ಸದ್ಯ ರಶ್ಮಿಕಾ ಕೈಯಲ್ಲಿ ಎರಡು ಸಿನಿಮಾಗಳಿವೆ. ಜೊತೆಗೆ ಅನೇಕ ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ. ಇಷ್ಟಲ್ಲಾ ನೇಮ್‌ ಮತ್ತು ಫೇಮ್‌ ಇರುವ ನಟಿ ಕನ್ನಡ ಮಾತನಾಡದೇ ಇರುವ ವಿಚಾರವಾಗಿ ಯಾವಾಗಲೂ ಟ್ರೋಲ್‌ ಆಗುತ್ತಿರುತ್ತಾರೆ.

ಇದೀಗ ನಟಿ ರಶ್ಮಿಕಾ ಮಂದಣ್ಣ ಕನ್ನಡ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಜೊತೆ ಚಿಟ್‌ ಚಾಟ್‌ ಮಾಡಿದ್ದಾರೆ. ಫ್ಯಾನ್ಸ್‌ ತಮ್ಮ ಫೇವರೆಟ್‌ ಹಿರೋಯಿನ್‌ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ನ್ಯಾಷನಲ್‌ ಕ್ರಷ್‌ ಉತ್ತರ ನೀಡಿದ್ದಾರೆ. ಕನ್ನಡದಲ್ಲಿ ಒಂದೆರಡು ಮಾತು...ಎಂದು ಕೇಳಿದ ಅಭಿಮಾನಿಗೆ ನಟಿ ರಶ್ಮಿಕಾ ಮಂದಣ್ಣ ..ಎಲ್ರಿಗೂ ಹಾಯ್..ಹೇಗಿದ್ದೀರಾ..? ಚೆನ್ನಾಗಿದ್ದೀರಾ..ನಗ್ತಾ ಇರಿ..ಯಾವಾಗಲೂ ನಿಮ್ಮ ಬಗ್ಗೆ ಯೋಚನೆ ಮಾಡ್ತಾಇದ್ದೀನಿ...ನಿಮ್ಮೆಲ್ಲರಿಗೂ ನನ್ನ ಪ್ರೀತಿಯನ್ನು ಕಳಿಸುತ್ತಿದ್ದೇನೆ..ಎಂದು ರಶ್ಮಿಕಾ ವಿಡಿಯೋದಲ್ಲಿ ಕನ್ನಡ ಮಾತನಾಡಿದ್ದಾರೆ.

ಇದನ್ನೂ ಓದಿ-Puttakkana Makkalu : ಪೊಲೀಸರ ಕೈಗೆ ಸಿಕ್ಕು ಲಾಠಿಯೇಟು ತಿನ್ನುತ್ತಿರೋ ಕಂಠಿನ ಕಾಪಾಡೋರು ಯಾರು?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News