ಸೀಕ್ರೆಟ್ ಡೇಟಿಂಗ್ ನಲ್ಲಿ ರಶ್ಮಿಕಾ - ವಿಜಯ್ .! ಕತೆ ಹೇಳುತ್ತಿದೆ ಈ ಫೋಟೋ

Rashmika Mandanna Vijay Deverakonda: ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೇಗವಾಗಿ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಫೋಟೋ ಮಾತ್ರ ಮೌನವಾಗಿದ್ದುಕೊಂಡೇ ಬಹಳಷ್ಟನ್ನು ಹೇಳುತ್ತಿದೆ.  

Written by - Ranjitha R K | Last Updated : Jan 4, 2023, 02:51 PM IST
  • ಮಾಲ್ಡೀವ್ಸ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಜೋಡಿ
  • ರಶ್ಮಿಕಾ ವಿಜಯ್ ಅಭಿಮಾನಿಗಳಂತೂ ಫುಲ್ ಖುಷ್
  • ಈ ಜೋಡಿಗಿದೆ ಅಪಾರ ಅಭಿಮಾನಿ ಬಳಗ
ಸೀಕ್ರೆಟ್ ಡೇಟಿಂಗ್ ನಲ್ಲಿ  ರಶ್ಮಿಕಾ - ವಿಜಯ್ .! ಕತೆ ಹೇಳುತ್ತಿದೆ ಈ ಫೋಟೋ  title=

Rashmika Mandanna Vijay Deverakonda: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಪಾರ ಅಭಿಮಾನಿಗಳನ್ನು ಹೊಂದಿರುವ ಜೋಡಿ. ಹಾಗಾಗಿ ಇವರ ಜೀವನದ ಪ್ರತಿ ಘಟನೆಗಳನ್ನು ತಿಳಿದುಕೊಳ್ಳುವ ಆಸಕ್ತಿ ಅನೇಕರಿಗಿದೆ. ಇವರ ಒಂದೇ ಒಂದು ಫೋಟೋ  ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡರೂ ಅದು ಸಖತ್ ವೈರಲ್ ಆಗುತ್ತದೆ. 

ಮಾಲ್ಡೀವ್ಸ್‌ನಲ್ಲಿ  ಜೊತೆಯಾಗಿ ಕಾಣಿಸಿಕೊಂಡ ಜೋಡಿ! :  
 ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೇಗವಾಗಿ ವೈರಲ್ ಆಗುತ್ತಿದೆ. ಈ ಫೋಟೋದ ಒಂದು ಬದಿಯಲ್ಲಿ ವಿಜಯ್ ಕಾಣಿಸಿಕೊಂಡಿದ್ದರೆ , ಇನ್ನೊಂದು ಬದಿಯಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಎರಡೂ ಫೋಟೋ ಒಂದೇ ಜಾಗದಲ್ಲಿ ತೆಗೆದಿರುವಂಥದ್ದು ಎನ್ನಲಾಗಿದೆ. ಇದೀಗ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ  ಶರ ವೇಗದಲ್ಲಿ ವೈರಲ್ ಆಗುತ್ತಿದೆ. 
 
 ಇದನ್ನೂ ಓದಿ : Ira Khan: ಲವರ್ ಜೊತೆ ಹೊಸ ಹಾಟ್ ವಿಡಿಯೋ ಹಂಚಿಕೊಂಡ ಅಮಿರ್ ಖಾನ್ ಪುತ್ರಿ!

ಅಭಿಮಾನಿಗಳಂತೂ ಫುಲ್ ಖುಷ್ : 
ಈ ಫೋಟೋ ಮಾಲ್ಡೀವ್ಸ್‌ನದ್ದಾಗಿದೆ. ಹೊಸ ವರ್ಷಾಚರಣೆಗಾಗಿ ಇಬ್ಬರೂ ಸೆಲೆಬ್ರಿಟಿಗಳು ಮಾಲ್ಡೀವ್ಸ್‌ಗೆ ತೆರಳಿದ್ದರು. ಜೊತೆಯಲ್ಲಿಯೇ ಹೊಸ ವರ್ಷಾಚರಣೆ ಮಾಡಿದ್ದಾರೆ ಎನ್ನುವುದನ್ನು ಮಾತ್ರ ಇಬ್ಬರೂ ದೃಢಪಡಿಸಿಲ್ಲ. ಆದರೆ ವೈರಲ್ ಆಗುತ್ತಿರುವ ಫೋಟೋ ಮಾತ್ರ ಮೌನವಾಗಿದ್ದುಕೊಂಡೇ ಬಹಳಷ್ಟನ್ನು ಹೇಳುತ್ತಿದೆ.

 

 ಇದನ್ನೂ ಓದಿ :  ಸ್ಯಾಂಡಲ್ ವುಡ್ ನಿಂದ ರಶ್ಮಿಕಾ ಮಂದಣ್ಣ ನಿಷೇಧದ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಈ ಜೋಡಿಗಿದೆ ಅಪಾರ ಅಭಿಮಾನಿ ಬಳಗ : 
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯನ್ನು ಜನರು ತುಂಬಾ ಇಷ್ಟಪಡುತ್ತಾರೆ. ಅದು ತೆರೆಯ ಮೇಲಾಗಲಿ ತೆರೆಯ ಹೊರಗಗಾಲಿ ಈ ಜೋಡಿಗೆ ಅಪಾರ ಅಭಿಮಾನಿ ಬಳಗವಿದೆ. ಇದೇ ಕಾರಣಕ್ಕೆ ಈಫೋಟೋ ನೋಡಿದ ಅನೇಕರು ಈ ಜೋಡಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News