ನಟ ವಿಜಯ್ ಆಂಟೋನಿ 16 ವರ್ಷದ ಪುತ್ರಿಯ ಆತ್ಮಹತ್ಯೆಗೆ ಕಾರಣವೇನು ಗೊತ್ತೆ..!

Meera Vijay Antony : ಕಾಲಿವುಡ್‌ ಖ್ಯಾತ ಸಂಗೀತ ನಿರ್ದೇಶಕ, ನಟ ವಿಜಯ್ ಆಂಟೋನಿ ಮನೆಯಲ್ಲಿ ದುರಂತ ಸಂಭವಿಸಿದೆ. ವಿಜಯ್‌ ಪುತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಗಿ ವರದಿಯಾಗಿದೆ. 12ನೇ ತರಗತಿ ಓದುತ್ತಿದ್ದ ಪುಟ್ಟ ಹುಡುಗಿ ಇಂತಹ ನಿರ್ಧಾರ ಕೈಗೊಂಡಿದ್ದು ಆಘಾತವನ್ನುಂಟು ಮಾಡಿದೆ.. 

Written by - Krishna N K | Last Updated : Sep 19, 2023, 01:25 PM IST
  • ಸಂಗೀತ ನಿರ್ದೇಶಕ, ನಟ ವಿಜಯ್ ಆಂಟೋನಿ ಮನೆಯಲ್ಲಿ ದುರಂತ ಸಂಭವಿಸಿದೆ.
  • ವಿಜಯ್‌ ಪುತ್ರಿ ಮೀರಾ ಆತ್ಮಹತ್ಯೆಗೆ ಶರಣಾಗಿದ್ದಾಗಿ ವರದಿಯಾಗಿದೆ.
  • 16 ವರ್ಷದಲ್ಲೇ ಈ ನಿರ್ಧಾರ ಮಾಡಲು ವಿಜಯ್‌ ಮಗಳಿಗೆ ಏನಾಗಿತ್ತು..?
ನಟ ವಿಜಯ್ ಆಂಟೋನಿ 16 ವರ್ಷದ ಪುತ್ರಿಯ ಆತ್ಮಹತ್ಯೆಗೆ ಕಾರಣವೇನು ಗೊತ್ತೆ..! title=

Vijay Antony daughter : ತಮಿಳು ನಟರಾಗಿದ್ದರೂ ಸಹ ತಮ್ಮ ಸಂಗೀತ, ಸಿನಿಮಾ ಮತ್ತು ಅಭಿನಯದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಖ್ಯಾತಿ ಪಡೆದಿದ್ದ, ಸಂಗೀತ ನಿರ್ದೇಶಕ, ನಟ ವಿಜಯ್ ಆಂಟೋನಿ ಮನೆಯಲ್ಲಿ ದುರಂತ ಸಂಭವಿಸಿದೆ. ವಿಜಯ್‌ ಪುತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಗಿ ವರದಿಯಾಗಿದೆ. ಅಷ್ಟಕ್ಕೂ 16 ವರ್ಷದಲ್ಲೇ ಈ ನಿರ್ಧಾರ ಮಾಡಲು ವಿಜಯ್‌ ಮಗಳಿಗೆ ಏನಾಗಿತ್ತು..? ಈ ಕುರಿತು ವರದಿ ಇಲ್ಲಿದೆ ನೋಡಿ...

ಹೌದು.. ವಿಜಯ್ ಆಂಟೋನಿ ಒಬ್ಬ ಅತ್ಯುತ್ತಮ ನಟ ಮತ್ತು ಸಂಗೀತ ನಿರ್ದೇಶಕ. ತಮ್ಮ ವಿಭಿನ್ನ ಆಲೋಚನೆಗಳನ್ನು ಸಿನಿಮಾಗಳಲ್ಲಿ ತೋರಿಸುವ ಮೂಲಕ ಸಾಮಾಜಿಕವಾಗಿ ಯೋಚಿಸುತ್ತಿದ್ದ ಒಬ್ಬ ಉತ್ತಮ ನಟ. ಇಂದು ಅವರ ಮಗಳು ಮೀರಾ (16 ವರ್ಷ) ಆತ್ಮಹತ್ಯೆಗೆ ಶರಣಾಗಿದ್ದು, ವಿಜಯ್‌ಗೆ ಆಘಾತವನ್ನುಂಟುಮಾಡಿದೆ.

ಇದನ್ನೂ ಓದಿ: ವಿಜಯ್ ಆಂಟೋನಿ ಮನೆಯಲ್ಲಿ ದುರಂತ.. ಶಾಕ್ ನಲ್ಲಿ ಚಿತ್ರರಂಗ!

ಚೆನ್ನೈನ ಪ್ರಸಿದ್ಧ ಖಾಸಗಿ ಶಾಲೆಯಲ್ಲಿ ಮೀರಾ 12ನೇ ತರಗತಿ ಓದುತ್ತಿದ್ದಳು. ವಿಜಯ್ ಆಂಟನಿ ಕುಟುಂಬ ಡಿಕೆ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ನೆಲೆಸಿದೆ. ಮೀರಾ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. 

ಪ್ರಾಥಮಿಕ ತನಿಖೆಯ ಪ್ರಕಾರ, ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ನಿಜವಾದ ವಿವರಗಳನ್ನು ಬಹಿರಂಗಪಡಿಸಬೇಕಾಗಿದೆ. ಆದ್ರೆ ಇಷ್ಟು ಚಿಕ್ಕ ವಯಸ್ಸಿಗೆ ಮೀರಾ ಒತ್ತಡಕ್ಕೆ ಏಕೆ ಸಿಲುಕಿದರು ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ. ಸಧ್ಯ ಚೆನ್ನೈನ ತೇನಂಪೇಟೆ ಪೊಲೀಸರು ಮೀರಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಓಮಂತುರಾರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಅನಿರುದ್ಧ್ ರವಿಚಂದರ್ ಜೊತೆಗಿನ ವದಂತಿಯ ಬಗ್ಗೆ ಮೌನ ಮುರಿದ ಕೀರ್ತಿ ಸುರೇಶ್ ಏನು ಹೇಳಿದ್ರು?

ಘಟನೆಯ ವಿವರ : ಇಂದು ಮುಂಜಾನೆ ಮೀರಾ ನೇಣು ಬಿಗಿದ ಸ್ಥಿತಿಯಲ್ಲಿ ತಮ್ಮ ಮನೆಯಲ್ಲಿ ಕಂಡುಬಂದಿದ್ದರು ಎಂದು ವರದಿಯಾಗಿದೆ. ತಕ್ಷಣ ಅವರನ್ನು ಚೆನ್ನೈನ ಅಲ್ವಾರ್‌ಪೇಟ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆತಂದಾಗ, ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದರು. ಒತ್ತಡಕ್ಕೆ ಒಳಗಾಗಿದ್ದ ಮೀರಾ ಬೆಳಿಗ್ಗೆ 3 ಗಂಟೆಗೆ ಆಕೆಯ ದುಪಟ್ಟಾದಿಂದ ಬೆಡ್ ರೂಮಿನಲ್ಲಿ ನೇಣು ಬಿಗಿದುಕೊಂಡಿದ್ದಾಗಿ ವರದಿಯಾಗಿದೆ. ಇದನ್ನು ಕಂಡ ವಿಜಯ್‌ ತಂದೆ ಮನೆಯ ಸಿಬ್ಬಂದಿಯ ನೆರವಿನಿಂದ ಆಕೆಯನ್ನು ಕಾವೇರಿ ಆಸ್ಪತ್ರೆಗೆ ಕರೆದೊಯ್ದಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News