ಚಿತ್ರಮಂದಿರವನ್ನೇ ದೇಗುಲವಾಗಿಸಿದ ʼಕಾಂತಾರʼ : ರಿಷಬ್‌ ಶೆಟ್ಟಿ ರಣಗರ್ಜನೆಗೆ ಥಿಯೇಟರ್ಸ್‌ ಫುಲ್‌..!

ʼಕಾಂತಾರʼ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಲು ಸಿದ್ಧವಾದ ʼದಿ ಡಿವೈನ್‌ ಬ್ಲಾಕ್‌ಬಸ್ಟರ್‌ʼ ಸಿನಿಮಾ. ದಿನದಿಂದ ದಿನಕ್ಕೆ ಕಾಂತಾರದ ಮೇಲಿನ ಹೈಪ್‌ ಹೆಚ್ಚಾಗುತ್ತಲೇ ಇದೆ. ಕರಾವಳಿ ಸಂಸ್ಕೃತಿಯ ಅನಾವರಣದ ಜೊತೆ ಅದ್ಭುತ ಕಥಾಹಂದರ ಹೊಂದಿರುವ ಸಿನಿಮಾವನ್ನು ನೋಡಲು ಪ್ರೇಕ್ಷಕರು ಸಾಲುಗಟ್ಟಿ ಚಿತ್ರಮಂದಿರದ ಮುಂದೆ ನಿಲ್ಲುತ್ತಿದ್ದಾರೆ. ಅಲ್ಲದೆ, ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ರಿಷಬ್‌ ಶೆಟ್ಟಿ ಸಿನಿಮಾ ರೆಡಿಯಾಗಿದ್ದು, ಹಿಂದಿ ಟ್ರೈಲರ್‌ ಕೂಡ ಬಿಡುಗಡೆಗೆ ಸಿದ್ಧವಾಗಿದೆ. 

Written by - Krishna N K | Last Updated : Oct 7, 2022, 02:38 PM IST
  • ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಲು ಸಿದ್ಧವಾದ ʼದಿ ಡಿವೈನ್‌ ಬ್ಲಾಕ್‌ಬಸ್ಟರ್‌ʼ ಸಿನಿಮಾ
  • ದಿನದಿಂದ ದಿನಕ್ಕೆ ಕಾಂತಾರದ ಮೇಲಿನ ಹೈಪ್‌ ಹೆಚ್ಚಾಗುತ್ತಲೇ ಇದೆ
  • ಸಂಸ್ಕೃತಿಯ ಅನಾವರಣದ ಜೊತೆ ಅದ್ಭುತ ಕಥಾಹಂದರ ಹೊಂದಿರುವ ಸಿನಿಮಾವನ್ನು ನೋಡಲು ಚಿತ್ರಮಂದಿರದ ಮುಂದೆ ಸಾಲುಗಟ್ಟಿ ನಿಂತ ಪ್ರೇಕ್ಷಕ
ಚಿತ್ರಮಂದಿರವನ್ನೇ ದೇಗುಲವಾಗಿಸಿದ ʼಕಾಂತಾರʼ : ರಿಷಬ್‌ ಶೆಟ್ಟಿ ರಣಗರ್ಜನೆಗೆ ಥಿಯೇಟರ್ಸ್‌ ಫುಲ್‌..! title=

ಬೆಂಗಳೂರು : ʼಕಾಂತಾರʼ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಲು ಸಿದ್ಧವಾದ ʼದಿ ಡಿವೈನ್‌ ಬ್ಲಾಕ್‌ಬಸ್ಟರ್‌ʼ ಸಿನಿಮಾ. ದಿನದಿಂದ ದಿನಕ್ಕೆ ಕಾಂತಾರದ ಮೇಲಿನ ಹೈಪ್‌ ಹೆಚ್ಚಾಗುತ್ತಲೇ ಇದೆ. ಕರಾವಳಿ ಸಂಸ್ಕೃತಿಯ ಅನಾವರಣದ ಜೊತೆ ಅದ್ಭುತ ಕಥಾಹಂದರ ಹೊಂದಿರುವ ಸಿನಿಮಾವನ್ನು ನೋಡಲು ಪ್ರೇಕ್ಷಕರು ಸಾಲುಗಟ್ಟಿ ಚಿತ್ರಮಂದಿರದ ಮುಂದೆ ನಿಲ್ಲುತ್ತಿದ್ದಾರೆ. ಅಲ್ಲದೆ, ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ರಿಷಬ್‌ ಶೆಟ್ಟಿ ಸಿನಿಮಾ ರೆಡಿಯಾಗಿದ್ದು, ಹಿಂದಿ ಟ್ರೈಲರ್‌ ಕೂಡ ಬಿಡುಗಡೆಗೆ ಸಿದ್ಧವಾಗಿದೆ. 

ಹೌದು.. ʼಕಾಂತಾರʼ ಈ ಸಿನಿಮಾದ ಹೆಸರು ಗೊತ್ತಿಲ್ಲ ಎನ್ನುವ ಕನ್ನಡಿಗರಿಲ್ಲ. ಕರುನಾಡಿನ ಮೂಲೆ ಮೂಲೆಯಲ್ಲೂ ಕಾಂತಾರ ಹಬ್ಬುತ್ತಿದೆ. ಅದ್ಭುತ ನಟನೆ ಜೊತೆಗೆ ನಿರ್ದೇಶನ ಮಾಡಿ ರಿಷಬ್‌ ಶೆಟ್ಟಿ ಅವರು ಸೈ ಎನಿಸಿಕೊಂಡಿದ್ದಾರೆ. ಎಲ್ಲಿನೋಡಿದರೂ ಕಾಂತಾರ.. ಕಾಂತಾರ...! ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ನೋಡಲೇ ಬೇಕು ಎಂದು ಕಾತುರತೆಯಿಂದ ಟಿಕೆಟ್‌ಗಾಗಿ ಥಿಯೇಟರ್‌ ಮುಂದೆ ನಿಂತರೂ ಹೌಸ್‌ ಫುಲ್‌ ಬೋರ್ಡ್‌ ಅವರನ್ನು ನಿರಾಸೆಗೊಳಿಸುತ್ತಿದೆ. ಆದರೂ, ಸಿನಿಮಾ ಅವರ ಆಸೆಯನ್ನು ಇಮ್ಮಡಿಗೊಳಿಸುತ್ತಿದೆ.

ಇದನ್ನೂ ಓದಿ: ವಿಪರೀತ ರಾಜಯೋಗ ರೂಪಿಸುತ್ತಿರುವ ಶನಿದೇವ, ಮೂರು ರಾಶಿಯವರಿಗೆ ನೀಡಲಿದ್ದಾನೆ ಯಶಸ್ಸು

ದಿ ಡಿವೈನ್‌ ಬ್ಲಾಕ್‌ಬಸ್ಟರ್‌ ಕಾಂತಾರ ಸಿನಿಮಾ ಬುಕ್‌ ಮೈ ಶೋನಲ್ಲಿ ದಾಖಲೆ ಸೃಷ್ಟಿಸಿದ್ದು, ಈವರೆಗೆ (ಅ.7) 33 ಸಾವಿರಕ್ಕೂ ಅಧಿಕ ಜನರು ವೋಟ್​ ಮಾಡಿದ್ದಾರೆ. ಶೇಕಡ 99ರಷ್ಟು ರೇಟಿಂಗ್​ ಪಡೆಯುವಲ್ಲಿ ಕಾಂತಾರ ಯಶಸ್ವಿವಾಗಿದೆ. ಅಲ್ಲದೆ, ಕರುನಾಡಿನ ಕುವರನ ಈ ಸಿನಿಮಾಗೆ ದೇಶಾದ್ಯಂತ ಭಾರಿ ಬೇಡಿಕೆ ಶುರುವಾಗಿದ್ದು, ಹಿಂದಿಯಲ್ಲೂ ಕೂಡ ಕಾಂತಾರ ಧೂಳೆಬ್ಬಿಸಲು ಸಿದ್ಧವಾಗುತ್ತಿದೆ. ಇನ್ನು ಈ ಸಿನಿಮಾ ನೋಡಿದ ಗಣ್ಯರು, ನಿರ್ದೇಶಕರು, ರಾಜಕೀಯ ಧುರೀಣರು ಕಾಂತಾರವನ್ನು ಬಾಯಿತುಂಬಾ ಹಾಡಿ ಹೊಗಳಿದ್ದಾರೆ.

ಕರಾವಳಿ ಸಂಸ್ಕೃತಿಯ ಅನಾವರಣ, ದೈವ, ಭೂತಾರಾಧನೆ, ಭೂತ ಕೋಲದ ದೃಶ್ಯಗಳು ಸಿನಿಮಾಗೆ ಮೆರಗು ತಂದುಕೊಟ್ಟಿವೆ. ತೆರೆಮೇಲೆ ದೈವಾರಾಧನೆಯನ್ನು ನೋಡುವ ಜನರು ಪುಳಕಿತರಾಗುತ್ತಿದ್ದು, ಚಿತ್ರಮಂದಿರ ಒಂದು ದೇವಸ್ಥಾನದಂತೆ ಕಂಗೊಳಿಸುತ್ತಿದೆ. ಅಲ್ಲದೆ, ಕರಾವಳಿ ಜನರ ಧಾರ್ಮಿಕ ನಂಬಿಕೆಗಳು, ಅಲ್ಲಿನ ಜನರ ಭಾವನೆಗಳನ್ನು ಅತ್ಯುತ್ತಮವಾಗಿ ತೋರಿಸುವ ಯತ್ನವನ್ನು ರಿಷಬ್ ಅಚ್ಚುಕಟ್ಟಾಗಿ ಮಾಡಿದ್ದಾರೆ. 

ಇದನ್ನೂ ಓದಿ: ವಾಮಮಾರ್ಗದಲ್ಲಿ ನನಗೆ ನೂರು ಆಟ ಗೊತ್ತಿದೆ: ಪರಭಾಷಾ ಚಿತ್ರಗಳ ಹಾವಳಿ ವಿರುದ್ಧ ನಟ ಜಗ್ಗೇಶ್ ಗುಡುಗು

ʼಹೊಂಬಾಳೆ ಫಿಲ್ಮ್ಸ್​ʼ ಅಡಿಯಲ್ಲಿ ನಿರ್ಮಾಣವಾಗಿದ್ದ ‘ಕಾಂತಾರ’ವನ್ನು ಕನ್ನಡದಲ್ಲಿ ಮಾತ್ರ ರಿಲೀಸ್‌ ಮಾಡಲಾಗಿತ್ತು. ಕನ್ನಡ ಗಡಿಯನ್ನೂ ಮೀರಿ ಪ್ರಪಂಚದ ಮೂಲೆ ಮೂಲೆಯಲ್ಲಿ ಕನ್ನಡದಲ್ಲೇ ಬಿಡುಗಡೆಯಾದ ಸಿನಿಮಾ ಪ್ರೇಕ್ಷಕ ದೇವರುಗಳಿಗೆ ಅಚ್ಚುಮೆಚ್ಚಿನ ಚಿತ್ರವಾಗಿದೆ. ಅಲ್ಲದೆ, ಪರಭಾಷಿಗರೂ ಸಹ ಸಿನಿಮಾವನ್ನು ನೋಡಲು ತುದಿಗಾಲಿನ ಮೇಲೆ ನಿಂತಿದ್ದಾರೆ. ಸದ್ಯ ಹಿಂದಿಯಲ್ಲಿ ಕಾಂತಾರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ರಿಷಬ್‌ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​, ಪ್ರಮೋದ್​ ಶೆಟ್ಟಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News