CT Ravi :ರೊಚ್ಚಿಗೆದ್ದ ಯಶ್‌ ಅಭಿಮಾನಿಗಳು.. ಸಮಾಧಾನ ಮಾಡಿದ ಸಿಟಿ ರವಿ!

ಯಶ್‌ ಅಭಿಮಾನಿಗಳ ಪ್ರತಿಭಟನೆ ವಿಷಯ ತಿಳಿದು ಶಾಸಕ ಸಿ.ಟಿ.ರವಿ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. 

Written by - Channabasava A Kashinakunti | Last Updated : Apr 13, 2022, 02:53 PM IST
  • ಕೆಜಿಎಫ್ -2 ಈಗಾಗಲೇ ರಾಜ್ಯವಷ್ಟೇ ಅಲ್ಲದೆ ವಿಶ್ವಾದ್ಯಂತ ಬಿಡುಗಡೆಗೆ ಕ್ಷಣಗಣನೆ
  • ನಾಳೆ ರಾಜ್ಯಾದ್ಯಂತ ಕೆಜಿಎಫ್ -2 ಬಿಡುಗಡೆಯಾಗುತ್ತಿದೆ
  • ನಾಳೆಯಿಂದ ಕೆಜಿಎಫ್‌-2 ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಿಸುವುದಾಗಿ ಸಿ.ಟಿ.ರವಿ ಭರವಸೆ
CT Ravi :ರೊಚ್ಚಿಗೆದ್ದ ಯಶ್‌ ಅಭಿಮಾನಿಗಳು.. ಸಮಾಧಾನ ಮಾಡಿದ ಸಿಟಿ ರವಿ! title=

ಚಿಕ್ಕಗಮಗಳೂರು : ಕೆಜಿಎಫ್ -2 ಈಗಾಗಲೇ ರಾಜ್ಯವಷ್ಟೇ ಅಲ್ಲದೆ ವಿಶ್ವಾದ್ಯಂತ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಸಿನಿಮಾ ನೋಡಲು ಅಭಿಮಾನಿಗಳು ತುಂಬಾ ಕಾತುರರಾಗಿದ್ದಾರೆ. ಆದರೆ ಚಿಕ್ಕಮಗಳೂರಿನಲ್ಲಿ ಮಾತ್ರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. 

ನಾಳೆ ರಾಜ್ಯಾದ್ಯಂತ ಕೆಜಿಎಫ್ -2 ಬಿಡುಗಡೆಯಾಗುತ್ತಿದೆ. ಆದ್ರೆ ಚಿಕ್ಕಮಗಳೂರಿನಲ್ಲಿ ಮಾತ್ರ ಈ ಚಿತ್ರ ಪ್ರದರ್ಶನ ಇಲ್ಲ. ಹಾಗಾಗಿ ಯಶ್‌ ಅಭಿಮಾನಿಗಳು ನಗರದ ನಾಗಲಕ್ಷ್ಮಿ ಥಿಯೇಟರ್‌ ಎದುರು ಪ್ರತಿಭಟನೆ ನಡೆಸಿದ್ದಾರೆ. ಥಿಯೇಟರ್‌ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಶ್‌ ಅಭಿಮಾನಿಗಳ ಪ್ರತಿಭಟನೆ ವಿಷಯ ತಿಳಿದು ಶಾಸಕ ಸಿ.ಟಿ.ರವಿ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. 

ಇದನ್ನೂ ಓದಿ : ತೂಫಾನ್‌ ಬಳಿಕ ಈಗ ಸುಲ್ತಾನ್‌ ಹವಾ.. ಬಿಡುಗಡೆಯಾದ ಒಂದೇ ಗಂಟೆಯಲ್ಲಿ ದಾಖಲೆ!!

ನಟ ಯಶ್‌ ಹಾಗೂ ವಿತರಕರ ಜೊತೆ ಮಾತನಾಡುತ್ತೇನೆ. ನಾಳೆಯಿಂದ ಕೆಜಿಎಫ್‌-2 ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಿಸುವುದಾಗಿ ಸಿ.ಟಿ.ರವಿ ಭರವಸೆ ನೀಡಿದ್ದಾರೆ. ಶಾಸಕರ ಭರವಸೆ ಹಿನ್ನೆಲೆ ಯಶ್‌ ಅಭಿಮಾನಿಗಳು ಪ್ರತಿಭಟನೆ ಕೈಬಿಟ್ಟಿದ್ದಾರೆ. 

ದೇಶ-ವಿದೇಶಗಳಲ್ಲಿ ಕೆಜಿಎಫ್-2 ಸಿನಿಮಾ ವೀಕ್ಷಿಸಿಲು ಕೋಟ್ಯಂತರ ಸಿನಿ ಪ್ರೇಮಿಗಳು ಕಾತುರರಾಗಿ ಕಾಯುತ್ತಿದ್ದಾರೆ. ಹಾಗೇ ಚಿಕ್ಕಮಗಳೂರಿನಲ್ಲೂ ಅಭಿಮಾನಿಗಳು ಈ ಚಿತ್ರಕ್ಕಾಗಿ ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ. ಹೀಗಿರುವಾಗ ಇಲ್ಲಿ ಪ್ರದರ್ಶನಕ್ಕೆ ಅವಕಾಶ ಇಲ್ಲದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. 

ಒಂದು ಅಂದಾಜಿನ ಪ್ರಕಾರ ಕೆಜಿಎಫ್ -2 ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ 1000 ಕೋಟಿ ರೂ.ಗೆ ಹೆಚ್ಚು ಗಳಿಕೆ ಮಾಡಲಿದೆ ಎಂದು ಹೇಳಲಾಗಿದೆ. ಈಗಾಗಲೇ ಆನ್‌ಲೈನ್‌ ಮೂಲಕ ಮುಂಗಡ ಬುಕ್ಕಿಂಗ್‌ ಪ್ರಾರಂಭವಾಗಿದ್ದು, ಹಿಂದಿ ಭಾಷಾ ಪ್ರದೇಶದಲ್ಲೇ ಇದುವರೆಗೆ ರೂ. 11.40 ಕೋಟಿ ಮೊತ್ತದ ಟಿಕೆಟ್‌ ಬುಕ್ಕಿಂಗ್‌ ಆಗಿದೆ. ಇನ್ನು ಕೆಜಿಎಫ್‌ ಚಾಪ್ಟರ್‌ - 2ನ ಐದು ಭಾಷಾ ಅವತರಣಿಕೆಗಳು ಸೇರಿ ರೂ. 20 ಕೋಟಿ ಮೊತ್ತದ ಮುಂಗಡ ಬುಕ್ಕಿಂಗ್‌ ಆಗಿದೆ. ಮೊದಲ ದಿನದ ಟಿಕೆಟ್‌ ದರ ರೂ. 1,450ರಿಂದ ರೂ. 2,000ವರೆಗೂ ಇದೆ. ಮೊದಲ ಪ್ರದರ್ಶನ ನಡುರಾತ್ರಿ 1 ಗಂಟೆಯಿಂದ ಆರಂಭವಾಗಲಿದೆ.

ಇದನ್ನೂ ಓದಿ : ಸೌತ್‌ ಇಂಡಿಯಾದಲ್ಲಿ ಹಿಂದಿ ಚಿತ್ರಗಳ ಹವಾ ಕಡಿಮೆಯಾಗಲು ಇದೇ ಮುಖ್ಯ ಕಾರಣ ಎಂದ ನಟ ಯಶ್‌!

ಏಪ್ರಿಲ್‌ 14ರಂದು ಕೆಜಿಎಫ್‌ ಚಾಪ್ಟರ್‌-2 ರಾಜ್ಯದ 500 ಏಕತೆರೆಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ. ತಮಿಳುನಾಡಿನಲ್ಲಿ 1 ಸಾವಿರ ಏಕತೆರೆಯ ಚಿತ್ರಮಂದಿರಗಳ ಪೈಕಿ 350 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ತೆಲುಗು ಭಾಷೆಯಲ್ಲೂ ಇದೇ ರೀತಿಯ ಪ್ರತಿಕ್ರಿಯೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News