ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಿಡುಗಡೆ ಆಗಿ ಒಂದು ವರ್ಷವಾಗುತ್ತಿರುವ ಬೆನ್ನಲ್ಲೆ ಯಶ್ರ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.ಶ್ರೀಲಂಕಾದಲ್ಲಿರುವ ನಟ ಯಶ್ ಅಲ್ಲಿನ ಬೋರ್ಡ್ ಆಫ್ ಇನ್ವೆಸ್ಟ್ಮೆಂಟ್ ಇನ್ ಶ್ರೀಲಂಕಾದ ಮುಖ್ಯಾಧಿಕಾರಿ ದಿನೇಶ್ ವೇರಕ್ಕೋಡಿ ಅವರನ್ನು ಭೇಟಿಯಾಗಿದ್ದು,ಶ್ರೀಲಂಕಾನಲ್ಲಿ ತಮ್ಮ ಸಿನಿಮಾದ ಕೆಲವು ದೃಶ್ಯಗಳ ಚಿತ್ರೀಕರಣ ಮಾಡಲು ಅನುಮತಿ ಕೋರಿದ್ದಾರೆ ಎನ್ನಲಾಗಿದೆ.
Last Time He Met Goa CM and Now Sri Lanka BOI Chairman inorder to take Permission For Shooting His Next Movie #Yash19
Sri Lanka and Goa are the Costal places , So #Yash19 will be Navy Based Action Thriller 🤙🔥#YashBoss pic.twitter.com/NlPjfe4Nko
— 𝐃𝐞𝐦𝐨𝐥𝐢𝐬𝐡 𝐘𝐚𝐬𝐡 𝐇𝐚𝐭𝐞𝐫𝐬™ (@Offl_DYH_Team) April 13, 2023
ಈ ಕುರಿತಾಗಿ ಸ್ವತಃ ಬಿಓಐನ ಮುಖ್ಯಾಧಿಕಾರಿ ದಿನೇಶ್ ವೀರಕ್ಕೋಡಿ ಮಾಹಿತಿ ಹಂಚಿಕೊಂಡಿದ್ದಾರೆ.ಯಶ್ ಅವರ 19ನೇ ಸಿನಿಮಾ ಬಗ್ಗೆ ಈಗಾಗಲೇ ಹಲವು ಗಾಳಿ ಸುದ್ದಿಗಳು ಹರಿದಾಡಿದ್ದು ಆದರೆ ಯಾವೊಂದು ಸಹ ಅಧಿಕೃತಗೊಂಡಿಲ್ಲ.ಆದರೆ ತಮ್ಮ ಮುಂದಿನ ಸಿನಿಮಾಕ್ಕೆ ಯಶ್ ಭರ್ಜರಿ ತಯಾರಿಯನ್ನಂತು ಮಾಡುತ್ತಿದ್ದಾರೆ.ಇದಕ್ಕೆ ಪೂರಕ ಎನ್ನುವಂತೆ ಯಶ್ ಕಳೆದ ಹಲವು ತಿಂಗಳಿಂದ ಸಿನಿಮಾಕ್ಕಾಗಿ ಸತತ ತಯಾರಿ ನಡೆಸಿದ್ದಾರೆ ಎನ್ನುವುದಂದು ದೃಢವಾಗಿದೆ.
ಯಶ್ ಇದೀಗ ಶ್ರೀಲಂಕಾನಲ್ಲಿದ್ದು ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣವನ್ನು ಅಲ್ಲಿ ಮಾಡಲು ಅನುಮತಿ ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.