close

News WrapGet Handpicked Stories from our editors directly to your mailbox

ಕ್ಯೂಟ್ ಫೋಟೋ ಜೊತೆ ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯ ಕೋರಿದ ಯಶ್-ರಾಧಿಕಾ!

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಎಲ್ಲರಿಗೂ ರಕ್ಷಾ ಬಂಧನ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ. 

Divyashree K Divyashree K | Updated: Aug 15, 2019 , 03:11 PM IST
ಕ್ಯೂಟ್ ಫೋಟೋ ಜೊತೆ ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯ ಕೋರಿದ ಯಶ್-ರಾಧಿಕಾ!

ಬೆಂಗಳೂರು: ಇಂದು ದೇಶಾದ್ಯಂತ ರಕ್ಷಾ ಬಂಧನ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಈ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಶುಭಾಶಯ ಕೋರಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್ ತಮ್ಮ ಸಹೋದರಿ ಜೊತೆಗಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲರಿಗೂ ರಕ್ಷಾಬಂಧನದ ಶುಭಾಶಯ ಕೋರಿದ್ದಾರೆ.

"Rocky ಇರುವಾಗಿ ನಿಶ್ಚಿಂತೆಯಿಂದ ಇರು, Rakhi ಇದ್ದಾಗ ನನಗ್ಯಾವ ಚಿಂತೆ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆ, ರಕ್ಷಾ ಬಂಧನದ ಶುಭಾಶಯಗಳು, ಜೈ ಹಿಂದ್" ಎಂದು ಬರೆದು, ತಮ್ಮ ಸಹೋದರಿ ರಾಖಿ ಕಟ್ಟಿರುವ ಫೋಟೋವೊಂದನ್ನು ಫೋಸ್ಟ್ ಮಾಡಿದ್ದಾರೆ. ಈ ಫಾಸ್ಟ್ ಗೆ 30 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 800ಕ್ಕೂ ಅಧಿಕ ಕಾಮೆಂಟ್ ಗಳು ಬಂದಿವೆ. 

ಮತ್ತೊಂದೆಡೆ ರಾಧಿಕಾ ಪಂಡಿತ್ ಸಹ ತನ್ನ ಸಹೋದರನಿಗೆ ರಕ್ಷಾಬಂಧನದ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಧಿಕ, "ನನ್ನ ಪ್ರೀತಿ ಮತ್ತು ರಾಖಿಯನ್ನು ಚಿಕಾಗೋಗೆ ಕಳುಹಿಸುತ್ತಿದ್ದೇನೆ. ಮಿಸ್ ಯು ಗೋಲು! ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆ, ರಕ್ಷಾ ಬಂಧನದ ಶುಭಾಶಯಗಳು, ಜೈ ಹಿಂದ್" ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಸಹೋದರ ಜೊತೆಗಿರುವ ಫೋಟೋ ಸಹ ಶೇರ್ ಮಾಡಿದ್ದಾರೆ.