ಆರ್‌ವಿ ವಿಶ್ವವಿದ್ಯಾಲಯದ ಟೀನ್‌ ಇಂಡಿಯಾ ಸಿನಿಮಾ ಪ್ರಶಸ್ತಿ(ಟಿಐಎಫ್‌ಎ) 2023 ವಿಜೇತರ ಪಟ್ಟಿ ಪ್ರಕಟ

ಸಿನಿಮಾರಂಗದ ಶ್ರೇಷ್ಠತೆ, ಕಲ್ಪನೆ ಮತ್ತು ಸೃಜನಶೀಲತೆಗೆ ವೇದಿಕೆ ಎನಿಸಿರುವ ಆರ್‌ವಿ ವಿಶ್ವವಿದ್ಯಾಲಯದ ಟೀನ್‌ ಇಂಡಿಯಾ ಸಿನಿಮಾ ಪ್ರಶಸ್ತಿ(ಟಿಐಎಫ್‌ಎ) 2023 ಘೋಷಣೆಯಾಗಿದ್ದು,  ವಿವಿಧ ವಿಭಾಗಗಳಲ್ಲಿ ವಿಜೇತ ಒಂಬತ್ತು ಚಲನಚಿತ್ರಗಳ ಹೆಸರು ಬಹಿರಂಗಗೊಂಡಿದೆ. 

Written by - Manjunath N | Last Updated : Jun 2, 2023, 05:44 PM IST
  • ‘ಯುವ ಚಲನಚಿತ್ರ ನಿರ್ಮಾಣಕಾರರೊಂದಿಗೆ ತೊಡಗಿಸಿಕೊಳ್ಳಲು ಸಂತಸವಾಗುತ್ತದೆ
  • ಇದೊಂದು ಗಮನಾರ್ಹ ಅವಕಾಶ. ಚಲನಚಿತ್ರ ನಿರ್ಮಾಣವು ತಂಡದ ಪ್ರಯತ್ನವಾಗಿದ್ದು, ವಿವಿಧ ವಿಭಾಗಗಳನ್ನು ಒಳಗೊಂಡಿದೆ
  • ಲಿಬರಲ್‌ ಆರ್ಟ್‌ ವಿಶ್ವವಿದ್ಯಾಲಯವಾಗಿ, ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಕಾರ್ಯಕ್ರಮ ಇದಾಗಿದೆ
ಆರ್‌ವಿ ವಿಶ್ವವಿದ್ಯಾಲಯದ ಟೀನ್‌ ಇಂಡಿಯಾ ಸಿನಿಮಾ ಪ್ರಶಸ್ತಿ(ಟಿಐಎಫ್‌ಎ) 2023 ವಿಜೇತರ ಪಟ್ಟಿ ಪ್ರಕಟ  title=

ಬೆಂಗಳೂರು : ಸಿನಿಮಾರಂಗದ ಶ್ರೇಷ್ಠತೆ, ಕಲ್ಪನೆ ಮತ್ತು ಸೃಜನಶೀಲತೆಗೆ ವೇದಿಕೆ ಎನಿಸಿರುವ ಆರ್‌ವಿ ವಿಶ್ವವಿದ್ಯಾಲಯದ ಟೀನ್‌ ಇಂಡಿಯಾ ಸಿನಿಮಾ ಪ್ರಶಸ್ತಿ(ಟಿಐಎಫ್‌ಎ) 2023 ಘೋಷಣೆಯಾಗಿದ್ದು,  ವಿವಿಧ ವಿಭಾಗಗಳಲ್ಲಿ ವಿಜೇತ ಒಂಬತ್ತು ಚಲನಚಿತ್ರಗಳ ಹೆಸರು ಬಹಿರಂಗಗೊಂಡಿದೆ. ರಾಜಕೀಯ, ಸೆನ್ಸಾರ್‌ಶಿಪ್‌ ಮತ್ತು ಪ್ರಪಂಚದಾದ್ಯಂತದ ವಿಶ್ವ ಸಿನಿಮಾ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಚಲನಚಿತ್ರಗಳು ಇವಾಗಿವೆ. ಟಿಐಎಫ್‌ಎ, ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಮತ್ತು ಚಲನಚಿತ್ರ ನಿರ್ಮಾಣ ಕೌಶಲ್ಯಗಳನ್ನು ಪ್ರದರ್ಶಿಸಲು ವಾರ್ಷಿಕ ವೇದಿಕೆಯಾಗಿದ್ದು,  ಆರ್‌ವಿ ವಿವಿಯ ಕ್ಯಾಂಪಸ್‌ನಲ್ಲಿ  ನಡೆದ ಎರಡನೇ ಆವೃತಿಯಲ್ಲಿ ಪ್ರಪಂಚದಾದ್ಯಂತದ ಸುಮಾರು 70 ಕ್ಕೂ ಹೆಚ್ಚು ಸಿನಿಮಾಗಳಿದ್ದವು.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸಸ್ ಸಂಸ್ಥಾಪಕ ಮತ್ತು ಪ್ರಾಧ್ಯಾಪಕ ಡಾ.ಪಿಯೂಷ್ ರಾಯ್, ‘ಪ್ರಶಸ್ತಿ ಮೊದಲ ಆವೃತಿ ಆರ್‌ವಿ ವಿವಿಯ ಬೇರೆ ಬೇರೆ ಶಾಲೆ, ಕಾಲೇಜುಗಳಿಂದ ಬಂದ 25 ಸಿನಿಮಾಗಳ ಪ್ರವೇಶದೊಂದಿಗೆ ಪ್ರಾಯೋಗಿಕವಾಗಿ ಪ್ರಾರಂಭವಾಗಿತ್ತು.  ಎರಡನೇ ಆವೃತಿಯೆ ಜಾಗತಿಕವಾಗಿದ್ದು, 50 ಚೊಚ್ಚಲ ಚಲನಚಿತ್ರಗಳು ಸೇರಿದಂತೆ ಐದು ಖಂಡಗಳಿಂದ 70 ಚಿತ್ರಗಳು ಪ್ರವೇಶ ಪಡೆದಿವೆ.  ನಮ್ಮ ಉತ್ಸಾಹಿ ಅಧ್ಯಾಪಕ ವರ್ಗ ಮತ್ತು ಸ್ಕೂಲ್ ಆಫ್ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ಸ್ಕೂಲ್ ಆಫ್ ಡಿಸೈನ್ ಅಂಡ್ ಇನ್ನೋವೇಶನ್‌ನ ವಿದ್ಯಾರ್ಥಿ ನಾಯಕರು ಮತ್ತು ಸ್ವಯಂಸೇವಕರ ಪರಿಶ್ರಮದಿಂದ ಈ ಪ್ರಗತಿ ಸಾಧ್ಯವಾಗಿದೆ’ ಎಂದರು.

ಇದನ್ನೂ ಓದಿ: ನಮ್ಮ ಸರ್ಕಾರ ಪೊಲೀಸ್ ಇಲಾಖೆಯನ್ನ ʼಕೇಸರಿಕರಣʼ ಮಾಡೋಕೆ ಬಿಡಲ್ಲ

ಪತ್ರಕರ್ತೆ, ಲೇಖಕಿ ಮತ್ತು ತೀರ್ಪುಗಾರ ಮಂಡಳಿ ಸದಸ್ಯೆ ಪ್ರಿಯಾಂಕಾ ಸಿನ್ಹಾ ಝಾ ಮಾತನಾಡಿ, ‘ಯುವ ಚಲನಚಿತ್ರ ನಿರ್ಮಾಣಕಾರರೊಂದಿಗೆ ತೊಡಗಿಸಿಕೊಳ್ಳಲು ಸಂತಸವಾಗುತ್ತದೆ. ಇದೊಂದು ಗಮನಾರ್ಹ ಅವಕಾಶ. ಚಲನಚಿತ್ರ ನಿರ್ಮಾಣವು ತಂಡದ ಪ್ರಯತ್ನವಾಗಿದ್ದು, ವಿವಿಧ ವಿಭಾಗಗಳನ್ನು ಒಳಗೊಂಡಿದೆ. ಲಿಬರಲ್‌ ಆರ್ಟ್‌ ವಿಶ್ವವಿದ್ಯಾಲಯವಾಗಿ, ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಕಾರ್ಯಕ್ರಮ ಇದಾಗಿದೆ’ಎಂದರು.ಇದಲ್ಲದೆ, ಅವರು ಚಲನಚಿತ್ರ ನಿರ್ಮಾಣದ ಮಾನದಂಡಗಳು ಮತ್ತು ನಿರ್ದೇಶಕರ ವ್ಯಕ್ತಿಗತ ಮೌಲ್ಯಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಮಹತ್ವವನ್ನು ಅವರು ಸಿನಿಮಾ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಚಿಂತನೆ-ಪ್ರಚೋದನೆಯ ಚರ್ಚೆಗಳನ್ನು ಉತ್ತೇಜಿಸುವ ಮತ್ತು ಸಿನಿಮಾ ಕ್ಷೇತ್ರದೊಳಗಿನ ವೈವಿಧ್ಯಮಯ ದೃಷ್ಟಿಕೋನಗಳತ್ತ ಬೆಳಕು ತೋರುವ ಧ್ಯೇಯವನ್ನು ಈ ಚಿತ್ರೋತ್ಸವ ಹೊಂದಿದೆ.

ಬೆಂಗಳೂರಿನ ಆರ್‌ವಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ವೈ.ಎಸ್.ಆರ್. ಮೂರ್ತಿ ಮಾತನಾಡಿ, ‘ಟಿಐಎಫ್‌ಎ 2023 ಉದಯೋನ್ಮುಖ ಕಲಾವಿದರು ಮತ್ತು ಉದ್ಯಮ ತಜ್ಞರು, ವಿಮರ್ಶಕರು ಮತ್ತು ಚಲನಚಿತ್ರ ಉತ್ಸಾಹಿಗಳ ನಡುವೆ ಸಂಪರ್ಕ ಸಾಧಿಸಲು ಶ್ರಮಿಸುತ್ತದೆ. ಈ ಚಿತ್ರೋತ್ಸವ ತಂಡದ ಕೆಲಸ, ಮೌಲ್ಯಮಾಪನ ಮತ್ತು ಮಾರ್ಗದರ್ಶನ, ಸಬಲೀಕರಣದ ನಿರೀಕ್ಷೆಗಳನ್ನು ಹೆಚ್ಚಿಸುತ್ತದೆ. ಈ ಕಲಾವಿದರು ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮತ್ತು ಚಲನಚಿತ್ರ ನಿರ್ಮಾಣದಂತಹ ಅತ್ಯಂತ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಛಾಪು ಮೂಡಿಸಿಕೊಳ್ಳಲು ಸಹಕಾರಿ’ಎಂದರು. ಟಿಐಎಫ್‌ಎ 2023 ಆಯ್ದ  ಕಿರುಚಿತ್ರಗಳ ಪ್ರದರ್ಶನಗಳ ಮೂಲಕ ಯುವ ಚಲನಚಿತ್ರ ನಿರ್ಮಾಣಕಾರರ ಸೃಜನಶೀಲ ಪ್ರತಿಭೆಯನ್ನು ಅನಾವರಣಗೊಳಿಸಿತು.

ಇದನ್ನೂ ಓದಿ: ಸಿದ್ದರಾಮಯ್ಯರೇ 5 ವರ್ಷ ಪೂರ್ಣಾವಧಿ ಸಿಎಂ, ಅಧಿಕಾರ ಹಂಚಿಕೆ ಇಲ್ಲ..!

ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ -

ಅತ್ಯುತ್ತಮ ಚಿತ್ರ - ಮೆಯಿಯು ಸಾಂಗ್, ಹುಝಿ, ಚೀನಾ

ಅತ್ಯುತ್ತಮ ನಿರ್ದೇಶಕ - ಕಾನ್ಸ್ಟಾಂಟಿನ್ ರೆಬರ್, ಟೇಕ್ ಫೈವ್, ಸ್ವಿಟ್ಜರ್ಲೆಂಡ್

ಅತ್ಯುತ್ತಮ ನಟ - ಯಶಸ್ ಬಣಕಾರ್, ಟೀನೇಜ್ ಶಾರ್ಟ್‌ಫಿಲಂ, ಭಾರತ

ಅತ್ಯುತ್ತಮ ಕಥೆ - ಆದ್ಯಾ ರೆಡ್ಡಿ ಯೆದುಲ್ಲಾ, ಕನಸು

ಅತ್ಯುತ್ತಮ ತಾಂತ್ರಿಕ ಸಾಧನೆ - ಸುಮೇಧ್ ಕೆ., ಅನಾತ್ಮ

ವಿಶೇಷ ಉಲ್ಲೇಖ - ಆಂಡ್ರ್ಯೂ ಟ್ಯಾನ್, ಬನಾನ ರಿಜೆನರೇಷನ್‌, ಆಸ್ಟ್ರೇಲಿಯಾ

ಅತ್ಯುತ್ತಮ ಚಲನಚಿತ್ರ ಪ್ರಬಂಧ ಮತ್ತು ಸಾಕ್ಷ್ಯಚಿತ್ರ - ಕೆಕೆ ರತ: ಸೆಲೆಬ್ರೇಶನ್ ಆಫ್ ಲೈಫ್, ಭಾರತ

ಬೆಸ್ಟ್ ಎನ್ಸೆಂಬಲ್ - ಫಾರ್ ಫ್ರಮ್ ಹೋಮ್, ಸ್ಪೇನ್

ಅತ್ಯುತ್ತಮ ಪ್ರಾಯೋಗಿಕ ಚಿತ್ರ - ಕಾಮ್ಯ ಸಂದೀಪ್ ಸುಬ್ರಹ್ಮಣ್ಯ, ದಿ ಕರೋಸೆಲ್

ಈ ಚಿತ್ರೋತ್ಸವದಲ್ಲಿ ಓಂ ಪುರಿ ಫೌಂಡೇಶನ್ ಮತ್ತು ಆರ್‌ವಿ ವಿಶ್ವವಿದ್ಯಾನಿಲಯದ ನಡುವಿನ ಪಾಲುದಾರಿಕೆ ಒಪ್ಪಂದಕ್ಕೆ(ಎಂಒಯು) ಸಹಿ ಹಾಕಲಾಯಿತು.

ಓಂ ಪುರಿ ಫೌಂಡೇಶನ್ ಮತ್ತು ಆರ್‌ವಿ ವಿಶ್ವವಿದ್ಯಾಲಯದ ನಡುವಿನ ಪಾಲುದಾರಿಕೆಯ ಕುರಿತು ಮಾತನಾಡಿದ ನಂದಿತಾ ಪುರಿ, ‘ಓಂ ಪುರಿ ಫೌಂಡೇಶನ್ ಅನ್ನು ಓಂ ಪುರಿ ಹೆಸರಿನಲ್ಲಿ ಸ್ಥಾಪಿಸಲಾಗಿದೆ. ಅವರು ಭಾರತಿ ಘೋಷ್‌ನಂತಹ ಸಾಕಷ್ಟು ಸಾಂಪ್ರದಾಯಿಕ ಚಲನಚಿತ್ರಗಳನ್ನು ಮಾಡಿದ್ದಾರೆ, ಇದು ನನ್ನ ಕೆಲವು ಚಲನಚಿತ್ರಗಳನ್ನು ಪ್ರೇರೇಪಿಸುವ ಪಂಡಿತ್ ನೆಹರೂ ಅವರ ಇತಿಹಾಸವನ್ನು ಆಧರಿಸಿದೆ. ಲಿಬರಲ್ ಆರ್ಟ್ಸ್, ಸಮೂಹ ಮಾಧ್ಯಮ, ಚಲನಚಿತ್ರದ ವಿದ್ಯಾರ್ಥಿಗಳಿಗೆ ಇತಿಹಾಸ ಪರಿಚಯ ಮತ್ತು ಉತ್ತಮ ಸಿನಿಮಾ ಪರಿಚಯಿಸುವುದು ಮುಖ್ಯ ಎಂದು ಭಾವಿಸುವುದರಿಂದ ನಾವು ಆರ್‌ವಿ ವಿಶ್ವವಿದ್ಯಾಲಯದೊಂದಿಗೆ ಪಾಲುದಾರರಾಗುತ್ತಿದ್ದೇವೆ. ಒಟ್ಟಾಗಿ, ಅತ್ಯುತ್ತಮ ಸಿನಿಮಾದೊಂದಿಗೆ ವಿದ್ಯಾರ್ಥಿಗಳ ಕಥೆ ಹೇಳುವ ಶಕ್ತಿ ವರ್ಧಿಸುವ ಗುರಿಯಿದೆ’ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News