Salaar trailer : ಯೂಟ್ಯೂಬ್‌ನಲ್ಲಿ ʼಸಲಾರ್‌ʼ ಸಂಚಲನ..! 24 ಗಂಟೆಯಲ್ಲಿ 100 ಮಿಲಿಯನ್‌ ವೀವ್ಸ್‌

Prabhas salaar movie : ಯೂಟ್ಯೂಬ್‌ನಲ್ಲಿ ಸಲಾರ್‌ ಅಬ್ಬರ ನಿಲ್ಲುವಂತೆ ಕಾಣುತ್ತಿಲ್ಲ. ಟ್ರೇಲರ್‌ ಬಿಡುಗಡೆಯಾಗಿ 2 ದಿನ ಕಳೆದರೂ ಸಹ ವೀಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಧ್ಯ ವೀವ್ಸ್‌ನಲ್ಲಿ ಪ್ರಶಾಂತ್‌ ನೀಲ್‌ ನಿರ್ದೇಶನಕ ಪ್ರಭಾಸ್‌ ನಟನೆಯ ಸಲಾರ್‌ ಹೊಸ ದಾಖಲೆ ಬರೆದಿದೆ.

Written by - Krishna N K | Last Updated : Dec 3, 2023, 01:56 PM IST
  • ಯೂಟ್ಯೂಬ್‌ನಲ್ಲಿ ದಾಖಲೆ ಬರೆದ ಸಲಾರ್‌ ಸಿನಿಮಾ.
  • ಟ್ರೇಲರ್‌ ಬಿಡುಗಡೆಯಾಗಿ 2 ದಿನ ಕಳೆದರೂ ಸಹ ವೀಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇದೆ.
  • ಸಲಾರ್‌ ಟ್ರೇಲರ್‌ ರಿಲೀಸ್‌ ಆದ 24 ಗಂಟೆಗಳಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದಿದೆ.
Salaar trailer : ಯೂಟ್ಯೂಬ್‌ನಲ್ಲಿ ʼಸಲಾರ್‌ʼ ಸಂಚಲನ..! 24 ಗಂಟೆಯಲ್ಲಿ 100 ಮಿಲಿಯನ್‌ ವೀವ್ಸ್‌ title=

Salaar Trailer : ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಬಹುನಿರೀಕ್ಷಿತ ಸಿನಿಮಾ ಸಲಾರ್ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದ ಟ್ರೇಲರ್ ನಿನ್ನೆ (ಡಿಸೆಂಬರ್ 1) ಬಿಡುಗಡೆಯಾಯಿತು. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ಯೂಟ್ಯೂಬ್‌ನಲ್ಲಿ ದಾಖಲೆ ಸೃಷ್ಟಿಸಿದೆ. 

ಹೌದು.. ಸಲಾರ್ ಟ್ರೇಲರ್‌ ರಿಲೀಸ್‌ ಆದ 24 ಗಂಟೆಗಳಲ್ಲಿ 100 ಮಿಲಿಯನ್ (10 ಕೋಟಿ) ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಕುರಿತು ಸ್ವತಃ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡು ಮಾಹಿತಿ ನೀಡಿದೆ. 

ಇದನ್ನೂ ಓದಿ:ಸದ್ದಿಲ್ಲದೆ ಮುಕ್ತಾಯವಾಗಿದೆ "ಕಾಂಗರೂ" ಚಿತ್ರದ ಚಿತ್ರೀಕರಣ

ಸಲಾರ್ ತೆಲುಗು ಟ್ರೇಲರ್ 35 ಮಿಲಿಯನ್ ವೀವ್ಸ್ ಪಡೆದಿದ್ದರೆ, ಹಿಂದಿ ಟ್ರೈಲರ್ 57 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ, ಕನ್ನಡ 10 ಮಿಲಿಯನ್‌ ವೀವ್ಸ್‌ ಗಳಿಸಿದ್ದು, ಇತರ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರ ಡಿಸೆಂಬರ್ 22 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. 

ಚಿತ್ರದಲ್ಲಿ ಪ್ರಭಾಸ್ ದೇವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಡಾರ್ಲಿಂಗ್ ಗೆಳೆಯನ ಪಾತ್ರದಲ್ಲಿ ನಟ ಪೃಥ್ವಿರಾಜ್ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು, ಶ್ರುತಿ ಹಾಸನ್, ಬಾಬಿ ಸಿಂಹ, ಟಿನ್ನು ಆನಂದ್, ಈಶ್ವರಿ ಆನಂದ್, ಶ್ರೀಯಾ ರೆಡ್ಡಿ, ರಾಮಚಂದ್ರರಾಜು ಸೇರಿದಂತೆ ಹಲವು ಪ್ರಮುಖ ನಟರು ಈ ಸಿನಿಮಾದಲ್ಲಿದ್ದಾರೆ. ಸಲಾರ್‌ಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News