ಸಮಂತಾ ಅಭಿನಯದ ಯಶೋದಾ ಮೂವಿ ಟೀಸರ್ ಸೆ.09ಕ್ಕೆ ಬಿಡುಗಡೆ

ಸಮಂತಾ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರವಾದ ‘ಯಶೋದಾ’ದ ಟೀಸರ್ ಸೆ. 09ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

Written by - Zee Kannada News Desk | Edited by - Manjunath N | Last Updated : Sep 1, 2022, 11:59 AM IST
  • ಈಗ ನಿರ್ದೇಶಕರಾದ ಹರಿ-ಹರೀಶ್ ಈ ಟೀಸರ್ ಮೂಲಕ ಪ್ರೇಕ್ಷಕರಲ್ಲಿ ಇನ್ನಷ್ಟು ಎದೆಬಡಿತ ಹೆಚ್ಚಿಸುವುದಕ್ಕೆ ಸಿದ್ಧರಾಗಿದ್ದಾರೆ.
  • ಈಗಾಗಲೇ ಟೀಸರ್ ಬಿಡುಗಡೆ ಘೋಷಣೆ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಪೋಸ್ಟರ್ ವೀಕ್ಷಕರ ಗಮನಸೆಳೆದಿದೆ.
ಸಮಂತಾ ಅಭಿನಯದ ಯಶೋದಾ ಮೂವಿ ಟೀಸರ್ ಸೆ.09ಕ್ಕೆ ಬಿಡುಗಡೆ title=

ಬೆಂಗಳೂರು: ಸಮಂತಾ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರವಾದ ‘ಯಶೋದಾ’ದ ಟೀಸರ್ ಸೆ. 09ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ಇದಕ್ಕೂ ಮುನ್ನ, ಬಿಡುಗಡೆಯಾದ ಚಿತ್ರದ ಸ್ನೀಕ್ ಪೀಕ್, ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಈಗ ನಿರ್ದೇಶಕರಾದ ಹರಿ-ಹರೀಶ್ ಈ ಟೀಸರ್ ಮೂಲಕ ಪ್ರೇಕ್ಷಕರಲ್ಲಿ ಇನ್ನಷ್ಟು ಎದೆಬಡಿತ ಹೆಚ್ಚಿಸುವುದಕ್ಕೆ ಸಿದ್ಧರಾಗಿದ್ದಾರೆ. ಈಗಾಗಲೇ ಟೀಸರ್ ಬಿಡುಗಡೆ ಘೋಷಣೆ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಪೋಸ್ಟರ್ ವೀಕ್ಷಕರ ಗಮನಸೆಳೆದಿದೆ.

‘ಯಶೋದಾ’ ಚಿತ್ರವು ಮೂಡಿಬಂದಿರುವ ಬಗ್ಗೆ ಖುಷಿಯಾಗಿರುವ ಶ್ರೀದೇವಿ ಮೂವೀಸ್ನ ನಿರ್ಮಾಪಕ ಶಿವಲೆಂಕ ಕೃಷ್ಣಪ್ರಸಾದ್, ಈ ಚಿತ್ರವನ್ನು ಐದು ಭಾಷೆಗಳಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ.

ಇದನ್ನೂ: ಗಣೇಶ ಚತುರ್ಥಿ ಹಿನ್ನೆಲೆ ಚಾಮರಾಜಪೇಟೆ ಈದ್ಗಾ ಮೈದಾನದ ಸುತ್ತ ಖಾಕಿ ಸರ್ಪಗಾವಲು

ಸಮಂತಾ ಜತೆಗೆ ಈ ಚಿತ್ರದಲ್ಲಿ ವರಲಕ್ಷ್ಮೀ ಶರತ್ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮ, ಸಂಪತ್ ರಾಜ್, ಶತ್ರು, ಮಧಿರಿಮಾ, ಕಲ್ಪಿಕಾ ಗಣೇಶ್, ದಿವ್ಯ ಶ್ರೀಪಾದ, ಪ್ರಿಯಾಂಕಾ ಶರ್ಮ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ಯಶೋದಾ’ ಚಿತ್ರಕ್ಕೆ ಮಣಿಶರ್ಮ ಸಂಗೀತ ಸಂಯೋಜಿಸಿದ್ದು, ಎಂ. ಸುಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಪುಲಗಂ ಚಿನ್ನಾರಾಯಣ ಮತ್ತು ಡಾ ಚಲ್ಲ ಭಾಗ್ಯಲಕ್ಷ್ಮೀ ಅವರ ಸಂಭಾಷಣೆ, ಚಂದ್ರಬೋಸ್ ಮತ್ತು ರಾಮಜೋಗಯ್ಯ ಶಾಸ್ತ್ರಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ.
‘ಯಶೋದಾ’ ಚಿತ್ರವು ಸದ್ಯದಲ್ಲೇ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News