Rakshit Shetty : ಬರ್ತ್ ಡೇ ಸಂಭ್ರಮದಲ್ಲಿ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’

ಸಾಕಷ್ಟು ವಿಶೇಷತೆಯೊಂದಿಗೆ ರಿಲೀಸ್‌ ಆಗಿದ್ದ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ(Simple Agi Ondh Love Story) ದೊಡ್ಡ ಹಿಟ್‌ ಕಂಡಿತ್ತು.

Written by - Malathesha M | Edited by - Puttaraj K Alur | Last Updated : Mar 9, 2022, 05:36 PM IST
  • ಕನ್ನಡಿಗರ ಮನಗೆದ್ದ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ಗೆ ಬರ್ತ್‌ ಡೇ ಸಂಭ್ರಮ
  • ರಕ್ಷಿತ್ ಶೆಟ್ಟಿಗೆ ಬ್ರೇಕ್ ಕೊಟ್ಟಿದ್ದ ಈ ಸಿನಿಮಾ ರಿಲೀಸ್ ಆಗಿ 9 ವರ್ಷ
  • ಸಿನಿ ಪ್ರೇಮಿಗಳಿಗೆ ಧನ್ಯವಾದ ತಿಳಿಸಿದ ಸಿಂಪರ್ ಸ್ಟಾರ್ ರಕ್ಷಿತ್ ಶೆಟ್ಟಿ
Rakshit Shetty : ಬರ್ತ್ ಡೇ ಸಂಭ್ರಮದಲ್ಲಿ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’   title=
‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ಗೆ ಬರ್ತ್‌ ಡೇ ಸಂಭ್ರಮ  

ಬೆಂಗಳೂರು: ಅದು ಕನ್ನಡಿಗರ ಮನಗೆದ್ದ ಸಿಂಪಲ್‌ ಸಿನಿಮಾ. ಸಿಂಪಲ್‌ ಆಗಿ ಶೂಟ್‌ ಆದ್ರೂ, ಅದರ ಅದ್ಧೂರಿ ಕಥೆ ಕನ್ನಡಿಗರ ಮನಗೆದ್ದಿತ್ತು. ರಕ್ಷಿತ್‌ ಶೆಟ್ಟಿ(Rakshit Shetty) ಅವರ ಸಿನಿ ಕರಿಯರ್‌ ಗೂ ಈ ಸಿನಿಮಾ ದೊಡ್ಡ ಬ್ರೇಕ್‌ ಕೊಟ್ಟಿತ್ತು. ಹಾಗೆಯೇ ಕನ್ನಡಕ್ಕೆ ಒಬ್ಬ ಹೊಸ ಸ್ಟಾರ್‌ ನಿರ್ದೇಶಕನನ್ನು ವೆಲ್‌ ಕಂ ಮಾಡಿತ್ತು. ಅಂದಹಾಗೆ ನಾವು ಹೇಳ್ತಾ ಇರೋದು ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’(Simple Agi Ondh Love Story)  ಸಿನಿಮಾ ಬಗ್ಗೆ. ಅರೆ ಯಾಕಪ್ಪಾ ಇದೀಗ ಈ ಸಿನಿಮಾ ಮಾತು ಅಂದ್ರಾ..? ಅದನ್ನೇ ಹೇಳ್ತೀವಿ ಮುಂದೆ ಓದಿ…

ಅದೇ ಮಾತು.. ಅದೇ ನೋಟ... ಅಂತಾ ಹಾಡು ಗುನುಗುತ್ತಾ ಸಿಂಪಲ್ಲಾಗಿ ಎಂಟ್ರಿಯಾದ ರಕ್ಷಿತ್‌ ಶೆಟ್ಟಿ ಹಾಗೂ ಶ್ವೇತಾ ಶ್ರೀವಾತ್ಸವ್(Shwetha Srivatsav) ಜೋಡಿ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಮೂಲಕ ಕಮಾಲ್‌ ಮಾಡಿತ್ತು. ಒಂದು ದೊಡ್ಡ ಬ್ರೇಕ್‌ ಗಾಗಿ ಕಾದಿದ್ದ ನಟ ರಕ್ಷಿತ್‌ ಶೆಟ್ಟಿ ಮತ್ತು ಶ್ವೇತಾ ಶ್ರೀವಾತ್ಸವ್ ಅವರಿಗೆ ಈ ಚಿತ್ರ ದೊಡ್ಡ ಹೈಪ್‌ ನೀಡಿತ್ತು. ಹಾಗೆಯೇ ಸಿಂಪಲ್‌ ಸುನಿ(Simple Suni)ಯಂತಹ ಸ್ಟಾರ್‌ ಡೈರೆಕ್ಟರ್‌ ಕನ್ನಡ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಲು ಇದೇ ಚಿತ್ರ ಕಾರಣವಾಯಿತು.

ಇದನ್ನೂ ಓದಿ: 11/03 12:46 Save This Date: ಉಪ್ಪಿ ಅಭಿಮಾನಿಗಳಿಗೆ ಸಿಗಲಿದೆ ಬಿಗ್ ಸರ್ಪ್ರೈಸ್!

ಖುಷಿಯಲ್ಲಿ ರಕ್ಷಿತ್‌ ಶೆಟ್ಟಿ

ಅರೆರೆ... ಈ ಸಿನಿಮಾ ಬಂದು ಹಲವು ವರ್ಷಗಳೇ ಕಳೆದಿವೆ. ಈಗೇನು ಇದರ ವಿಶೇಷತೆ ಅಂದ್ರಾ? ಆ ವಿಶೇಷತೆ ಏನಂದ್ರೆ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’(Simple Agi Ondh Love Story) ಸಿನಿಮಾ ರಿಲೀಸ್‌ ಆಗಿ ಬರೋಬ್ಬರಿ 9 ವರ್ಷಗಳೇ ಉರುಳಿವೆ. ಈ ಮೂಲಕ 10 ವಸಂತಕ್ಕೆ ಕಾಲಿಟ್ಟಿದೆ ಈ ಸಿನಿಮಾ. ಈ ಬಗ್ಗೆ ಟ್ವಿಟ್ಟರ್‌ ನಲ್ಲಿ ಸಂತಸ ಹಂಚಿಕೊಂಡಿರುವ ನಟ ರಕ್ಷಿತ್‌ ಶೆಟ್ಟಿ, ‘ಸಿನಿಮಾ ಬಿಡುಗಡೆಯಾಗಿ 9 ವರ್ಷ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು’ ಅಂತಾ ಬರೆದುಕೊಂಡಿದ್ದಾರೆ.

ಅಭಿಮಾನಿಗಳ ಸಂಭ್ರಮ

ಸಾಕಷ್ಟು ವಿಶೇಷತೆಯೊಂದಿಗೆ ರಿಲೀಸ್‌ ಆಗಿದ್ದ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ(Simple Agi Ondh Love Story Cinema) ದೊಡ್ಡ ಹಿಟ್‌ ಕಂಡಿತ್ತು. ಹಾಗೆಯೇ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದ ಈ ಚಿತ್ರದ ಹಿಂದೆ ಹೊಸಬರ ತಂಡದ ಕೈಚಳಕವಿತ್ತು. ಈ ಸಿನಿಮಾ ಸೂಪರ್ ಡೂಪರ್ ಹಿಟ್‌ ಆಗುತ್ತೆ ಅನ್ನೋ ಊಹೆ ಕೂಡ ಯಾರಿಗೂ ಇರಲಿಲ್ಲ. ಆದರೆ ಚಿತ್ರದ ಕಥೆ, ಸ್ಕ್ರೀನ್‌ ಪ್ಲೇ ಮತ್ತು ಚಿತ್ರದ ಹಾಡುಗಳು ಇಡೀ ಸಿನಿಮಾಗೆ ಹೊಸ ಹುರುಪು ನೀಡಿ ಕನ್ನಡಿಗರ ಹೃದಯ ಗೆದ್ದಿತ್ತು.

ಇದನ್ನೂ ಓದಿ: ಲಕ್ಸ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಕನ್ನಡದ ಈ ಬಿಷಪ್ ಕಾಟನ್ ಬೆಡಗಿ ...!

RJ ರಚನಾ ನೆನಪು

ಚಿತ್ರದಲ್ಲಿ ಕುಶಾಲ್ ಆಗಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡರೆ, ಖುಷಿಯಾಗಿ ಶ್ವೇತಾ ಶ್ರೀವಾತ್ಸವ್(Shwetha Srivatsav) ಕಮಾಲ್‌ ಮಾಡಿದ್ದರು. ಇನ್ನು ಇತ್ತೀಚೆಗೆ ನಮ್ಮನ್ನೆಲ್ಲಾ ಅಗಲಿದೆ ಮಾತಿನ ಮಲ್ಲಿ ಖ್ಯಾತಿ ರಚನಾ ಅವರು RJ ಪಾತ್ರದಲ್ಲಿ ಮಿಂಚಿ‌ ಪ್ರೇಕ್ಷಕರನ್ನು ಸೆಳೆದಿದ್ದರು. ಇಷ್ಟೇ ಅಲ್ಲದೆ ಶ್ರೀನಗರ ಕಿಟ್ಟಿ ಲವ್ ಗುರು ಪಾತ್ರದಲ್ಲಿ ಅತಿಥಿ ಪಾತ್ರದಲ್ಲಿ ಎಂಟ್ರಿಕೊಟ್ಟು ಸಿನಿಮಾಗೆ ಸಾಥ್‌ ನೀಡಿದ್ದರು.

ಒಟ್ಟಾರೆ ಹೇಳೋದಾದ್ರೆ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ ಇನ್ನೂ ಹಲವು ವರ್ಷಗಳೇ ಉರುಳಿದರೂ ಕನ್ನಡಿಗರ ಮನದಲ್ಲಿ ಹಚ್ಚ ಹಸಿರಾಗಿ ಉಳಿಯುತ್ತದೆ. ಅದರಲ್ಲೂ ಈ ಸಿನಿಮಾದ ಹಾಡುಗಳು ಈಗಲೂ ಯಂಗ್‌ ಜೆನರೇಷನ್‌ಗೆ ಹಾಟ್‌ ಫೇವರಿಟ್ ಆಗಿವೆ.‌ ಇಂದಿಗೂ ಕೂಡ ಲವರ್ಸ್‌ ಬಾಯಲ್ಲೂ ಈ ಸಿನಿಮಾದ ಹಾಡುಗಳು ನಲಿದಾಡುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News