ಸಾರಾ ಅಲಿ ಖಾನ್ ಗೆ KISS ಮಾಡಲು ಮುಂದಾದ ಯುವಕ... ಮುಂದೇನಾಯ್ತು?

ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಕತ್ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಸಾರಾ ಪೇಚಿಗೆ ಸಿಲುಕಿದ ಹಾಗೆ ಕಂಡುಬಂದಿದೆ.

Updated: Jan 10, 2020 , 01:14 PM IST
ಸಾರಾ ಅಲಿ ಖಾನ್ ಗೆ KISS ಮಾಡಲು ಮುಂದಾದ ಯುವಕ... ಮುಂದೇನಾಯ್ತು?

ನವದೆಹಲಿ: ಅತಿ ಶೀಘ್ರದಲ್ಲಿಯೇ ಖ್ಯಾತ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಕಾರ್ತಿಕ್ ಆರ್ಯನ್ ಅಭಿನಯದ ಅವರ ಮುಂಬರುವ ಚಿತ್ರ 'ಲವ್ ಆಜ್ ಕಲ್ 2' ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಹಿಂದಿನ ಚಿತ್ರ 'ಸಿಂಬಾ' ಬಿಡುಗಡೆಯಾಗಿ ತಿಂಗಳುಗಳೇ ಗತಿಸಿವೆ. ಆದರೂ ಕೂಡ ಸಾರಾ ಒಂದಿಲ್ಲ ಒಂದು ಕಾರಣಕ್ಕೆ ಚರ್ಚೆಯಲ್ಲಿ ಇದ್ದೆ ಇರುತ್ತಾರೆ. ಒಮ್ಮೆ ಕಾರ್ತಿಕ್ ಆರ್ಯನ್ ಅವರ ಜೊತೆಗಿನ ಫ್ರೆಂಡ್ ಶಿಪ್ ಕಾರಣ ಮತ್ತೊಮ್ಮೆ ಬಿಕಿನಿ ಚಿತ್ರ ಹಂಚಿಕೊಂಡು ಸಾರಾ ಚರ್ಚೆ ಹುಟ್ಟು ಹಾಕುತ್ತಲೇ ಇದ್ದಾರೆ. ಸದ್ಯ ಸಾರಾ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.

ಕಪ್ಪು ಬಣ್ಣದ ಶಾರ್ಟ್ ಹಾಗೂ ಬಿಳಿ ಬಣ್ಣದ ಟಾಪ್ ಧರಿಸಿ ಜಿಮ್ ವೊಂದರಿಂದ ಹೊರಬರುತ್ತಿದ್ದ ಸಾರಾ ತುಂಬಾ ಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಛಾಯಾಗ್ರಾಹಕರು ಅವರ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ. ಅಷ್ಟೇ ಅಲ್ಲ ಅಲ್ಲಿ ನೆರೆದಿದ್ದ ಅವರ ಅಭಿಮಾನಿಗಳು ಸಾರಾ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಈ ವೇಳೆ ಓರ್ವ ಅಭಿಮಾನಿ ಸಾರಾ ಅವರ ಜೊತೆ ಕೈ ಮಿಲಾಯಿಸಲು ಮುಂದಾಗಿದ್ದಾನೆ. ಈ ವೇಳೆ ಸ್ಮೈಲ್ ನೀಡಿ ಕೈ ಕುಲುಕಲು ಮುಂದಾದ ಸಾರಗೆ ಆ ಯುವಕ ಅವರ ಕೈಗೆ ಕಿಸ್ ನೀಡಲು ಪ್ರಯತ್ನಿಸಿದ್ದಾನೆ. ಇದನ್ನು ಮನಗಂಡ ಸಾರಾ ಅಂಗರಕ್ಷಕರು ಆತನನ್ನು ಅಲ್ಲಿಂದ ಓಡಿಸಿದ್ದಾರೆ. ಈ ಸಂದರ್ಭವನ್ನು ಸಾರಾ ತುಂಬಾ ಆತ್ಮವಿಶ್ವಾಸ ಮತ್ತು ನಗುವಿನ ಮೂಲಕ ನಿಭಾಯಿಸಿದ್ದಾರೆ. ಆದರೆ, ಅಭಿಮಾನಿಯ ಈ ರೀತಿಯ ವರ್ತನೆಗಳು ಸ್ಟಾರ್ಸ್ ಗಳನ್ನು ಅಭಿಮಾನಿಗಳಿಂದ ದೂರ ಮಾಡುತ್ತವೆ ಎಂಬುದು ಮಾತ್ರ ನಿಜ.

ಇತ್ತೀಚೆಗಷ್ಟೇ ತಾಯಿಯ ಜೊತೆ ಮಾಲ್ಡೀವ್ಸ್ ಪ್ರವಾಸದಿಂದ ಸಾರಾ ಮರಳಿದ್ದಾರೆ. ಅವರ ಮಾಲ್ಡೀವ್ಸ್ ಪ್ರವಾಸದ ವೇಳೆ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಬಿಕಿನಿ ಫೋಟೋಗಳನ್ನು ಹಂಚಿಕೊಂಡು ಸಕತ್ ಸುದ್ದಿ ಮಾಡಿದ್ದರು. ಸಾರಾ ಅವರ ಮುಂಬರುವ ಪ್ರಾಜೆಕ್ಟ್ ಗಳ ಕುರಿತು ಹೇಳುವುದಾದರೆ, ಶೀಘ್ರದಲ್ಲಿಯೇ ಅವರು ಕಾರ್ತಿಕ್ ಆರ್ಯನ್ ಅಭಿನಯದ 'ಲವ್ ಆಜ್ ಕಲ್ 2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರುಣ್ ಧವನ್ ಹಾಗೂ ಸಾರಾ ಅಭಿನಯದ 'ಕೂಲಿ ನಂ 1' ಚಿತ್ರದ ಚಿತ್ರೀಕರಣ ಕೂಡ ಬಹುತೇಕ ಪೂರ್ಣಗೊಂಡಿದೆ. ಅವರ ಖಾಸಗಿ ಜೀವನದ ಕುರಿತು ಹೇಳುವುದಾದರೆ ಇತ್ತೀಚೆಗಷ್ಟೇ ಕರಣ್ ಜೋಹರ್ ಅವರ ಷೋನಲ್ಲಿ ಕಾಣಿಸಿಕೊಂಡಿದ್ದ ಸಾರಾ 'ಕಾರ್ತಿಕ್ ಆರ್ಯನ್' ಅವರನ್ನು ತಮ್ಮ ಕೃಷ್ ಎಂದು ಹೇಳಿದ್ದರು. ಬಳಿಕ 'ಇಮ್ತಿಯಾಜ್ ಅಲಿ ನಿರ್ದೇಶನದ 'ಲವ್ ಆಜ್ ಕಲ್ 2' ಚಿತ್ರದ ಚಿತ್ರೀಕರಣದ ವೇಳೆ ಅವರ ನಡುವಿನ ಆತ್ಮೀಯತೆಯ ಕುರಿತು ಚರ್ಚೆಗಳು ಬಿ-ಟೌನ್ ನಿಂದ ಕೇಳಿಬರಲಾರಂಭಿಸಿದ್ದವು. ಆದರೆ, ಸಾರಾ ತಾಯಿ ಅಮೃತಾ ಸಿಂಗ್ ತಮ್ಮ ಪುತ್ರಿ ಸದ್ಯ ತಮ್ಮ ಕರಿಯರ್ ಮೇಲೆ ಫೋಕಸ್ ಮಾಡಬೇಕು ಎಂದು ಬಯಸಿದ ಕಾರಣ ಸಾರಾ-ಕಾರ್ತಿಕ್ ಅಂತರ ಕಾಯ್ದುಕೊಂಡಿದ್ದಾರೆ.