Fan Kissed Shah Rukh Khan Video Viral: ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್ ಟನೆ ಮತ್ತು ನಡವಳಿಕೆಯಿಂದ ಅಭಿಮಾನಿಗಳ ಮನಗೆಲ್ಲುತ್ತಾರೆ. ಇತ್ತೀಚೆಗೆ ಶಾರುಖ್ ಜೊತೆ ಒಂದು ಘಟನೆ ನಡೆದಿದೆ. ನಟ ಶಾರುಖ್ ಖಾನ್ ನಿನ್ನೆ ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಲ್ಲಿ ಅಭಿಮಾನಿಯೊಬ್ಬರು ಮೊದಲು ಶಾರುಖ್ ಖಾನ್ ಅವರ ಕೈಯನ್ನು ಹಿಡಿದರು. ನಂತರ ಕೈ ಗೆ ಮುತ್ತುಕೊಟ್ಟರು. ಅಭಿಮಾನಿಯ ಈ ಪ್ರೀತಿಯ ಬಗ್ಗೆ ಶಾರುಖ್ ಖಾನ್ ಅವರ ಪ್ರತಿಕ್ರಿಯೆ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: 15ನೇ ವಯಸ್ಸಿಗೆ ನಾಯಕಿ.. 100ಕ್ಕೂ ಹೆಚ್ಚು ಚಿತ್ರಗಳು.. ಈ ಚೆಲುವೆ ಯಾರೆಂದು ನೆನಪಿದೆಯಾ?
ಮಂಗಳವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಘಟನೆ ಜರುಗಿದೆ. ಶಾರುಖ್ ಖಾನ್ ಜೊತೆಗೆ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಇದ್ದರು. ಶಾರುಖ್ ಖಾನ್ ತಮ್ಮ ಐಷಾರಾಮಿ ಕಾರಿನಿಂದ ಇಳಿದು ವಿಮಾನ ನಿಲ್ದಾಣವನ್ನು ಪ್ರವೇಶಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಗ ಶಾರುಖ್ ಪಾಸ್ ಪೋರ್ಟ್ ಮತ್ತು ಟಿಕೆಟ್ ಪರಿಶೀಲಿಸುತ್ತಿದ್ದಾಗ ಅಭಿಮಾನಿಯೊಬ್ಬರು ಕಿಂಗ್ ಖಾನ್ ಅವರನ್ನು ಭೇಟಿಯಾಗಲು ಬಂದರು. ಶಾರುಖ್ ಕೂಡ ಅಭಿಮಾನಿಗೆ ಹಲೋ ಎಂದು ಹೇಳಿದರು. ನಂತರ ವ್ಯಕ್ತಿ ಮೊದಲು ನಟನ ಕೈಯನ್ನು ಹಿಡಿದು ಹಣೆಗೆ ಮುಟ್ಟಿಸಿಕೊಂಡನು. ನಂತರ ಕೈ ಗೆ ಕಿಸ್ ಕೊಟ್ಟಿದ್ದಾನೆ.
ಅಭಿಮಾನಿ ಕೈಗೆ ಮುತ್ತಿಟ್ಟ ನಂತರ, ಶಾರುಖ್ ಖಾನ್ ನಾಚಿಕೆಯಿಂದ ದೊಡ್ಡ ಸ್ಮೈಲ್ ನೀಡಿದರು. ನಂತರ ಶಾರುಖ್ ಖಾನ್ ವಿಮಾನ ನಿಲ್ದಾಣದ ಒಳಗೆ ಹೋದರು. ಶಾರುಖ್ ಖಾನ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶಾರುಖ್ ಖಾನ್ 2023 ರಲ್ಲಿ ಮೂರು ಬ್ಯಾಕ್-ಟು-ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಪಠಾಣ್, ಜವಾನ್ ಮತ್ತು ಡಂಕಿ. ಈಗ ಅಭಿಮಾನಿಗಳು ಶಾರುಖ್ ಖಾನ್ ಅವರ ಹೊಸ ಪ್ರಾಜೆಕ್ಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ರಾಕ್‌ಲೈನ್ ವೆಂಕಟೇಶ್ ಒಡೆತನದ ʻರಾಕ್‌ಲೈನ್ ಮಾಲ್ʼ ಸೀಜ್.!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.