ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ಆನಂದ್ ಬಹುಜಾ ರವರು ಇದೆ ಮೇ 8 ರಂದು ಮದುವೆಯಾಗಿದ್ದಾರೆ. ನಂತರ ಈ ಇಬ್ಬರು ಜೋಡಿಯ ರಿಸೆಪ್ಶನ್ ಕಾರ್ಯಕ್ರಮದಲ್ಲಿ ಈ ಇಬ್ಬರು ಮನ ಬಂದಂತೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಈಗ ನಟಿ ಸೋನಂ ಕಪೂರ್ ತಮ್ಮ ಇನ್ಸ್ತಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ನವ ಜೋಡಿಗಳ ಮದುವೆ ಬಾಲಿವುಡ್ ನ ಘಟಾನುಘಟಿಗಳು ಪಾಲ್ಗೊಂಡಿದ್ದು ನಿಜಕ್ಕೂ ಮದುವೆಗೆ ಕಳೆಬರುವ ಹಾಗೆ ಮಾಡಿತ್ತು. ಸೋನಂ ಕಪೂರ್ ತಮ್ಮ ಸಾವರೀಯಾ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ಅವರು ಧನುಶ್ ರವರ ರಂಜಾನಾ ಚಿತ್ರದ ಮೂಲಕ ಗಮನ ಸೆಳೆದಿದ್ದರು.