ಮತ್ತೇ ಒಂದಾಗುತ್ತಿದ್ದಾರೆ ಮಾದಕ ಚೆಲುವೆ ಶಿಲ್ಪಾ ಶೆಟ್ಟಿ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್‌ !

ಕ್ರೇಜಿಸ್ಟಾರ್‌ ರವಿಚಂದ್ರನ್‌ ಹಾಗೂ ಶಿಲ್ಪಾಶೆಟ್ಟಿ ಬಹು ನಿರೀಕ್ಷಿತ ಜೋಡಿಗಳ ಪಟ್ಟಿಯಲ್ಲಿ ಇದ್ದವರು ಇವರಿಬ್ಬರು ಮತ್ತೇ ಜೊತೆಯಾಗಿ ತೆರೆ ಮೇಲೆ ಬರಲಿದ್ದಾರೆ ಎಂದು ಸುದ್ದಿ ಮಾದ್ಯಮದ ವರದಿಗಳು ತಿಳಿಸಿವೆ    

Written by - YASHODHA POOJARI | Last Updated : Mar 2, 2023, 01:05 PM IST
  • ಶಿಲ್ಪಾ ಶೆಟ್ಟಿ, ಮತ್ತೆ ರವಿಚಂದ್ರನ್​ ಜೊತೆ ನಾಯಕಿಯಾಗಿ ಮತ್ತೊಮ್ಮೆ ಸುನಾಮಿ ಎಬ್ಬಿಸಲು ರೆಡಿಯಾಗಿದ್ದಾರೆ.
  • ಸ್ಯಾಂಡಲ್​ವುಡ್​ ಬೆಳ್ಳಿ ತೆರೆಯ ಮೇಲೆ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
  • 20 ವರ್ಷಗಳ ಬಳಿಕ ರವಿಚಂದ್ರನ್​ಗೆ ಪುನಃ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಇದೆ.
ಮತ್ತೇ ಒಂದಾಗುತ್ತಿದ್ದಾರೆ ಮಾದಕ ಚೆಲುವೆ ಶಿಲ್ಪಾ ಶೆಟ್ಟಿ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್‌ !  title=

ಜೋಗಿ ಪ್ರೇಮ್ ಜೊತೆಗಿನ ಸಿನಿಮಾದಲ್ಲಿ ಮಾದಕ ಚೆಲುವೆ ಶಿಲ್ಪಾ ಶೆಟ್ಟಿ ಮತ್ತು ಅಧೀರ ಪಾತ್ರದಲ್ಲಿ ಮಿಂಚಿದ ಸಂಜಯ್ ದತ್ ನಟನೆ ಮಾಡೋದು ಕನ್ಫರ್ಮ್ ಆಗಿದೆ. ಈ ಸುದ್ದಿಯನ್ನ ನಿಮ್ಮ ಜೀ ಕನ್ನಡ ನ್ಯೂಸ್ ಎರಡು ತಿಂಗಳ ಹಿಂದೆಯೇ Exclusive ಸುದ್ದಿ ಕೊಟ್ಟಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಇದೀಗ KD ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

ಇದನ್ನೂ ಓದಿ-ಈ ನಟ ಮತ್ತು ನಿರ್ದೇಶಕರ ಕಾಂಬಿನೇಷನ್​ನ 2ನೇ ಚಿತ್ರಕ್ಕಾಗಿ ಸಿನಿರಸಿಕರು ಕಾಯುತ್ತಿದ್ದಾರೆ!

ಇನ್ನೊಂದು ಸಖತ್ ಖುಷಿ ನ್ಯೂಸ್ ಅಂದ್ರೆ 1998ರಲ್ಲಿ ಬಿಡುಗಡೆಯಾಗಿದ್ದ ಪ್ರೀತ್ಸೋದ ತಪ್ಪಾ ಮೂಲಕ  ಹೊಸ ಅಲೆ ಎಬ್ಬಿಸಿದ್ದ ಶಿಲ್ಪಾ ಶೆಟ್ಟಿ, ಮತ್ತೆ ರವಿಚಂದ್ರನ್​ ಜೊತೆ ನಾಯಕಿಯಾಗಿ ಮತ್ತೊಮ್ಮೆ ಸುನಾಮಿ ಎಬ್ಬಿಸಲು ರೆಡಿಯಾಗಿದ್ದಾರೆ.ಯೆಸ್ KD ಸಿನಿಮಾದಲ್ಲಿ ರವಿಚಂದ್ರನ್ ಅವರು ಕೂಡ ಇರುತ್ತರೆ .
ಅಂದಹಾಗೆ  ಪ್ರೀತ್ಸೋದ ತಪ್ಪಾ ಬಳಿಕ  2003 ರಲ್ಲಿ ಒಂದಾಗೋಣ ಬಾ ಚಿತ್ರದಲ್ಲಿಯೂ ಶಿಲ್ಪಾ ನಟಿಸಿದ್ದರು.  18 ವರ್ಷಗಳ ನಂತ  ಮತ್ತೆ ಸ್ಯಾಂಡಲ್​ವುಡ್​ ಬೆಳ್ಳಿ ತೆರೆಯ ಮೇಲೆ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

 20 ವರ್ಷಗಳ ಬಳಿಕ ರವಿಚಂದ್ರನ್​ಗೆ ಪುನಃ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಇದೆ. ಆದರೆ ಈ ಸುದ್ದಿ ಸದ್ಯ ಗುಸುಗುಸು ಅಷ್ಟೇ. ಶಿಲ್ಪಾರನ್ನು  ಕನ್ನಡಕ್ಕೆ ಪುನಃ ಕರೆತರಲಾಗುತ್ತಿದ್ದು, ಈ ನಿಟ್ಟಿನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಇದರ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ

ಇದನ್ನೂ ಓದಿ-ಅಣ್ಣಾವ್ರ ಮೊಮ್ಮಗ ಅಪ್ಪು ಪ್ರೀತಿಯ ಪುತ್ರ ಯುವ ಹೀರೋ ಆಗಿ ಲಾಂಚ್ ಆಗೋ ಸಮಯ ಬಂದೇ ಬಿಡ್ತು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News