ನನ್ನ ‘ರಾಣಾ’ ಸಿನಿಮಾಗೆ ನಾನೇ ಬೀದಿ ಸುತ್ತಿ ಪೋಸ್ಟರ್ ಅಂಟಿಸ್ತೀನಿ: ನಟ ಶ್ರೇಯಸ್ ಮಂಜು

‘ಪಡ್ಡೆಹುಲಿ’ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟ ಶ್ರೇಯಸ್ ಮಂಜು ಭರವಸೆಯ ನಟ ಅನಿಸಿಕೊಂಡಿದ್ದರು.

Written by - Puttaraj K Alur | Last Updated : Oct 16, 2022, 12:08 PM IST
  • ನಟ ಶ್ರೇಯಸ್ ಮಂಜು ಅಭಿನಯದ ‘ರಾಣಾ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ
  • ನವೆಂಬರ್ 11ಕ್ಕೆ ಬಿಡುಗಡೆಯಾಗಲಿರುವ ‘ರಾಣಾ’ ಟ್ರೈಲರ್ ಮೂಲಕ ಭರವಸೆ ಮೂಡಿಸಿದೆ
  • ನಾನೇ ಬೀದಿ ಬೀದಿ ತಿರುಗಿ ನನ್ನ ಸಿನಿಮಾದ ಪೋಸ್ಟರ್ ಅಂಟಿಸ್ತೀನಿ ಎಂದ ಯುವನಟ ಶ್ರೇಯಸ್
ನನ್ನ ‘ರಾಣಾ’ ಸಿನಿಮಾಗೆ ನಾನೇ ಬೀದಿ ಸುತ್ತಿ ಪೋಸ್ಟರ್ ಅಂಟಿಸ್ತೀನಿ: ನಟ ಶ್ರೇಯಸ್ ಮಂಜು    title=
‘ರಾಣಾ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ

ಬೆಂಗಳೂರು: ‘ನನ್ನ ಸಿನಿಮಾಗೆ ನಾನೇ ಬೀದಿ ಬೀದಿ ತಿರುಗಿ ಪೋಸ್ಟರ್ ಅಂಟಿಸುತ್ತೀನಿ’. ನನ್ನ ಕನಸು ಸಿನಿಮಾ. ಸಿನಿಮಾಗಾಗಿ ನಾನು ಏನೂ ಬೇಕಾದ್ರೂ ತ್ಯಾಗ ಮಾಡುತ್ತೀನಿ. ಇದು ಸ್ಟಾರ್ ನಿರ್ಮಾಪಕ ಕೆ.ಮಂಜು ಪುತ್ರ, ನಟ ಶ್ರೇಯಸ್ ಮಂಜು ಮಾತು.

‘ನನ್ನ ಯಾರೂ ಕೂಡ ಹೀರೋ ಅಂತಾ ಒಪ್ಪಿಕೊಳ್ಳುತ್ತಿರಲಿಲ್ಲ. ನಾನು 91 ಕೆಜಿ ಇದ್ದೆ. ಈಗ ವರ್ಕೌಟ್ ಮಾಡಿ, ಡ್ಯಾನ್ಸ್ ಕಲಿತು ತುಂಬಾ ಇಷ್ಟಪಟ್ಟು ಮತ್ತು ಕಷ್ಟಪಟ್ಟು ‘ರಾಣಾ’ ಸಿನಿಮಾ ಮಾಡಿದ್ದೀನಿ ಅಂತಾ ಯುವ ನಟ ಶ್ರೇಯಸ್ ಮಂಜು ಮನಸ್ಸಿನ ಮಾತುಗಳನ್ನು ಹೇಳಿದ್ದಾರೆ.

ಇದನ್ನೂ ಓದಿ: ʼಗಂಧದಗುಡಿʼ ಅಪ್ಪು ಜೊತೆ ʼತ್ರಿಬಲ್ ರೈಡಿಂಗ್ʼ ಹೊರಟ ಗೋಲ್ಡನ್ ಸ್ಟಾರ್ ಗಣೇಶ್..!

‘ಪಡ್ಡೆಹುಲಿ’ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟ ಶ್ರೇಯಸ್ ಮಂಜು ಭರವಸೆಯ ನಟ ಅನಿಸಿಕೊಂಡಿದ್ದರು. ಇದೀಗ ‘ರಾಣಾ’ ಸಿನಿಮಾ ರಿಲೀಸ್‍ಗೆ ರೆಡಿಯಾಗಿದ್ದು, ಏನೋ ಒಂದು ವಿಶೇಷ ಈ ಸಿನಿಮಾದಲ್ಲಿ ಪಕ್ಕಾ ಇದೆ ಅನ್ನೋದು ಕನ್ಫರ್ಮ್ ಆಗಿದೆ. ಸಿನಿಮಾ ನನ್ನ ಉಸಿರು ಅನ್ನೋ ಯುವ ನಟ ಶ್ರೇಯಸ್ ಮಂಜು "ರಾಣಾ" ಸಿನಿಮಾ ಮೂಲಕ ಜನಮನ ಗೆಲ್ಲೋದು ಕೂಡ ಅಷ್ಟೇ ಸತ್ಯವಾಗಿದೆ.

ಶ್ರೇಯಸ್ ಕೆ.ಮಂಜು ಕನ್ನಡದ ಮತ್ತೊಬ್ಬ ಹ್ಯಾಂಡ್ಸಮ್ ನಾಯಕ ನಟ ಅನ್ನೋದ್ರಲ್ಲಿ ಡೌಟೇ ಇಲ್ಲ. "ರಾಣಾ" ಟೈಟಲ್ ಕೂಡ ತುಂಬಾ ಥ್ರಿಲ್ ಅನಿಸುತ್ತೆ. ರಿಲೀಸ್ ಆಗಿರೋ ಹಾಡು ಕೂಡ ಜನರ ದಿಲ್ ಖುಷ್ ಆಗಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಸಿನಿರಸಿಕರು ಇಂತಹ ನಟರ ಸಿನಿಮಾಗಳನ್ನು ಥೀಯೇಟರ್‍ಗೆ ಬಂದು ನೋಡಿ ಪ್ರೋತ್ಸಾಹ ನೀಡಬೇಕಿದೆ.  

ಇದನ್ನೂ ಓದಿ: Free OTT Plan: ವರ್ಷವಿಡೀ ಉಚಿತ ನೆಟ್ ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್, ಇಲ್ಲಿದೆ ಬೆಸ್ಟ್ ಪ್ಲಾನ್

ಮೂಲಗಳ ಪ್ರಕಾರ ನವೆಂಬರ್ 11ಕ್ಕೆ ರಿಲೀಸ್ 'ರಾಣಾ' ಸಿನಿಮಾ ರಿಲೀಸ್ ಆಗುತ್ತೆ ಅಂತಾ ಹೇಳಲಾಗುತ್ತಿದೆ. ‘ರಾಣಾ’ ಸಿನಿಮಾಗಾಗಿ ಪ್ರೊಡ್ಯೂಸರ್ ಕೆ.ಮಂಜು ಮಗ ಶ್ರೇಯಸ್ ಸರ್ವ ತ್ಯಾಗ ಮಾಡಿದ್ದಾರೆ. ಈ ಸಿನಿಮಾವನ್ನು ಜನರು ಒಪ್ಪಿ ಅಪ್ಪಿಕೊಳ್ಳುತ್ತಾರೆ ಅನ್ನೋ ಭರವಸೆ ಶ್ರೇಯಸ್‍ಗಿದೆ. ಇಂತಹ ಸಿನಿಮಾಗಳಿಗೆ ಎಲ್ಲರ ಸಪೋರ್ಟ್ ಇದ್ರೆ ಉತ್ತಮ ಅನ್ನೋ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News