Shruti Hassan : ʼನಿಮ್ಮ ಕಾಲು ಹೇಗಿದೆ ತೋರಿಸಿ..ʼ ಅಂತ ಕೇಳಿದ್ದೇ ತಡ ಹೀಗಾ ಮಾಡೋದು ಶೃತಿ..! 

ನಟಿ ಶ್ರುತಿ ಹಾಸನ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುವ ನಾಯಕಿಯರಲ್ಲಿ ಒಬ್ಬರು. ಶ್ರುತಿ ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ನೆಟಿಜನ್‌ಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಆದರೆ ಕೆಲವೊಮ್ಮೆ ನೆಟಿಜನ್‌ಗಳು ಅವರಿಗೆ ಕಿರಿಕಿರಿಯ ಪ್ರಶ್ನೆಗಳನ್ನು ಕೇಳುತ್ತಾರೆ. ಆದ್ರೂ ಕೋಪ ಮಾಡಿಕೊಳ್ಳದ ಸುಂದರಿ, ತಮ್ಮದೇ ದಾಟಿಯಲ್ಲಿ ಅವರಿಗೆ ಉತ್ತರಗಳನ್ನೂ ನೀಡುತ್ತಾಳೆ.

Written by - Krishna N K | Last Updated : Mar 4, 2023, 07:05 PM IST
  • ನಟಿ ಶ್ರುತಿ ಹಾಸನ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುವ ನಾಯಕಿಯರಲ್ಲಿ ಒಬ್ಬರು.
  • ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ನೆಟಿಜನ್‌ಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
  • ಇದೀಗ ಅಭಿಮಾನಿಯೊಬ್ಬ ಕೇಳಿದ್ರು ಅಂತ ಏಕಾಎಕಿ ತಮ್ಮ ಕಾಲನ್ನು ತೋರಿಸಿದ್ದಾರೆ.
Shruti Hassan : ʼನಿಮ್ಮ ಕಾಲು ಹೇಗಿದೆ ತೋರಿಸಿ..ʼ ಅಂತ ಕೇಳಿದ್ದೇ ತಡ ಹೀಗಾ ಮಾಡೋದು ಶೃತಿ..!  title=

Shruti Hassan Knee injury : ನಟಿ ಶ್ರುತಿ ಹಾಸನ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುವ ನಾಯಕಿಯರಲ್ಲಿ ಒಬ್ಬರು. ಶ್ರುತಿ ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ನೆಟಿಜನ್‌ಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಆದರೆ ಕೆಲವೊಮ್ಮೆ ನೆಟಿಜನ್‌ಗಳು ಅವರಿಗೆ ಕಿರಿಕಿರಿಯ ಪ್ರಶ್ನೆಗಳನ್ನು ಕೇಳುತ್ತಾರೆ. ಆದ್ರೂ ಕೋಪ ಮಾಡಿಕೊಳ್ಳದ ಸುಂದರಿ, ತಮ್ಮದೇ ದಾಟಿಯಲ್ಲಿ ಅವರಿಗೆ ಉತ್ತರಗಳನ್ನೂ ನೀಡುತ್ತಾಳೆ.

ಇತ್ತೀಚೆಗಷ್ಟೇ ಶ್ರುತಿ ಹಾಸನ್ ಚೀಟ್‌ ಚಾಟ್‌ನಲ್ಲಿ ತಮ್ಮ ಅಭಿಮಾನಿಗಳು ಕೇಳಿದ್ರು ಅಂತ ʼಕಿಸ್ʼ ನೀಡುವ ಮೂಲಕ ತಾವು ಸದಾ ಪ್ಯಾನ್ಸ್‌ ಪರ ಅಂತ ತೋರಿಸಿದ್ದರು. ಇದೇ ರೀತಿ, ಕೆಲವರು ಯಾವಾಗಲೂ ಕೇಳುವ ಸಾಮಾನ್ಯ ಪ್ರಶ್ನೆ ಅಂದ್ರೆ, ನೀವು ಯಾವಾಗ ಮದುವೆಯಾಗುತ್ತೀರಿ ಎಂಬುವುದು ಒಂದು. ನಿತ್ಯವೂ ಇದೇ ಪ್ರಶ್ನೆ ಕೇಳಿ ಬೇಸರವಾಗುತ್ತಿದೆ.. ಬೇರೆ ಕೇಳಿ ಅಂತ ಶ್ರುತಿ ಹಾಸನ್ ಅದಕ್ಕೆ ಉತ್ತರ ನೀಡಲಿಲ್ಲ. ಆದರೆ ಮತ್ತೊಬ್ಬ ನೆಟಿಜನ್ ಮೊಣಕಾಲಿನ ಗಾಯ ಹೇಗಿದೆ ಅಂತ ಪ್ರಶ್ನೆ ಕೇಳಿದ್ರು, ಅದಕ್ಕೆ ಶೃತಿ ಏಕಾಏಕಿ ತನ್ನ ಕಾಲುಗಳನ್ನು ತೋರಿಸಿದ್ದಾಳೆ.

ಇದನ್ನೂ ಓದಿ: ಏನಾಯ್ತು ಚೆಂದುಳ್ಳಿ ಚೆಲುವೆಗೆ..! ಹೇಗಿದ್ದ ʼಅನುಷ್ಕಾʼ ಹೇಗಾಗಿದಾರೆ ನೋಡಿ

ಅಲ್ಲದೆ, ಸ್ವಲ್ಪ ಊದಿಕೊಂಡಿದೆ.. ಆದರೆ ಈಗ ಕಡಿಮೆಯಾಗಿದೆ.. ನನಗೆ ಅಷ್ಟು ನೋವು ಇಲ್ಲ ಎಂದು ಉತ್ತರಿಸಿದ್ದಾಳೆ. ಇದೀಗ ಶ್ರುತಿ ಹಾಸನ್ ಅವರ ಚಿಟ್ ಚಾಟ್ ಸೆಷನ್ ವೈರಲ್ ಆಗುತ್ತಿದೆ. ಈಗಾಗಲೇ ಸಂಕ್ರಾಂತಿಯಲ್ಲಿ ಎರಡು ಚಿತ್ರಗಳು ರಿಲೀಸ್ ಆಗಿದ್ದು, ಬ್ಲಾಕ್ ಬಸ್ಟರ್ ಆಗಿವೆ. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಅವರ ಮುಂಬರುವ ಚಿತ್ರ ಸಲಾರ್ ನಲ್ಲಿಯೂ ಶ್ರುತಿ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಲವರ್‌ ಶಂತನು ಜೊತೆ ಮದುವೆ ಬಗ್ಗೆ ಶ್ರುತಿ ಹಾಸನ್ ಮಾತನಾಡುತ್ತಿಲ್ಲ. ಮುಂದೆ ಸಿಹಿ ಸುದ್ದಿ ನೀಡ್ತಾರಾ ಅಂತ ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News