Shweta Bachchan Statement About Aishwarya Rai: ಸದ್ಯ ಬಾಲಿವುಡ್ ತುಂಬಾ ಬಚ್ಚನ್ ಮನೆಯ ಸುದ್ದಿಯೇ ಟಾಕ್ ಆಫ್ ದಿ ಟೌನ್ ಎಂಬಂತಾಗಿದೆ. ಬಚ್ಚನ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ. ಅಭಿಷೇಕ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ ಎಂಬೆಲ್ಲಾ ವದಂತಿಗಳು ಹರಿದಾಡುತ್ತಿವೆ.
ಇದನ್ನೂ ಓದಿ: “ಇದೇ ಕಾರಣಕ್ಕೆ ಸಂಗೀತಾನ ನೋಡಿದ್ರೆ ನಾನು ಅಷ್ಟೊಂದು ಉರ್ಕೊಳ್ಳೋದು”- ಸತ್ಯ ಬಾಯ್ಬಿಟ್ಟ ವಿನಯ್
ಆದರೆ ಈ ಸುದ್ದಿ ಹರಿದಾಡುತ್ತಿರುವಾಗಲೇ, ಅಭಿಷೇಕ್ ಮತ್ತು ಐಶ್ವರ್ಯಾ ರೈ ತಮ್ಮ ಪುತ್ರಿ ಆರಾಧ್ಯ ಬಚ್ಚನ್ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಒಟ್ಟಾಗಿ ಆಗಮಿಸಿದ್ದರು. ಇದನ್ನು ನೋಡಿದ ಜನರು ಗೊಂದಲಕ್ಕೊಳಗಾಗಿದ್ದರು. ಆದರೆ ಈ ಬೆನ್ನಲ್ಲೇ ಶ್ವೇತಾ ನಂದ ನೀಡಿದ ಹೇಳಿಕೆಯೊಂದು ಭಾರೀ ವೈರಲ್ ಆಗುತ್ತಿದೆ.
ಕರಣ್ ಜೋಹರ್ ಅವರ ಚಾಟ್ ಶೋ ‘ಕಾಫಿ ವಿಥ್ ಕರಣ್’ನಲ್ಲಿ ಶ್ವೇತಾ ಬಚ್ಚನ್ ಅಭಿಷೇಕ್ ಮತ್ತು ಐಶ್ವರ್ಯಾ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದರು.
ಇದನ್ನೂ ಓದಿ: RCB ಕೈಬಿಟ್ಟ ಈ ಆಟಗಾರನನ್ನು 11.75 ಕೋಟಿಗೆ ಖರೀದಿಸಿದ ಪಂಜಾಬ್
“ಐಶ್ವರ್ಯಾ ರೈಗೆ ಅಭಿಷೇಕ್ ಅಂದ್ರೆ ತುಂಬಾ ಭಯವಿದೆ” ಎಂದು ಶ್ವೇತಾ ಹೇಳಿದ್ದಾರೆ. ಇದೇ ವೇಳೆ ‘ಅಭಿಷೇಕ್ ಅಥವಾ ಐಶ್ವರ್ಯಾ ಯಾರು ಉತ್ತಮ ನಟ’ ಎಂದು ಕರಣ್ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶ್ವೇತಾ, ಐಶ್ವರ್ಯಾಗಿಂತ ಅಭಿಯೇ ಉತ್ತಮ ನಟ. ಇನ್ನು ನನಗೆ ಐಶ್ವರ್ಯಾಳ ಇದೊಂದು ಅಭ್ಯಾಸ ಇಷ್ಟವಿಲ್ಲ… ಆಕೆಗೆ ಕರೆ ಮಾಡಿದ್ರೆ, ಮತ್ತೆ ಕಾಲ್ ಬ್ಯಾಕ್ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತಾಳೆ. ಇದನ್ನು ನಾನು ದ್ವೇಷಿಸುತ್ತೇನೆ” ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.