Sihiʼs Truth Reveals Infront Of Suri: ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರವಾಹಿಯಲ್ಲಿ ಸೂರಿಗೆ ಸಿಹಿ ಸೀತಾ ಮಗಳು ಎಂಬ ಸತ್ಯ ಗೊತ್ತಾಗುತ್ತದೆ. ಸಿಹಿ ಸೂರಿ ತಾತನಿಗೆ ಫೋನ್ ಮಾಡಿ ಶೂಟಿಂಗ್ ಆಟವಾಡುತ್ತಿದ್ದಾಗ ಆ ಪುಟಾಣಿ ಆತನನ್ನು ನೋಡಲು ಮನೆಗೆ ಬನ್ನಿಯೆಂದು ಕರೆದಿದ್ದಳು. ಸೂರಿ ಮಗು ಕರೆದಿದಕ್ಕೆ ಪ್ರೀತಿಯಿಂದ ವಠಾರಕ್ಕೆ ಬಂದಾಗ, ಸಿಹಿಗೆ ತುಂಬಾನೆ ಖುಷಿಯಾಗುತ್ತದೆ. ಅವರನ್ನು ಶಾಂತಜ್ಜಿ ಮತ್ತು ಮೂರ್ತಿ ತಾತ ಸೇರಿಕೊಂಡು ಸ್ವಾಗತಿಸುತ್ತಾರೆ.
ಸೂರಿ ಸಿಹಿ ಕರೆದಿದ್ದಕ್ಕೆ ಬಂದೆ ಎಂದು ಹೇಳಿ ಖುಷಿ ಪಡುತ್ತಿದ್ದಾಗ, ಸೀತಾ ಮನೆಗೆ ಹೋಗಬೇಕು ಎಂದು ಸೂರಿ ಕೇಳುತ್ತಾರೆ. ಅದೇ ವೇಳೆ ಸಿಹಿ ತಾನೇ ಸೀತಮ್ಮನ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಕರೆದುಕೊಂಡು ಹೋಗುತ್ತಾಳೆ. ಸಿಹಿಯ ಸಂಭ್ರಮವನ್ನು ಕಂಡು ಎಲ್ಲರಿಗೂ ಖುಷಿಯಾಗುತ್ತಿದ್ದರೇ, ಸೀತಾ ಮನೆಯೊಳಗೆ ಹೋಗಲು ಸೂರಿ ಒಪ್ಪುವುದಿಲ್ಲ. ಸೂರಿ ಸಿಹಿಗೆ ಮನೆಯಲ್ಲಿ ಯಾರೂ ಇಲ್ಲದಾಗ ಹೋಗಬಾರದು ಎಂದು ಹೇಳುತ್ತಾರೆ. ಆದರೆ ಸಿಹಿ ಇದು ತನ್ನದೇ ಮನೆ, ತಾನೇ ಸೀತಾಳ ಮಗಳು ಎಂದು ಹೇಳುತ್ತಾಳೆ.
ಇದನ್ನೂ ಓದಿ: Shruti Hassan: ಐದು ಬಾಯ್‌ಫ್ರೆಂಡ್‌ಗಳ ಜೊತೆ ಸಲಾರ್ ಬೆಡಗಿ ಬ್ರೇಕಪ್: ಶಾಂತನು ಜೊತೆಗೆ ಆರನೇಯದಾ?
ಹೌದು.. ಸಿಹಿ ಸೂರಿ ತಾತನ ಬಳಿ ನಾನೇ ಸೀತಮ್ಮನ ಮಗಳು, ಈ ಮನೆಯಲ್ಲಿ ನಾನು ಸೀತಾ ಮಾತ್ರ ಇರುವುದು ಎಂದು ಹೇಳುತ್ತಾಳೆ. ಸಿಹಿಯ ಮಾತನ್ನು ಕೇಳಿ ಸೂರಿ ತಾತನಿಗೆ ಆಘಾತವಾಗುತ್ತದೆ. ಇದೇನಿದು ಹೀಗಾಯ್ತಲ್ಲವೆಂದು ಬೇಸರ ಮಾಡಿಕೊಳ್ಳುತ್ತಾರೆ. ಸಿಹಿ ಬಲವಂತವಾಗಿ ಮನೆಯೊಳಗೆ ಕರೆದುಕೊಂಡು ಹೋಗಿ ನೀರು ಕೊಡುತ್ತಾಳೆ. ಇದು ಸೂರಿಯನ್ನು ಚಿಂತೆಗೀಡು ಮಾಡುತ್ತದೆ. ಇಷ್ಟು ಒಳ್ಳೆ ಮಗು ಮದುವೆ ಮನೆಯಲ್ಲಿ ಇದ್ದರೂ ಯಾರೂ ತನ್ನ ಬಳಿ ಸತ್ಯ ಹೇಳಲಿಲ್ಲ. ಇವಳೇ ಸೀತಾಳ ಮಗಳು ಎಂದು ಮನೆಯವರೆಲ್ಲಾ ಮುಚ್ಚಿಟ್ಟಿದ್ದಾರೆ. ಇದು ಎಷ್ಟು ಸರಿಯೆಂದು ಕೆಂಡಮಂಡಲವಾಗುತ್ತಾರೆ.
ನಂತರ ಬೇಗನೆ ಕೆಲಸದಿಂದ ಮನೆಗೆ ಬಂದ ಸೀತಾಳ ಹತ್ತಿರ ಸೂರಿ ಗರಂ ಆಗಿ ಉತ್ತರ ನೀಡುತ್ತಾರೆ. ನಿನ್ನ ಜೊತೆಗೆ ನಾನು ವ್ಯೆಯಕ್ತಿಕವಾಗಿ ಮಾತನಾಡುವುದಿದೆ. ಆದಷ್ಟು ಬೇಗ ಸಮಯ ಮಾಡಿಕೊಂಡು ನನಗೆ ಸಿಗು ಎಂದು ಹೇಳಿ, ಮನೆಯಿಂದ ಹೊರಟು ಹೋಗುತ್ತಾರೆ. ಅವಾಗ ಸೀತಾ ಸಿಹಿ ಬಗ್ಗೆ ಸೂರಿ ಅವರಿಗೆ ಗೊತ್ತಿರಲಿಲ್ಲ. ಅದಕ್ಕೆ ಈಗ ಬೇಸರ ಮಾಡಿಕೊಂಡಿದ್ದಾರೆಂದು ಶಾಂತಜ್ಜಿ ಹಾಗೂ ಮೂರ್ತಿ ತಾತನ ಹತ್ತಿರ ಹೇಳುತ್ತಾಳೆ. ಈ ಮಾತನ್ನು ಕೇಳಿಸಿಕೊಂಡ ಸಿಹಿಗೆ ಶಾಕ್ ಆಗಿ, ತನ್ನಿಂದಲೇ ಅಮ್ಮನ ಮದುವೆ ಆಗುತ್ತಿಲ್ಲ ಎಂದು ನೊಂದುಕೊಂಡಿದ್ದಾಳೆ.
ಇದನ್ನೂ ಓದಿ: Kalki 2898 AD: ಡಾರ್ಲಿಂಗ್ ʻಕಲ್ಕಿʼ ಬಿಗ್ ಅಪ್‌ಡೇಟ್ ರಿವೀಲ್: ಫೈನಲಿ ರಿಲೀಸ್ ಡೇಟ್ ಫಿಕ್ಸ್!
ಸೂರಿ ತಾತನಿಗೆ ಸಿಹಿ ಸೀತಾ ಮಗಳೆಂದು ಗೊತ್ತಾಗಿರುವ ವಿಚಾರ ರಾಮಗೆ ಗೊತ್ತಾಗುತ್ತದೆ. ರಾಮಗೂ ಮನೆಗೆ ಬರುವಂತೆ ಹೇಳಿ ಹೊರಡುತ್ತಾರೆ. ಸೂರಿ ಮನೆಯಲ್ಲಿ ಎಲ್ಲರ ಮುಂದೆಯೂ ಜಗಳ ಮಾಡಿ, ಸೀತಾಳಿಗೆ ಒಂದು ಮಗುಯಿರುವುದನ್ನು ಹೇಳದೇ ಮುಚ್ಚಿಟ್ಟಿದ್ಯಾಕೆ, ಅಂತಹ ಅಗತ್ಯವೇನಿತ್ತು ಎಂದು ಕೂಗಾಡುತ್ತಾರೆ. ಅದಕ್ಕೆ ಮನೆಯವರು ನಿಮಗೆ ಆರೋಗ್ಯ ಸಮಸ್ಯೆ ಇದ್ದಿದ್ದಕ್ಕೆ ಮುಚ್ಚಿಟ್ಟೆವೆಂದು ಹೇಳುತ್ತಾರೆ. ಆಗ ಸೂರಿ ನಾನು ಸೀತಾ ಜೊತೆಗೆ ಒಬ್ಬನೇ ವ್ಯೆಯಕ್ತಿಕವಾಗಿ ಮಾತನಾಡುವುದು ಇದೆ. ಆಕೆಯನ್ನು ಆದಷ್ಟು ಬೇಗ ಕರೆಸಿ ಎಂದು ತಾಕೀತು ಮಾಡುತ್ತಾರೆ. ಮುಂದೆನಾಗುತ್ತದೆಂಬುದನ್ನು ಮುಂಬರುವ ಸಂಚಿಕೆಯಲ್ಲಿ ನೋಡಿ ತಿಳಿಯಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.