Silk Smitha : 450 ಸಿನಿಮಾ, ಸಾಕಷ್ಟು ಖ್ಯಾತಿ.. ಆದರೂ ಆತ್ಮಹತ್ಯೆಯಲ್ಲಿ ಬದುಕು ಅಂತ್ಯ! ಇದು ಸಿಲ್ಕ್‌ ಸ್ಮಿತಾ ಕಣ್ಣೀರ ಕತೆ

Silk Smitha : ಸಿಲ್ಕ್ ಸ್ಮಿತಾ 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ ದಕ್ಷಿಣ ಚಿತ್ರರಂಗದ ನಟಿ. ಆದರೆ ಖ್ಯಾತಿಯನ್ನು ಗಳಿಸಿದ ನಂತರವೂ ತನ್ನ ವೈಯಕ್ತಿಕ ಜೀವನದಲ್ಲಿ ಎಂದಿಗೂ ಸಂತೋಷವನ್ನು ಕಾಣಲಿಲ್ಲ.   

Written by - Chetana Devarmani | Last Updated : Sep 18, 2023, 02:28 PM IST
  • ಸಾಕಷ್ಟು ಖ್ಯಾತಿ ಗಳಿಸಿದ ನಟಿ ಸಿಲ್ಕ್ ಸ್ಮಿತಾ
  • 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ
  • ಆತ್ಮಹತ್ಯೆಯಲ್ಲಿ ಅಂತ್ಯವಾದ ಸಿಲ್ಕ್‌ ಜೀವನ
Silk Smitha : 450 ಸಿನಿಮಾ, ಸಾಕಷ್ಟು ಖ್ಯಾತಿ.. ಆದರೂ ಆತ್ಮಹತ್ಯೆಯಲ್ಲಿ ಬದುಕು ಅಂತ್ಯ! ಇದು ಸಿಲ್ಕ್‌ ಸ್ಮಿತಾ ಕಣ್ಣೀರ ಕತೆ   title=

Silk Smitha Story: ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಖ್ಯಾತಿ ಗಳಿಸಿದ ನಾಯಕಿಯರಿದ್ದಾರೆ. ಅವರ ಬಳಿ ಹಣ, ಕೀರ್ತಿ ಎಲ್ಲವೂ ಇತ್ತು ಆದರೆ ಅವರ ವೈಯಕ್ತಿಕ ಜೀವನದಲ್ಲಿ ನೋವು ತುಂಬಿತ್ತು. ಅಂತಹ ನಟಿಯರಲ್ಲಿ ಒಬ್ಬರು ಸಿಲ್ಕ್ ಸ್ಮಿತಾ. ಹಲವು ಸಿನಿಮಾಗಳಲ್ಲಿ ನಟಿಸಿ ತಮ್ಮ ಪ್ರತಿಭೆಯಿಂದ ಎಲ್ಲರ ಮನ ಗೆದ್ದಿದ್ದಾರೆ ಸಿಲ್ಕ್ ಸ್ಮಿತಾ ನಿಜವಾದ ಹೆಸರು ವಿಜಯಲಕ್ಷ್ಮಿ. 

ಸಿಲ್ಕ್ ಸ್ಮಿತಾ ಸೌತ್ ಚಿತ್ರರಂಗದಲ್ಲಿ ಫೇಮಸ್ ಆಗಿದ್ದರು. ತಮಿಳು, ತೆಲುಗು ಮತ್ತು ಕೆಲವು ಮಲಯಾಳಂ ಸೇರಿದಂತೆ ಹಿಂದಿ ಚಿತ್ರಗಳಲ್ಲಿಯೂ ಕೆಲಸ ಮಾಡಿದರು. ‘ವಂಡಿಚಕ್ಕರಂ’ ಚಿತ್ರದಲ್ಲಿ ಸಿಲ್ಕ್ ಪೋಷಕ ನಟಿಯಾಗಿ ವೃತ್ತಿ ಜೀವನ ಆರಂಭಿಸಿದರು. ಆ ನಂತರ ಸಿನಿಮಾ ಆಫರ್ ಗಳು ಬರಲಾರಂಭಿಸಿದವು.

ವಿಜಯಲಕ್ಷ್ಮಿ ಅಂದರೆ ಸಿಲ್ಕ್ ಸ್ಮಿತಾ ಸಿನಿಮಾ ಲೋಕದಲ್ಲಿ ಸುಮಾರು 17 ವರ್ಷಗಳ ಕಾಲ ಕೆಲಸ ಮಾಡಿದವರು. ಆದರೆ ಅವರು 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಮುಖ ನಟಿಯಾಗಿ ಕಾಣಿಸಿಕೊಂಡರು. ಒಂದೆಡೆ ಸಿಲ್ಕ್ ಚಿತ್ರಗಳಲ್ಲಿ ಖ್ಯಾತ ನಟಿಯಾಗಿದ್ದರೆ, ಮತ್ತೊಂದೆಡೆ ಅವರ ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆಗಳಿದ್ದವು. ಕುಟುಂಬದಲ್ಲಿನ ಆರ್ಥಿಕ ಸಮಸ್ಯೆಗಳಿಂದಾಗಿ ಬಾಲ್ಯದಲ್ಲಿಯೇ ಅಧ್ಯಯನವನ್ನು ಬಿಡಬೇಕಾಯಿತು. ಅಷ್ಟೇ ಅಲ್ಲ ಕೇವಲ 14ನೇ ವಯಸ್ಸಿನಲ್ಲಿ ತಮಿಳಿನ ಹೀರೋ ವಿನು ಜೊತೆ ವಿವಾಹವಾದರು. ಆದರೆ ಅವರ ಈ ಸಂಬಂಧದಿಂದ ಸಂತೋಷವಾಗಿರಲಿಲ್ಲ. ವರದಿಗಳ ಪ್ರಕಾರ, ಅವರು ಕೌಟುಂಬಿಕ ಹಿಂಸೆಯನ್ನು ಎದುರಿಸಿದರು. ಅದರ ನಂತರ ಮನೆಯಿಂದ ಹೊರಟುಹೋದರು.

ಇದನ್ನೂ ಓದಿ : ಸೀತಾ ರಾಮಂ ಖ್ಯಾತಿಯ ಮೃನಾಲ್‌ ಠಾಕೂರ್‌ಗೆ ಸೈಮಾ ಅವಾರ್ಡ್‌ : ಫೋಟೋಸ್‌ ಇಲ್ಲಿದೆ 

ತನ್ನ ಗಂಡನ ಮನೆಯನ್ನು ತೊರೆದ ಸ್ವಲ್ಪ ಸಮಯದ ನಂತರ, ಸಿಲ್ಕ್‌ಗೆ ನಿರ್ದೇಶಕ ಆಂಥೋನಿ ಈಸ್ಟ್‌ಮನ್ ಚಲನಚಿತ್ರದಲ್ಲಿ ಕೆಲಸ ಮಾಡುವ ಅವಕಾಶವನ್ನು ನೀಡಿದರು. ಇದು ಸಿಲ್ಕ್‌ ಸ್ಮಿತಾ ಜೀವನವನ್ನು ಬದಲಾಯಿಸಿತು. ಸಿಲ್ಕ್ ದಕ್ಷಿಣದ ಅನೇಕ ಹಿಟ್ ನಟರೊಂದಿಗೆ ಕೆಲಸ ಮಾಡಿದರು. ಮೋಹನ್ ಲಾಲ್, ಕಮಲ್ ಹಾಸನ್ ಹೀಗೆ ಹೆಸರಾಂತ ನಟರ ಜೊತೆ ಸ್ಕ್ರೀನ್‌ ಶೇರ್‌ ಮಾಡಿದ್ದಾರೆ.

ವರದಿಗಳ ಪ್ರಕಾರ, ಸಿಲ್ಕ್ ಸ್ಮಿತಾ ವೈದ್ಯನನ್ನು ಮದುವೆಯಾಗಿದ್ದರು. ಅವರು ತಮ್ಮ ಉಳಿತಾಯವನ್ನೆಲ್ಲ ಚಿತ್ರ ನಿರ್ಮಾಣಕ್ಕೆ ತೊಡಗಿಸಿದರು. ಚಿತ್ರ ಫ್ಲಾಪ್ ಆಯಿತು. ಇದರ ನಂತರ, ಸಿಲ್ಕ್ 23 ಸೆಪ್ಟೆಂಬರ್ 1996 ರಂದು 35 ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ವರದಿಗಳ ಪ್ರಕಾರ, ಸಿಲ್ಕ್ ಅವರು ತಮ್ಮ ಜೀವನದಲ್ಲಿ ಸಂತೋಷವಾಗಿಲ್ಲ ಎಂದು ಬರೆದಿರುವ ಪತ್ರವನ್ನು ಪೊಲೀಸರು ಸ್ವೀಕರಿಸಿದ್ದಾರೆ. ಅದಕ್ಕಾಗಿಯೇ ಆಕೆ ಜಗತ್ತಿಗೆ ವಿದಾಯ ಹೇಳುತ್ತಿದ್ದಾರೆ.. ಸಿಲ್ಕ್ ಸ್ಮಿತಾ ಜೀವನಾಧಾರಿತ ಹಿಂದಿ ಸಿನಿಮಾ ಕೂಡ ತಯಾರಾಗಿದೆ. ಆ ಸಿನಿಮಾ ಹೆಸರು 'ದಿ ಡರ್ಟಿ ಪಿಕ್ಚರ್'. ಈ ಚಿತ್ರದಲ್ಲಿ ವಿದ್ಯಾ ಬಾಲನ್ ಅವರು ಸಿಲ್ಕ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರಕ್ಕಾಗಿ ವಿದ್ಯಾ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದರು.

ಇದನ್ನೂ ಓದಿ : ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಖ್ಯಾತ ಯೂಟ್ಯೂಬರ್‌..! ʼಮೆಗಾ ಲೋ ಡಾನ್‌ʼ ಟೀಸರ್‌ ಔಟ್‌ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News