ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಖ್ಯಾತ ಯೂಟ್ಯೂಬರ್‌..! ʼಮೆಗಾ ಲೋ ಡಾನ್‌ʼ ಟೀಸರ್‌ ಔಟ್‌

Harsha Sai new movie : ಜನಪ್ರಿಯ ಯೂಟ್ಯೂಬರ್ ಹರ್ಷ ಸಾಯಿ ನಟಿಸಿರುವ ಚಿತ್ರದ ಶೀರ್ಷಿಕೆ ಮತ್ತು ಟೀಸರ್ ಅನ್ನು ತಯಾರಕರು ಬಿಡುಗಡೆ ಮಾಡಿದ್ದಾರೆ. ವಿಭಿನ್ನ ಪರಿಕಲ್ಪನೆಯೊಂದಿಗೆ ಬರುತ್ತಿರುವ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.   

Written by - Krishna N K | Last Updated : Sep 18, 2023, 12:40 PM IST
  • ಜನಪ್ರಿಯ ಯೂಟ್ಯೂಬರ್ ಹರ್ಷ ಸಾಯಿ.
  • ಹರ್ಷ ನಟಿಸಿರುವ ಚಿತ್ರದ ಟೀಸರ್‌ ಔಟ್‌.
  • ಕುತೂಹಲ ಮೂಡಿಸುತ್ತಿದೆ ಮೆಗಾ ಲೋ ಡಾನ್‌ ಟೀಸರ್‌.
ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಖ್ಯಾತ ಯೂಟ್ಯೂಬರ್‌..! ʼಮೆಗಾ ಲೋ ಡಾನ್‌ʼ ಟೀಸರ್‌ ಔಟ್‌ title=

Mega lo don : ಹರ್ಷ ಸಾಯಿ ಯೂಟ್ಯೂಬರ್ ಆಗಿ ಬಹಳ ಪ್ರಸಿದ್ಧಿ ಪಡೆದಿದ್ದಾರೆ. ತಮ್ಮ ವೀಡಿಯೊಗಳ ಮೂಲಕ ಅನೇಕ ಜನರ ಮನ ಗೆದ್ದಿದ್ದಾರೆ. ಅಲ್ಲದೆ, ಯೂಟ್ಯೂಬ್‌ನಲ್ಲಿ 9 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಹರ್ಷಾ ಇದೀಗ ಸಿನಿರಂಗ ಪ್ರವೇಸ ಮಾಡಿದ್ದು, ಚಿತ್ರವೊಂದರಲ್ಲಿ ನಾಯಕನಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ಸಿನಿಮಾ ಟ್ರೈಲರ್‌ ರಿಲೀಸ್‌ ಆಗಿದ್ದು, ಕುತೂಹಲ ಮೂಡಿಸುತ್ತಿದೆ.

ಹೌದು.. ಹರ್ಷಾ ಸಾಯಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಬಡವರಿಗೆ ತಮ್ಮ ಕೈಲಾದಷ್ಟು ಹಣದ ಸಹಾಯ ಮಾಡುವ ಮೂಲಕ ಅವರ ಆಸೆಗಳನ್ನು ಈಡೇರಿಸುತ್ತಿದ್ದರು. ಈ ಕುರಿತ ವಿಡಿಯೋಗಳನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಇದರಿಂದಾಗಿ ಹರ್ಷ ಹೆಚ್ಚು ಜನಪ್ರೀಯರಾಗಿದ್ದರು. ಇದೀಗ ಸಿನಿರಂಗಕ್ಕೆ ಕಾಲಿಟಿದ್ದು, ʼಮೆಗಾ ಲೋ ಡಾನ್‌ʼ ಚಿತ್ರದ ಮೂಲಕ ಸಂಚಲನ ಮೂಡಿಸಿದ್ದಾರೆ.

ಇದನ್ನೂ ಓದಿ: ಧ್ರುವ ಸರ್ಜಾ ಮಡಿಲಿಗೆ ಮಗುವಾಗಿ ಸೇರಿದ ಚಿರು..ಗಂಡು ಮಗುವಿಗೆ ಜನ್ಮ ನೀಡಿದ ಪ್ರೇರಣಾ!!

ಇತ್ತೀಚಿಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದೊಂದು ಆಕ್ಷನ್ ಡ್ರಾಮ ಸಿನಿಮಾ ಆಗಲಿದೆಯಂತೆ. ಹರ್ಷಸಾಯಿ ನಾಯಕನಷ್ಟೇ ಅಲ್ಲ ಕಥೆ, ನಿರ್ದೇಶನವನ್ನೂ ಮಾಡಿದ್ದಾರೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಚಿತ್ರ ಬಿಡುಗಡೆಯಾಗಲಿದೆ.

 

ಬಿಗ್ ಬಾಸ್ ಖ್ಯಾತಿಯ ಮಿತ್ರ ಈ ಚಿತ್ರವನ್ನು ಶ್ರೀ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ವಿಕಾಸ್ ಬಡಿಸ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಟೀಸರ್ ನಲ್ಲಿ ಅನೌನ್ಸ್‌ ಮಾಡಲಾಗಿದೆ.

ಇದನ್ನೂ ಓದಿ: ಸ್ಯಾಂಡಲ್ ವುಡ್ ಬುದ್ಧಿವಂತ'ನಿಗೆ ಇಂದು ಜನ್ಮದಿನದ ಸಂಭ್ರಮ!!

ಟೀಸರ್ ತುಂಬಾ ವಿಭಿನ್ನವಾಗಿದೆ. ಹರ್ಷಸಾಯಿ ಬೆನ್ನ ಮೇಲಿನ ಟ್ಯಾಟೂ ಹೈಲೈಟ್ ಆಗಿದೆ. ಅದಲ್ಲದೇ ಕೋತಿಯಂತಿರುವ ವ್ಯಕ್ತಿ ಹಾಗೂ ಜನರ ಗುಂಪು ವಿಡಿಯೋದಲ್ಲಿದ್ದು, ‘ಜೀವನದಲ್ಲಿ ಸೋಲನ್ನು ಒಪ್ಪಿಕೊಳ್ಳುವ ಕ್ಷಣ.. ನಿಜವಾದ ಸೋಲು.. ನನ್ನನ್ನು ನೋಡಿದರೆ ಒಪ್ಪಿಕೊಳ್ಳುವವರಂತೆ ಕಾಣುತ್ತೀನಾ’ ಎಂದು ಹರ್ಷಸಾಯಿ ಹೇಳುವ ಡೈಲಾಗ್ ಗೂಸ್‌ಬಂಪ್ಸ್‌ ಬರುವ ರೀತಿ ಇದೆ. ಅಂದಹಾಗೆ ಮೆಗಾ ಲೋ ಡಾನ್‌ ಅಂದ್ರೆ ಶಾರ್ಕ ಮೀನು ಅಂತ ಅರ್ಥ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News