Sitara Ghattamaneni: ಈ ಪೋಟೋದಲ್ಲಿ ಮಹೇಶ್‌ ಬಾಬು ಪುತ್ರಿ ಧರಿಸಿರುವ ಲೆಹೆಂಗಾ ಬೆಲೆ ಎಷ್ಟು ಗೊತ್ತಾ?

Sitara Ghattamaneni Lehenga Price: ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಘಟ್ಟಮನೇನಿ ಕುರಿತು ತೆಲುಗು ಜನರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಅಪ್ಪನಂತೆಯೇ ಈಕೆಯೂ ಸೋಷಿಯಲ್ ಮೀಡಿಯಾದಲ್ಲಿ ಸೂಪರ್ ಕ್ರೇಜ್ ಪಡೆದಿದ್ದಾಳೆ. ಅಂದಹಾಗೆ ಇತ್ತೀಚೆಗೆ ಅವರು ಕೆಂಪು ಬಣ್ಣದ ಲೆಹೆಂಗಾದ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ಅದರ ಬೆಲೆ ಕುರಿತು ಚರ್ಚೆ ಶುರುವಾಗಿದೆ. 

Written by - Savita M B | Last Updated : Oct 29, 2023, 12:06 PM IST
  • ಮಹೇಶ್ ಬಾಬು ಹೀರೋ ಆಗಿ ಜನಪ್ರಿಯರಾದಷ್ಟೇ ಅವರ ಮಗಳು ಸಿತಾರ ಕೂಡ ಜನಪ್ರಿಯತೆ ಗಳಿಸಿದ್ದಾರೆ
  • ಇವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
  • ಇತ್ತೀಚೆಗೆ, ಸಿತಾರಾ ತಮ್ಮ Instagram ಖಾತೆಯಲ್ಲಿ ಕೆಂಪು ಬಣ್ಣದ ಲೆಹೆಂಗಾ ಉಡುಗೆಯಲ್ಲಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ
Sitara Ghattamaneni: ಈ ಪೋಟೋದಲ್ಲಿ ಮಹೇಶ್‌ ಬಾಬು ಪುತ್ರಿ ಧರಿಸಿರುವ ಲೆಹೆಂಗಾ ಬೆಲೆ ಎಷ್ಟು ಗೊತ್ತಾ?  title=

Mahesh Babu Daughter: ಮಹೇಶ್ ಬಾಬು ಹೀರೋ ಆಗಿ ಜನಪ್ರಿಯರಾದಷ್ಟೇ ಅವರ ಮಗಳು ಸಿತಾರ ಕೂಡ ಜನಪ್ರಿಯತೆ ಗಳಿಸಿದ್ದಾರೆ. ಇವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.

ಇನ್ನು ಮಹೇಶ್ ಮಗಳು ಸದಾ ಒಂದಲ್ಲ ಒಂದು ಸುದ್ದಿಯಲ್ಲಿ ಎಲ್ಲರ ಗಮನ ಸೆಳೆಯುತ್ತಾಳೆ. ಸ್ವಂತ ಯೂಟ್ಯೂಬ್ ಚಾನೆಲ್ ಹೊಂದಿರುವ ಈ ಚೆಲುವೆ ಆಗಾಗ್ಗೆ ಸಾಮಾಜಿಕ ಕಳಕಳಿಯ ವಿಡಿಯೋಗಳನ್ನು ಮಾಡಿ ಟ್ರೆಂಡ್‌ ಕ್ರಿಯೆಟ್‌ ಮಾಡುತ್ತಿರುತ್ತಾರೆ. 

ಇದನ್ನೂ ಓದಿ-BBK10: ಫನ್‌ ಫ್ರೈಡೇ..! ಕಥೆ ಹೇಳೋದ್ರಲ್ಲಿ ಯಾರು ಎಕ್ಸ್‌ಫರ್ಟ್‌?  

ಇತ್ತೀಚೆಗೆ, ಸಿತಾರಾ ತಮ್ಮ Instagram  ಖಾತೆಯಲ್ಲಿ ಕೆಂಪು ಬಣ್ಣದ ಲೆಹೆಂಗಾ ಉಡುಗೆಯಲ್ಲಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಸಿತಾರಾ ಮುದ್ದಾಗಿ ಕಾಣುತ್ತಿರುವ ಮಹೇಶ್‌ಪುತ್ರಿಯ ಲೆಹೆಂಗಾ ಬೆಲೆ ಗೊತ್ತಾದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ..

ಇದನ್ನೂ ಓದಿ-ನಟಿ ಮಾಧವಿಗೆ ಸಾವಿರಾರು ಕೋಟಿ ಆಸ್ತಿ ಹೇಗೆ ಬಂತು..? ಆಕೆಯ ಪತಿ ಯಾರು ಗೊತ್ತಾ..?  

ಗೊತ್ತಿರುವ ಮಾಹಿತಿ ಪ್ರಕಾರ ಈ ಲೆಹೆಂಗಾ ಬೆಲೆ ಎರಡೂವರೆ ಲಕ್ಷಕ್ಕೂ ಹೆಚ್ಚು ಇರಲಿದೆಯಂತೆ. ದಸರಾ ಸಂದರ್ಭದಲ್ಲಿ ಸೆಲೆಬ್ರಿಟಿ ಡಿಸೈನರ್ ವರುಣ್ ಚಕ್ಕಿಲಂ ವಿನ್ಯಾಸಗೊಳಿಸಿದ ಈ ಲೆಹೆಂಗಾವನ್ನು ಸಿತಾರಾ ಧರಿಸಿದ್ದರು.

ಇನ್ನು ಕೆಲ ದಿನಗಳಿಂದ ಸಿತಾರಾ ತೆಲುಗು ಚಿತ್ರರಂಗದಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದಲ್ಲದೆ, ತನ್ನ ತಂದೆಯ ಹಾದಿಯಲ್ಲಿ, ಅವರು ಅನೇಕ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿ ಖ್ಯಾತಿಯನ್ನು ಗಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News