ಬೆಂಗಳೂರು : ಕಳೆದ ಕೆಲವು ದಿನಗಳಿಂದ ಎಲ್ಲಿ ನೋಡಿದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎದೆಯ ಮೇಲೆ ಟ್ಯಾಟೂ ಹಾಕೊಂಡಿರೋ ವಿಡಿಯೋದ್ದೇ ಸುದ್ದಿ, ಸದ್ದು. ಟ್ಯಾಟೂ ಹಾಕಿಸಿಕೊಂಡಿರುವ ಡಿ ಬಾಸ್ ಅಭಿಮಾನಿಗಳ ಮೇಲೆ ಇಟ್ಟಿರುವ ಪ್ರೀತಿ ಅದ್ಭುತ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ದರ್ಶನ್ ಕೂಡಾ ನನಗಾಗಿ ನನ್ನ ಸೆಲೆಬ್ರೇಟಿಗಳು ಇಷ್ಟೆಲ್ಲಾ ಮಾಡುತ್ತಾರೆ ನಾನು ಅವರಿಗಾಗಿ ಇಷ್ಟಾದ್ರೂ ಮಾಡಬಾರದಾ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ದರ್ಶನ್ ಅಭಿಮಾನಿಗಳತ್ತ ತೋರುತ್ತಿರುವ ಒಲವು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಅವರನ್ನ ಪ್ರೀತಿಸೋ ಮಂದಿಗೆ ಅವರ ಮೇಲಿನ ಅಭಿಮಾನ ಹೆಚ್ಚಾಗಲು ಮತ್ತೊಂದು ಕಾರಣ ಸಿಕ್ಕಿದೆ ಎಂದರೆ ತಪ್ಪಿಲ್ಲ.
ಇದನ್ನೂ ಓದಿ : ಅಬ್ಬರಿಸಲು ಸಜ್ಜಾದ "ಕಬ್ಜ"....
ಆದರೆ ಇದೀಗ ಅದೇ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಸುದ್ದಿ ಎದ್ದಿದೆ. ಅಪ್ಪು ಈ ಹಿಂದೆ, ನನ್ನ ಎದೆಯ ಮೇಲೆ ಅಭಿಮಾನಿಗಳಿಗಾಗಿ ಟ್ಯಾಟೂ ಹಾಕೊತ್ತೀನಿ ಅಂತ ಹೇಳಿದ್ದರಂತೆ. ಅದನ್ನ ಡಿ ಬಾಸ್ ಕಾಪಿ ಪೇಸ್ಟ್ ಮಾಡಿದ್ದಾರೆ ಅನ್ನೋ ಆರೋಪ ಅಪ್ಪು ಅಭಿಮಾನಿಗಳದ್ದು. ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಬರಹಗಳನ್ನು ಕೂಡಾ ಪೋಸ್ಟ್ ಮಾಡುತ್ತಿದ್ದಾರೆ.
ಅಪ್ಪು ಯಾವತ್ತಿಗೂ ಫ್ಯಾನ್ಸ್ ವಾರ್ ಇಷ್ಟಪಟ್ಟಿಲ್ಲ. ಆದರೆ ಇತ್ತೀಚಿಗೆ ಯಾಕೋ ಸ್ಟಾರ್ ವಾರ್, ಸ್ಟಾರ್ ಫ್ಯಾನ್ಸ್ ವಾರ್ ಅನ್ನೋದು ಜಾಸ್ತಿಯಾಗುತ್ತಿದೆ. ಇವೆಲ್ಲವೂ ಸಮಾಜಕ್ಕೆ ಕೆಟ್ಟ ಸಂದೇಶವನ್ನೇ ನೀಡುವುದರಲ್ಲಿ ಎರಡು ಮಾತಿಲ್ಲ. ಟ್ಯಾಟೂ ವಿಚಾರ ಎಲ್ಲಿ ಹೋಗಿ ನಿಲ್ಲುತ್ತೆ ಅನ್ನೋದೇ ಇದೀಗ ಆತಂಕದ ವಿಚಾರ.
ಇದನ್ನೂ ಓದಿ : Valentine's Day: ಸ್ಯಾಂಡಲ್ವುಡ್ನಲ್ಲಿ ಪ್ರೀತಿಸಿ ಮದುವೆಯಾದ ಸ್ಟಾರ್ ಜೋಡಿಗಳು
ನೆಚ್ಚಿನ ಸ್ಟಾರ್ ಗಳ ಸಿನಿಮಾ ನೋಡಬೇಕು. ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ಅದು ಬಿಟ್ಟು ಯಾರು ಮೇಲೂ ಯಾರು ಕೀಳು ಎನ್ನುವ ಸ್ಪರ್ಧೆಗೆ ಅಭಿಮಾನಿಗಳು ಬೀಳಬಾರದು. ಹೀಗಾದರೆ ಚಂದನವನದ ಕೀರ್ತಿ ಪಸರಿಸುವುದಕ್ಕೆ ಅಭಿಮಾನಿಗಳೇ ತಡೆಯಾದಂತಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.