ಅಮೆರಿಕಾದಲ್ಲಿ ಶ್ರೇಯಸ್ ಮಂಜು :ಹೊಸ ಚಿತ್ರಕ್ಕಾಗಿ ಮಾಸ್ಟರ್ ಕ್ಲಾಸಸ್ ತರಬೇತಿ

ಯುವನಟ ಶ್ರೇಯಸ್ ಮಂಜು ಅಮೆರಿಕಾದಲ್ಲಿ ಮಾಸ್ಟರ್ ಕ್ಲಾಸ್  ತರಬೇತಿ ಪಡೆಯುತ್ತಿದ್ದಾರೆ. ಅಮೇರಿಕಾ ಚಿಕಾಗೋ ಮತ್ತು ನ್ಯೂಯಾರ್ಕ್‌ನ ಫಿಲಂ ಸಿಟಿಯ ವಿವಿಧ ನಟನಾ ಶಾಲೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. 

Written by - Ranjitha R K | Last Updated : Aug 2, 2024, 03:19 PM IST
  • ಬಿಡುಗಡೆಯ ಸಿದ್ದತೆಯಲ್ಲಿ ವಿಷ್ಣುಪ್ರಿಯ ಚಿತ್ರ
  • ನಿರ್ಮಾಪಕ ಕೆ.ಮಂಜು ಅವರ ಪುತ್ರನ ನಟನೆಯ ಚಿತ್ರ
  • ವಿವಿಧ ನಟನಾ ಶಾಲೆಗಳಲ್ಲಿ ಮಾಸ್ಟರ್ ಕ್ಲಾಸ್ ತರಬೇತಿ
ಅಮೆರಿಕಾದಲ್ಲಿ ಶ್ರೇಯಸ್ ಮಂಜು :ಹೊಸ ಚಿತ್ರಕ್ಕಾಗಿ ಮಾಸ್ಟರ್ ಕ್ಲಾಸಸ್ ತರಬೇತಿ title=

ಬೆಂಗಳೂರು : ನಿರ್ಮಾಪಕ ಕೆ.ಮಂಜು ಅವರ ಪುತ್ರ, ಯುವನಟ ಶ್ರೇಯಸ್ ಮಂಜು ಅಭಿನಯದ ವಿಷ್ಣುಪ್ರಿಯ ಚಿತ್ರ  ಬಿಡುಗಡೆಯ ಸಿದ್ದತೆಯಲ್ಲಿದೆ.ಅದರ ಬೆನ್ನಲ್ಲೇ ಶ್ರೇಯಸ್‌ ತಮ್ಮ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರೀಕರಿಸಲಾದ ಆಕ್ಷನ್ ಚಿತ್ರಕ್ಕಾಗಿ ಸಿದ್ದತೆ‌ ನಡೆಸಿದ್ದಾರೆ.ಕಳೆದ ಎರಡು ವಾರಗಳಿಂದ ಅಮೆರಿಕಾದ ಚಿಕಾಗೋ ಮತ್ತು ನ್ಯೂಯಾರ್ಕ್‌ನ ಫಿಲಂ ಸಿಟಿಯ ವಿವಿಧ ನಟನಾ ಶಾಲೆಗಳಲ್ಲಿ ಮಾಸ್ಟರ್ ಕ್ಲಾಸ್ ತರಬೇತಿ ಪಡೆಯುತ್ತಿದ್ದಾರೆ. 

ಕೆಲವು ಪಾರ್ಕರ್ ಮತ್ತು ಹೊಸ ಆಕ್ಷನ್ ತಂತ್ರಗಳ ಬಗ್ಗೆ ತರಬೇತಿ ಪಡೆಯುತ್ತಿರುವ ಶ್ರೇಯಸ್, ಹೊಸ ಜಾಗ,ಅಲ್ಲಿನ ಜನರ ಜೊತೆಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ : Actor Shashikumar: ನಟ ಶಶಿ ಕುಮಾರ್‌ ಪತ್ನಿ ಯಾರು ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!

ಸಿನಿಮಾದಲ್ಲಿ ತೊಡಗಿರುವ ಹೊಸ ವ್ಯಕ್ತಿಗಳ ಭೇಟಿ, ಅವರ ಜತೆಗಿನ ಚರ್ಚೆಗಳಿಂದ ನನಗೆ ಹೊಸ ಉತ್ಸಾಹ ಬಂದಿದೆ.ಚಿತ್ರರಂಗದಲ್ಲಿ  ದಿನೇ ದಿನೇ ಹೊಸತನದ ಅವಿಷ್ಕಾರವಾಗುತ್ತಿದೆ.ಕಲಾವಿದರಾಗಿ ನಾವೂ ಕೂಡ ಹೊಸತನವನ್ನು ಕಲಿಯಬೇಕಿದೆ.  ನಿಟ್ಟಿನಲ್ಲಿ  ತುಂಬಾ ವಿಷಯಗಳನ್ನು  ತಿಳಿದುಕೊಳ್ಳುತ್ತಿದ್ದೇನೆ' ಎಂದು ಹೇಳಿದ್ದಾರೆ. 

ಎಸ್.ನಾರಾಯಣ್ ಅವರ  ನಿರ್ದೇಶನದಲ್ಲಿ ದುನಿಯಾ ವಿಜಯ್ ಮತ್ತು ಶ್ರೇಯಸ್ ಮಂಜು ಕಾಂಬಿನೇಶನ್‌,ಚಿತ್ರದ ಕೆಲಸವೂ ಪ್ರಗತಿಯಲ್ಲಿದೆ.ವಿಷ್ಣು ಪ್ರಿಯಾ ಚಿತ್ರ ಬಿಡುಗಡೆಯಾದ ನಂತರ ಶೀಘ್ರದಲ್ಲೇ ಈ ಸಿನಿಮಾ ಬಗ್ಗೆ ಘೋಷಿಸುತ್ತೇವೆ ಎಂದೂ ಶ್ರೇಯಸ್ ಹೇಳಿದ್ದಾರೆ.

ಇದನ್ನೂ ಓದಿ : ವಿಚ್ಛೇದನದ ಹಾದಿಯಲ್ಲಿ ಟಾಪ್ ಕಾಮಿಡಿಯನ್?.. ಸೋಷಿಯಲ್‌ ಮಿಡಿಯಾದಲ್ಲಿ ಶಾಕಿಂಗ್‌ ಪೋಸ್ಟ್!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News