ಈ PHOTOS ಶೇರ್ ಮಾಡಿ ಟ್ರೋಲ್ ಆದ ಸೋನಾಕ್ಷಿ ಸಿನ್ಹಾ

ಸೋನಾಕ್ಷಿ ಸಿನ್ಹಾ ಈ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವುಗಳನ್ನು ಹಂಚಿಕೊಳ್ಳುತ್ತಾ, ಅವರು ಮರೆಮಾಡಲು ಏನೂ ಇಲ್ಲ, ಭಯಪಡಬೇಕಾಗಿಲ್ಲ, ಯಾವುದೂ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

Last Updated : Jan 9, 2020, 01:56 PM IST
ಈ PHOTOS ಶೇರ್ ಮಾಡಿ ಟ್ರೋಲ್ ಆದ ಸೋನಾಕ್ಷಿ ಸಿನ್ಹಾ title=
Photo Courtesy: Instagram

ನವದೆಹಲಿ: ದೀಪಿಕಾ ಪಡುಕೋಣೆ ನಂತರ ಇದೀಗ ಸೋನಾಕ್ಷಿ ಸಿನ್ಹಾ ಅವರನ್ನು ಟ್ವಿಟರ್‌ನಲ್ಲಿ ಟ್ರೋಲ್ ಮಾಡಲಾಗಿದೆ. ವಾಸ್ತವವಾಗಿ ಸೋನಾಕ್ಷಿ ಟ್ವಿಟ್ಟರ್ ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಹಂಚಿಕೊಳ್ಳುತ್ತಾ, ಅವರು ಮರೆಮಾಡಲು ಏನೂ ಇಲ್ಲ, ಭಯಪಡಬೇಕಾಗಿಲ್ಲ, ಯಾವುದೂ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. #NOTHINGTOHIDE ಎಂದು ಟಿ-ಶರ್ಟ್‌ನಲ್ಲಿ ಕಪ್ಪು ಅಕ್ಷರಗಳಲ್ಲಿ ಬರೆದಿರುವ ಫೋಟೋವನ್ನೂ ಅವರು ಈ ಟ್ವೀಟ್‌ನೊಂದಿಗೆ ಹಾಕಿದ್ದಾರೆ. 

ಈ ಫೋಟೋ ನೋಡಿದ ಟ್ವಿಟ್ಟಿಗರು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಅಂತಹ ಟ್ವೀಟ್ ಮೂಲಕ ನೀವು ಏನು ಸಾಬೀತುಪಡಿಸಲು ಬಯಸುತ್ತೀರಿ ಎಂದು ಹಲವರು ಪ್ರಶ್ನಿಸಿದ್ದಾರೆ. ತೋರಿಸಲು ಏನೂ ಇಲ್ಲ(NOTHINGTOSHOW) ಎಂದು ಇನ್ನೊಂದು ಸಾಲನ್ನು ಸೇರಿಸಿ ಎಂದು ಒಬ್ಬರು ಬರೆದಿದ್ದಾರೆ.

ಇದೇ ವೇಳೆ ಜೆಎನ್‌ಯು ಬಗ್ಗೆ ಏಕೆ ಟ್ವೀಟ್ ಮಾಡಿಲ್ಲ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಟ್ವೀಟ್ ಹಾಕುವ ಮೊದಲು ಅದರ ಪರಿಣಾಮ ಏನು ಎಂದು ನೀವು ದೊಡ್ಡ ಜನರು ಯೋಚಿಸುವುದಿಲ್ಲ ಎಂದು ಒಬ್ಬರು ಹರಿಹಾಯ್ದಿದ್ದಾರೆ.

ಈ ಫೋಟೋಗಳಿಗೆ ಟ್ರೋಲ್ ಆದ ಸೋನಾಕ್ಷಿ ಸಿನ್ಹಾ ಇನ್ನೊಂದನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರ ಟೀ ಶರ್ಟ್ 'ನೈಜ' ಎಂದು ಬರೆಯಲಾಗಿದೆ. ಅವರು ಅದನ್ನು ಟ್ರೋಲರ್‌ಗಳಿಗೆ  ಉತ್ತರಿಸಲು ಹಾಕಿದರು. ಇದರ ನಂತರ, ಇನ್ನೊಬ್ಬ ಬಳಕೆದಾರರು ದೀಪಿಕಾ ನಿಮ್ಮನ್ನು ಜೆಎನ್‌ಯುಗೆ ಕರೆಯುತ್ತಿದ್ದಾರೆ ಎಂದು ಬರೆದಿದ್ದರೆ, ನಿಮಗೆ ಯಾವುದೇ ಕೆಲಸವಿಲ್ಲ ಎಂದು ತೋರುತ್ತದೆ ಎಂದು ಮತ್ತೊಬ್ಬರು ಬರೆದಿದ್ದಾರೆ.

Trending News