ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್ವುಡ್‌ ಸಾಂಗ್‌ಗಳಿಗೆ ಧ್ವನಿಯಾದ ಸೋನು ನಿಗಮ್..!

 Sonu Nigam Birthday: ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್ವುಡ್‌ ಸೂಪರ್ ಹಿಟ್‌ ಸ್ವಾಂಗ್‌ಗಳಿಗೆ ಧ್ವನಿಯಾದ ಸೋನು ನಿಗಮ್. ಕನ್ನಡದಲ್ಲಿ  900 ಕ್ಕೂ ಹೆಚ್ಚು  ಹಾಡುಗಳನ್ನು ಹಾಡಿದ್ದಾರೆ.

Written by - Zee Kannada News Desk | Last Updated : Jul 30, 2023, 03:07 PM IST
  • ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸೋನು ನಿಗಮ್
  • ಸ್ಯಾಂಡಲ್ವುಡ್‌, ಬಾಲಿವುಡ್‌ ಸೇರಿದಂತೆ ಎಲ್ಲರಿಗೂ ನೆಚ್ಚಿನ ಗಾಯಕ
  • ಇವರ ಮಧುರ ಕಂಠದಲ್ಲಿ ಮೂಡಿದ ಸಾಂಗ್‌ಗಳು ಹಿಟ್‌
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್ವುಡ್‌ ಸಾಂಗ್‌ಗಳಿಗೆ ಧ್ವನಿಯಾದ ಸೋನು ನಿಗಮ್..!  title=

Sonu Nigam: ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್ವುಡ್‌ ಸೂಪರ್ ಹಿಟ್‌ ಸ್ವಾಂಗ್‌ಗಳಿಗೆ ಧ್ವನಿಯಾದ ಸೋನು ನಿಗಮ್.ಇವರ ಮಧುರ ಕಂಠದಲ್ಲಿ ಮೂಡಿ ಬರುತ್ತಿದ್ದ ಹಾಡುಗಳನ್ನು ಕೇಳಿ ನಾವು ಬಾಲ್ಯದಲ್ಲಿ ಯಾರೋ ಕನ್ನಡಿಗನೇ ಹಾಡಿರ ಬೇಕು ಎಂದುಕೊಳ್ಳುತ್ತಿದ್ದೆವು. ಗೊತ್ತಿರದ ವಯಸ್ಸಿನಲ್ಲಿ ಇವರ ಮಧುರ ಕಂಠಕ್ಕೆ ಫಿದಾ ಆದೇವು. ಸ್ಯಾಂಡಲ್ವುಡ್‌, ಬಾಲಿವುಡ್‌ ಸೇರಿದಂತೆ ಎಲ್ಲರಿಗೂ ನೆಚ್ಚಿನ ಗಾಯಕ ಇವ್ರೇ ಆಗಿದ್ದಾರೆ. 

ಇವರ ಜೀವನ ಕಥೆ ನೋಡೋದಾರೇ.. ಸೋನು ನಿಗಮ್ ಬಾಲ್ಯದ ದಿನಗಳಿಂದ ಗಾಯಕನ ಕನಸು ಕಂಡಿದ್ದರು. ಶಾಲಾ ದಿನಗಳಲ್ಲಿ ಸಣ್ಣ ಪುಟ್ಟ ವೇದಿಕೆಗಳಲ್ಲಿ ಹಾಡುತ್ತಿದ್ದರು. ಬಳಿಕ ಬಿಬಿಸಿಗೆ ನೀಡಿದ ಸಂದರ್ಶನದ 'ಕ್ಯಾ ಹುವಾ ತೇರಾ ವಾದ' ಹಾಡಿ ಮೆಚ್ಚುಗೆ ಗಳಿಸಿದರು. 

ಇದನ್ನೂ ಓದಿ: Tamannaah Bhatia: ರೆಡ್‌ ಸೀರೆಯುಟ್ಟ ಪಡ್ಡೆಹೈಕ್ಳ ಬ್ಲಡ್ ಪ್ರೆಶರ್ ಹೆಚ್ಚಿಸಿದ ʼಮಿಲ್ಕಿ ಬ್ಯೂಟಿʼ ..!

ತಮ್ಮ ಕನಸನ್ನು ಈಡೇರಿಸಿಕೊಳ್ಳಲು 1991 ರಲ್ಲಿ 18ನೇ ವಯಸ್ಸಿನಲ್ಲಿ ತಮ್ಮ ತಂದೆಯೊಂದಿಗೆ ಮುಂಬೈಗೆ ತೆರೆಳಿದರು. ಕೆಲವು ವರ್ಷಗಳ ಕಾಲ ತೊಂದರೆ ಅನುಭವಿಸಬೇಕಾಯಿತು. ಬಾರ್ಡರ್' ಚಿತ್ರದಲ್ಲಿನ 'ಸಂದೇಶ್ ಸೇ ಆತೆ ಹೈ' ಹಾಡಿನಿಂದ ಬಹು ಎತ್ತರಕ್ಕೆ ಬೆಳೆದರು. ಬಳಿಕ ನೂರಾರು ಅವಕಾಶಗಳನ್ನು ಅವರನ್ನು ಹುಡುಕಿಕೊಂಡು ಬಂದಿತ್ತು. 

1996 ರಲ್ಲಿ  ಜೀವನದಿ ಚಿತ್ರದ ʼಯೆಲ್ಲೋ ಯಾರೋ ಹೇಗೋʼ ಹಾಡಿನ ಮೂಲಕ ಸ್ಯಾಂಡಲ್ವುಡ್‌ ಗೂ ಪರಿಚಯವಾದರು. ಇನ್ನು ಕನ್ನಡದಲ್ಲಿ  900 ಕ್ಕೂ ಹೆಚ್ಚು  ಹಾಡುಗಳನ್ನು ಹಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News