ಗಾಯಕನ ತಂದೆ ಆಗಮಕುಮಾರ್ ನಿಗಮ್ ಅವರು ಅಂಧೇರಿ ಪಶ್ಚಿಮದ ಓಶಿವಾರದಲ್ಲಿರುವ ವಿಂಡ್ಸರ್ ಗ್ರ್ಯಾಂಡ್ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ ಮತ್ತು ಮಾರ್ಚ್ 19 ಮತ್ತು ಮಾರ್ಚ್ 20 ರ ನಡುವೆ ಕಳ್ಳತನ ನಡೆದಿದೆ ಎಂದು ಅವರು ಹೇಳಿದರು.ಸೋನು ನಿಗಮ್ ಅವರ ತಂಗಿ ನಿಕಿತಾ ಬುಧವಾರ ಮುಂಜಾನೆ ಓಶಿವಾರಾ ಪೊಲೀಸ್ ಠಾಣೆಗೆ ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ ಎಂದು ಅವರು ಹೇಳಿದರು.
ಸೋಮವಾರ ರಾತ್ರಿ ಮುಂಬೈನ ಚೆಂಬೂರ್ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೆಲ್ಫಿ ತೆಗೆದುಕೊಳ್ಳುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಶಿವಸೇನಾ ಉದ್ಧವ್ ಠಾಕ್ರೆ ಬಣದ ಶಾಸಕರೊಬ್ಬರ ಪುತ್ರ ಖ್ಯಾತ ಗಾಯಕ ಸೋನು ನಿಗಮ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಈ ಕುರಿತು ಸೋನು ದೂರು ಕೂಡಾ ನೀಡಿದ್ದಾರೆ. ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷರಾದ ಸೋನು ನಿಗಮ್ ಎಲ್ಲವೂ ಸರಿಯಾಗಿದೆ ಅಂತ ಹೇಳಿದ್ದಾರೆ.
Baana Dariyalli: ನನ್ನ ಸಿನಿ ಜರ್ನಿಯಲ್ಲೇ ಅತಿಹೆಚ್ಚು ಮೊತ್ತ ಕೊಟ್ಟು ಈ ಚಿತ್ರದ ಆಡಿಯೋ ರೈಟ್ಸ್ ಪಡೆದುಕೊಂಡ ಆನಂದ್ ಆಡಿಯೋಗೆ ಧನ್ಯವಾದ ಹೇಳುತ್ತೇನೆ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಖುಷಿ ಹಂಚಿಕೊಂಡರು.
ಇತ್ತೀಚಿಗೆ ಹಿಂದಿ ಭಾಷಾ ವಿಚಾರವಾಗಿ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ನಡೆದ ಟ್ವಿಟ್ಟರ್ ಸಮರದ ಬೆನ್ನಲ್ಲೇ ಈಗ ಹಿನ್ನಲೆ ಗಾಯಕ ಸೋನು ನಿಗಮ್ ಭಾಷೆಯ ವಿಚಾರದಲ್ಲಿ ಯಾರ ಮೇಲೂ ಒತ್ತಡ ಹೇರುವುದು ಸರಿಯಲ್ಲ ಎಂದು ಹೇಳುವ ಮೂಲಕ ಸುದೀಪ್ ಅವರ ಬೆಂಬಲಕ್ಕೆ ಧಾವಿಸಿದ್ದಾರೆ.
ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಗಂಭೀರ ಹೇಳಿಕೆಯೊಂದನ್ನು ನೀಡಿದ್ದಾರೆ. ತನ್ನ ಮಗ ಗಾಯಕನಾಗುವುದು ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಆತ ಗಾಯಕನಾಗುವುದು ತಮಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆಯ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಗಾಯಕ ಸೋನು ನಿಗಮ್ ತಮ್ಮ ಅಭಿಮಾನಿಗಳೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಸಂಪರ್ಕ ಹೊಂದಿದ್ದು, ದುಬೈನಿಂದ ಭಾರತಕ್ಕೆ ಅವರ ವಿಮಾನ ಇತ್ತೀಚೆಗೆ ರದ್ದಾಗಿದೆ ಎಂದು ಹಂಚಿಕೊಂಡಿದ್ದಾರೆ.