Aishwarya Rai: ಐಶ್ವರ್ಯಾ ರೈ ಬಾಯ್ ಫ್ರೆಂಡ್ ಲಿಸ್ಟ್ ನಲ್ಲಿ ಅಭಿಷೇಕ್ ಇರಲಿಲ್ಲ, ಬಚ್ಚನ್ ಕುಟುಂಬದ ಸೊಸೆಯಾಗಲು ಐಶ್‌ಗೆ ಮನಸ್ಸಿರಲಿಲ್ಲವಾ?

Aishwarya Rai-Abhishek Bachchan Wedding Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯ ರೈ ಅವರು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಪುತ್ರ ನಟ ಅಭಿಷೇಕ್ ಬಚ್ಚನ್ ಅವರನ್ನು 20 ಏಪ್ರಿಲ್ 2007 ರಂದು ವಿವಾಹವಾದರು. ಇಬ್ಬರೂ ಮದುವೆಯಾಗಿ 16 ವರ್ಷ ಆಗಗಿದೆ..

Written by - Savita M B | Last Updated : Apr 19, 2024, 11:08 AM IST
  • ಬಾಲಿವುಡ್‌ನ ಪವರ್‌ಫುಲ್ ಜೋಡಿಗಳ ಪಟ್ಟಿಯಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜೋಡಿ ಸೇರಿದೆ.
  • ಕೆಲ ದಿನಗಳಿಂದ ಇವರಿಬ್ಬರ ಸಂಬಂಧಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಮುನ್ನೆಲೆಗೆ ಬರುತ್ತಿವೆ.
Aishwarya Rai: ಐಶ್ವರ್ಯಾ ರೈ ಬಾಯ್ ಫ್ರೆಂಡ್ ಲಿಸ್ಟ್ ನಲ್ಲಿ ಅಭಿಷೇಕ್ ಇರಲಿಲ್ಲ, ಬಚ್ಚನ್ ಕುಟುಂಬದ ಸೊಸೆಯಾಗಲು ಐಶ್‌ಗೆ ಮನಸ್ಸಿರಲಿಲ್ಲವಾ?    title=

Aishwarya Rai-Abhishek Bachchan: ಬಾಲಿವುಡ್‌ನ ಪವರ್‌ಫುಲ್ ಜೋಡಿಗಳ ಪಟ್ಟಿಯಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜೋಡಿ ಸೇರಿದೆ. ಆದರೆ, ಕೆಲ ದಿನಗಳಿಂದ ಇವರಿಬ್ಬರ ಸಂಬಂಧಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಮುನ್ನೆಲೆಗೆ ಬರುತ್ತಿವೆ.    

ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಒಂದೆಡೆ ಅಭಿಷೇಕ್ ಬಚ್ಚನ್ ತನ್ನ ಸಹ ನಟಿ ಐಶ್ವರ್ಯಾ ಜೊತೆ ಕೆಲಸ ಮಾಡುವಾಗ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರೆ, ಮತ್ತೊಂದೆಡೆ ಐಶ್ವರ್ಯಾ ಗೆಳೆಯರ ಪಟ್ಟಿಯಲ್ಲಿ ಅಭಿಷೇಕ್ ಹೆಸರು ಎಲ್ಲೂ ಇರಲಿಲ್ಲ. ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಲು ಬಯಸಲಿಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-ಕೀರ್ತಿ ಸುರೇಶ್‌ ಎಂಗೇಜ್ಮೆಂಟ್‌ ಫೋಟೋ ವೈರಲ್..‌ ನಾಗಾರ್ಜುನ ಮನೆಯ ಸೊಸೆ ಆಗಲಿರುವ ಸೌತ್‌ ಬ್ಯೂಟಿ!?

ಐಶ್ವರ್ಯ-ಅಭಿಷೇಕ್ ಜೋಡಿಯು ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾಗಿದೆ ಆದರೆ ಈ ಪ್ರೇಮಕಥೆಯು ಆರಂಭಿಕ ಹಂತದಲ್ಲಿ ಮಾತ್ರ ಒನ್‌ಸೈಡ್‌ ಲವ್‌ಸ್ಟೋರಿಯಾಗಿತ್ತು.. 2016 ರಲ್ಲಿ, ಕರಣ್ ಅವರ ಟಾಕ್ ಶೋನಲ್ಲಿ, ಐಶ್ವರ್ಯಾ ಸ್ವತಃ ಅಭಿಷೇಕ್ ಬಚ್ಚನ್ ಅಥವಾ ತನಗಿಂತ ಕಿರಿಯ ಯಾರೊಬ್ಬರ ಮೇಲೆ ಎಂದಿಗೂ ಪ್ರೀತಿಯಾಗಿಲ್ಲ ಎಂದು ಹೇಳಿದ್ದರು. 

ಈ ಬಗ್ಗೆ ಮಾತನಾಡಿದ ಅವರು "ನಾನು ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿದ್ದೇನೆ, ನನ್ನ ಪತಿ ನನಗಿಂತ ಚಿಕ್ಕವನು, ಆದರೆ ನನಗೆ ಅವನ ಮೇಲೆ ಎಂದಿಗೂ ಮೋಹ ಇರಲಿಲ್ಲ. ನಾವು ಯಾವಾಗಲೂ ಒಳ್ಳೆಯ ಸ್ನೇಹಿತರಾಗಿದ್ದೇವು" ಎಂದಿದ್ದಾರೆ.. 

ಇದನ್ನೂ ಓದಿ-ಕಪಿಲ್‌ ಶೋ ಖ್ಯಾತಿಯ ನಟ ಕಿಕು ಶಾರದಾ ಕಪಾಳಕ್ಕೆ ಹೊಡೆದ ಕಿರಾಣಿ ಅಂಗಡಿ ಮಾಲೀಕ..! ವಿಡಿಯೋ ವೈರಲ್‌

ಅಭಿಷೇಕ್ ಬಚ್ಚನ್ ಆಗ ಬಾಲಿವುಡ್‌ನಲ್ಲಿ ಹೀರೋ ಆಗಿ ನಟಿಸದೆ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದ್ದು, ಶೂಟಿಂಗ್‌ಗಾಗಿ ಲೊಕೇಶನ್‌ಗಳನ್ನು ನೋಡಲು ವಿದೇಶಕ್ಕೆ ಬಂದಿದ್ದರು. ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅವರನ್ನು ಭೇಟಿಯಾದಾಗ, ನಟಿ ಅಲ್ಲಿ ತಮ್ಮ ಚಿತ್ರದ ಚಿತ್ರೀಕರಣದಲ್ಲಿದ್ದರು. ಇವರಿಬ್ಬರನ್ನೂ ಮೊದಲ ಬಾರಿಗೆ ಪರಿಚಯಿಸಿದ್ದು ಬಾಲಿವುಡ್ ನಟ ಬಾಬಿ ಡಿಯೋಲ್. 2000ನೇ ಇಸವಿಯಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಮೊದಲ ಬಾರಿಗೆ ಭೇಟಿಯಾದರು. 

ಮಾಧ್ಯಮ ವರದಿಗಳ ಪ್ರಕಾರ, ಧೈ ಅಕ್ಷರ್ ಪ್ರೇಮ್ ಕೆ ಚಿತ್ರದ ಶೂಟಿಂಗ್ ವೇಳೆ ಅಭಿಷೇಕ್ ಮತ್ತು ಐಶ್ವರ್ಯಾ ಸ್ನೇಹಿತರಾದರು. ಇದಾದ ನಂತರ ಇಬ್ಬರೂ ‘ಕುಚ್ ನಾ ಕಹೋ’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.  2006 ರ ವರ್ಷವು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಜೀವನಕ್ಕೆ ಹೆಚ್ಚು ವಿಶೇಷವಾಯಿತು. ಈ ವರ್ಷ ಇಬ್ಬರೂ ಗುರು, ಉಮ್ರಾವ್ ಜಾನ್ ಮತ್ತು ಧೂಮ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಅವಧಿಯಲ್ಲಿ ಇಬ್ಬರಿಗೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಅವಕಾಶವೂ ಸಿಕ್ಕಿತು. ಇದಾದ ಬಳಿಕ 2007ರಲ್ಲಿ ಇಬ್ಬರೂ ವಿವಾಹವಾದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News