ʼಆʼ ವಿಚಾರದಲ್ಲಿ ಮೆಗಾಸ್ಟಾರ್‌ಗಿಂತ ದಳಪತಿ ಬೆಸ್ಟ್.. ಕೀರ್ತಿ ಸುರೇಶ್ ಶಾಕಿಂಗ್‌ ಕಾಮೆಂಟ್‌!

Keerthy Suresh: ಕೀರ್ತಿ ಸುರೇಶ್ ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಕಡಿಮೆ ಸಮಯದಲ್ಲಿ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ.. ನೇನು ಶೈಲಜಾ ಚಿತ್ರದ ಮೂಲಕ ಪರಿಚಯವಾದ ಈ ಚೆಲುವೆ ಮಹಾನಟಿ ಚಿತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದರು.   

Written by - Savita M B | Last Updated : Aug 2, 2024, 12:43 PM IST
  • ಮಹಾನಟಿ ಸಿನಿಮಾದ ನಂತರ ನಟಿ ಕೀರ್ತಿ ಸುರೇಶ್‌ ಸತತವಾಗಿ ಟಾಪ್‌ ಹಿರೋಗಳ ಎದುರು ನಟಿಸಿ ದೊಡ್ಡ ಕ್ರೇಜ್‌ ಸೃಷ್ಟಿಸಿಕೊಂಡರು..
  • ಸೌತ್‌ ಬ್ಯೂಟಿ ಕೀರ್ತಿ ಸುರೇಶ್ ಸದ್ಯ ತೆಲುಗು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ʼಆʼ ವಿಚಾರದಲ್ಲಿ ಮೆಗಾಸ್ಟಾರ್‌ಗಿಂತ ದಳಪತಿ ಬೆಸ್ಟ್.. ಕೀರ್ತಿ ಸುರೇಶ್ ಶಾಕಿಂಗ್‌ ಕಾಮೆಂಟ್‌!  title=

 Keerthy Suresh Sensational Comment on Megastar: ಮಹಾನಟಿ ಸಿನಿಮಾದ ನಂತರ ನಟಿ ಕೀರ್ತಿ ಸುರೇಶ್‌ ಸತತವಾಗಿ ಟಾಪ್‌ ಹಿರೋಗಳ ಎದುರು ನಟಿಸಿ ದೊಡ್ಡ ಕ್ರೇಜ್‌ ಸೃಷ್ಟಿಸಿಕೊಂಡರು.. ಅಲ್ಲದೇ ತಮಿಳಿನಲ್ಲೂ ಸೂಪರ್ ಹಿಟ್ ಸಿನಿಮಾ ಮಾಡಿದರು.. 

ಸೌತ್‌ ಬ್ಯೂಟಿ ಕೀರ್ತಿ ಸುರೇಶ್ ಸದ್ಯ ತೆಲುಗು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇವುಗಳ ಜೊತೆಗೆ ಇದೀಗ ಬಾಲಿವುಡ್‌ನಲ್ಲೂ ತನ್ನ ಶಕ್ತಿ ತೋರಿಸಲು ನಟಿ ಸಿದ್ದವಾಗಿದ್ದಾರೆ.. ಸ್ಟಾರ್ ಹೀರೋಗಳ ಜೊತೆ ನಟಿಸಿ ಟಾಪ್ ಹೀರೋಯಿನ್ ಎನಿಸಿಕೊಂಡ ಕೀರ್ತಿ ಸದ್ಯ ರಘುತಾತ ಎಂಬ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಲೇಡಿ ಓರಿಯೆಂಟೆಡ್ ಸಿನಿಮಾ ಆಗಿದ್ದು, ಈ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

ಇದನ್ನೂ ಓದಿ-ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್‌..! ಸೋಷಿಯಲ್‌ ಮಿಡಿಯಾದಲ್ಲಿ ಸಂಚಲನ!!

ಈ ಸಿನಿಮಾ ಆಗಸ್ಟ್ 15 ರಂದು ತೆರೆಗೆ ಬರಲಿದ್ದು, ಈ ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಮೋಷನ್‌ ಕೆಲಸಗಳು ಜೆಟ್ ಸ್ಪೀಡ್‌ನಲ್ಲಿ ಸಾಗುತ್ತಿವೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್ ಭಾಗವಹಿಸಿದ್ದರು. ಈ ಸಂದರ್ಶನದಲ್ಲಿ ನಟಿ ಮಾಡಿದ ಕಾಮೆಂಟ್ ಈಗ ವೈರಲ್ ಆಗಿದೆ.. ಸದ್ಯ ನೆಟ್ಟಿಗರು ಕೀರ್ತಿಸುರೇಶ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. "ದಳಪತಿ ವಿಜಯ್ ಚಿರಂಜೀವಿಗಿಂತ ಉತ್ತಮವಾಗಿ ಡಾನ್ಸ್‌ ಮಾಡುತ್ತಾರೆ" ಎಂದು ಕೀರ್ತಿ ಸುರೇಶ್ ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಮೆಗಾ ಅಭಿಮಾನಿಗಳು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ-ʼಈ ಮೂವರೊಂದಿಗೆ ನನ್ನ ಮದುವೆಯಾಗಿದೆ.. ಅದಕ್ಕೇ ಹಣೆಗೆ ಸಿಂಧೂರ ಹಚ್ಚುತ್ತೇನೆ' ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ ರೇಖಾ!

ದಳಪತಿ ವಿಜಯ್ ಜೊತೆ ‘ಭೈರವ’ ಮತ್ತು ‘ಸರ್ಕಾರ್’ ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸಿದ್ದರು. ಅವರು ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ಭೋಲಾ ಶಂಕರ್ ಅವರ ಚಿತ್ರದಲ್ಲೂ ನಟಿಸಿದ್ದಾರೆ. ಈ ಚಿತ್ರದಲ್ಲಿ ಕೀರ್ತಿಸುರೇಶ್ ಚಿರಂಜೀವಿ ಅವರ ಸಹೋದರಿಯಾಗಿ ಕಾಣಿಸಿಕೊಂಡಿದ್ದಾರೆ. 

ಇದೀಗ ಕೀರ್ತಿಸುರೇಶ್ ಅವರ ಕಾಮೆಂಟ್‌ಗಳು ಸಂಚಲನ ಮೂಡಿಸಿದ್ದು, ದಳಪತಿ ವಿಜಯ್ ಮೇಲಿನ ಅಭಿಮಾನದಿಂದ ಆಕೆ ಹಾಗೆ ಹೇಳಿರಬಹುದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಮೆಗಾಸ್ಟಾರ್ ನ ಡ್ಯಾನ್ಸ್‌ ಬಗ್ಗೆ ಅವಮಾನ ಮಾಡಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ಟ್ರೋಲ್‌ಗಳಿಗೆ ಕೀರ್ತಿಸುರೇಶ್ ಹೇಗೆ ಪ್ರತಿಕ್ರಿಯಿಸುತ್ತಾರೋ ಕಾದುನೋಡಬೇಕಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News