ಪ್ರಭಾಸ್ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ! ಕಥೆ ಇದೇನಾ?

Prabhas Next Movie : ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮುಂಬರುವ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.   

Written by - Chetana Devarmani | Last Updated : Sep 25, 2023, 06:26 PM IST
  • ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್
  • ಪ್ರಭಾಸ್ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ
  • ಟಾಲಿವುಡ್‌ನ ಇತ್ತೀಚಿನ ಸೆನ್ಸೇಷನ್ ಶ್ರೀಲೀಲಾ
ಪ್ರಭಾಸ್ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ! ಕಥೆ ಇದೇನಾ?  title=

Prabhas - Sreeleela Movie: ಟಾಲಿವುಡ್‌ನ ಇತ್ತೀಚಿನ ಸೆನ್ಸೇಷನ್ ಶ್ರೀಲೀಲಾ ತಮ್ಮ ಕೈ ತುಂಬ ಸಿನಿಮಾಗಳೊಂದಿಗೆ ಲೀಡ್‌ನಲ್ಲಿದ್ದಾರೆ. ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ ಈ ಚೆಲುವೆ. ಸದ್ಯ ಶ್ರೀಲೀಲಾ ಕೈಯಲ್ಲಿ ಅರ್ಧ ಡಜನ್‌ಗೂ ಹೆಚ್ಚು ಸಿನಿಮಾಗಳಿವೆ. ರಾಮ್ ಜೊತೆ ನಟಿಸಿರುವ ಸ್ಕಂದ ಸಿನಿಮಾ ಇನ್ನು ಮೂರು ದಿನದಲ್ಲಿ ಬಿಡುಗಡೆಯಾಗಲಿದೆ. 

ಇನ್ನೊಂದೆಡೆ ಬಾಲಕೃಷ್ಣ ಜೊತೆ ಭಗವಂತ್ ಕೇಸರಿ, ಮಹೇಶ್ ಬಾಬು ಜೊತೆ ಗುಂಟೂರು ಖಾರಂ, ಪವನ್ ಕಲ್ಯಾಣ್ ಜೊತೆ ಉಸ್ತಾದ್ ಭಗತ್ ಸಿಂಗ್, ನಿತಿನ್ ಜೊತೆ ಎಕ್ಸ್‌ಟ್ರಾರ್ಡಿನರಿ ಮ್ಯಾನ್, ಮೆಗಾ ಹೀರೋ ವೈಷ್ಣವ್ ಜೊತೆ ಆದಿ ಕೇಶವ್ ಸಿನಿಮಾ ಮಾಡುತ್ತಿದ್ದಾರೆ. ಇದಲ್ಲದೆ ಇನ್ನೂ ಎರಡು ಕನ್ನಡ ಚಿತ್ರಗಳನ್ನು ಮಾಡಲಿದ್ದಾರೆ.

ಇದನ್ನೂ ಓದಿ: ಹೊಸ ಇತಿಹಾಸ ಬರೆದ ಶಾರುಖ್‌ ಸಿನಿಮಾ, 18 ನೇ ದಿನ 'ಜವಾನ್' ಗಳಿಕೆಯಲ್ಲಿ ಭಾರಿ ಜಿಗಿತ! 

ಇದೀಗ ಈ ಬ್ಯೂಟಿ ಲಿಸ್ಟ್ ಗೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕೂಡ ಸೇರಿಕೊಂಡಿದ್ದಾರೆಯಂತೆ. ಡಾರ್ಲಿಂಗ್ ಎದುರು ಧಮಾಕಾ ಬ್ಯೂಟಿ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ ನಡೆಯುತ್ತಿದೆ. 

ಸೀತಾರಾಮ್ ನಿರ್ದೇಶಕ ಹನು ರಾಘವಪುಡಿ ಕೆಲವು ತಿಂಗಳ ಹಿಂದೆ ಪ್ರಭಾಸ್‌ಗೆ ಕಥೆ ಹೇಳಿದ್ದರು ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ಕಥೆ ವಿಶ್ವಯುದ್ಧದ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕಥೆಯಾಗಿರಲಿದೆಯಂತೆ. ಈಗ ಈ ಸಿನಿಮಾದಲ್ಲಿ ಪ್ರಭಾಸ್ ಎದುರು ನಾಯಕಿಯಾಗಿ ಶ್ರೀಲೀಲಾ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಸುದ್ದಿ ನಿಜವಾದರೆ ಶ್ರೀಲೀಲಾಗೆ ಪ್ಯಾನ್ ಇಂಡಿಯಾ ನಾಯಕಿಯಾಗುವ ಅವಕಾಶ ಒದಗಬಹುದು. 

ಇದನ್ನೂ ಓದಿ : ಗೂಗ್ಲಿ ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ನಟಿ ಅಪೇಕ್ಷಾ ಮಗಳ ನಾಮಕರಣ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News