"ಶ್ರೀದೇವಿ ಸಾಯುವುದಕ್ಕೆ 5 ದಿನ ಮುನ್ನ ಮುಂಬೈನಲ್ಲೇ ಈ ಹಾವಿನ ವಿಷವನ್ನು ನೀಡಲಾಗಿತ್ತು": ಹಾಗಾದ್ರೇ ಈ ಗಂಭೀರ ಆರೋಪ ಮಾಡಿದ್ಯಾರು?

Sridevi: ಬಹುಭಾಷಾ ನಟಿ ಶ್ರೀದೇವಿಯ ಸಾವು ಸಹಜವಲ್ಲ, ಬದಲಾಗಿ ಹಾವಿನ ವಿಷದಿಂದ ಸಾಯಿಸಲಾಗಿದೆ ಎಂದು ದೀಪ್ತಿ ಪಿನ್ನಿಟ್ಟಿ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

Written by - Zee Kannada News Desk | Last Updated : Nov 13, 2023, 09:12 PM IST
  • ನಟಿ ಶ್ರೀದೇವಿಯ ದಿಢೀರನೇ ಸಾವಿನಪ್ಪಿದ ಸುದ್ದಿ ಹೊರಬರುತ್ತಿದ್ದಂತೆ ಅಭಿಮಾನಿಗಳು ಕುಸಿದು ಹೋಗಿದ್ದರು.
  • ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರೋ ಸಂದರ್ಶನದಲ್ಲಿ ಶ್ರೀದೇವಿಯನ್ನು ಹಾವಿನ ವಿಷದಿಂದ ಸಾಯಿಸಲಾಗಿದೆ ಎಂದು ದೀಪ್ತಿ ಪಿನ್ನಿಟ್ಟಿ ಹೇಳಿಕೆ ಕೊಟ್ಟಿದ್ದರು.
  • ದೀಪ್ತಿ ಪಿನ್ನಿಟಿ ಒಬ್ಬ ಉದ್ಯಮಿಯಾದರೂ, ಸ್ವಯಂ ಪ್ರೇರಿತರಾಗಿ ಸುಶಾಂತ್ ಸಿಂಗ್ ರಜಪೂತ್ ಹಾಗೂ ಶ್ರೀದೇವಿ ಸಾವಿನ ಬಗ್ಗೆ ಖಾಸಗಿಯಾಗಿ ತನಿಖೆ ಮಾಡುತ್ತಿದ್ದಾರೆ.
"ಶ್ರೀದೇವಿ ಸಾಯುವುದಕ್ಕೆ 5 ದಿನ ಮುನ್ನ ಮುಂಬೈನಲ್ಲೇ ಈ ಹಾವಿನ ವಿಷವನ್ನು ನೀಡಲಾಗಿತ್ತು": ಹಾಗಾದ್ರೇ ಈ ಗಂಭೀರ ಆರೋಪ ಮಾಡಿದ್ಯಾರು? title=

Srideviʼs Death: 'ಅತಿಲೋಕ ಸುಂದರಿ' ಶ್ರೀದೇವಿ ಫೆಬ್ರವರಿ 24, 2018ರಂದು  ದಿಢೀರನೇ ದುಬೈನಲ್ಲಿ ಸಾವಿನಪ್ಪಿದ  ಸುದ್ದಿ ಹೊರಬರುತ್ತಿದ್ದಂತೆ ಅಭಿಮಾನಿಗಳು ಕುಸಿದು ಹೋಗಿದ್ದರೇ, ಇನ್ನೊಂದು ಕಡೆ ಶ್ರೀದೇವಿ ಸಾವು ಆಕಸ್ಮಿಕವಲ್ಲ. ಅಲ್ಲಿ ನಟಿಯ ಕೊಲೆ ಆಗಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಕೆಲವರು ಬೋನಿ ಕಪೂರ್ ವಿರುದ್ಧವೇ ಅನುಮಾನವನ್ನು ವ್ಯಕ್ತಪಡಿಸಿದ್ದು, ಬಳಿಕ ದುಬೈ ಪೊಲೀಸರು ಶ್ರೀದೇವಿ ಸಾವು ಬಾತ್‌ಟಬ್‌ನಲ್ಲಿ ಮುಳುಗಿದ್ದರಿಂದಲೇ ಆಗಿದೆ ಎಂದು ಮರಣೋತ್ತರ ವರದಿ ನೀಡಿರೋದಾಗಿ ವರದಿಯಾಗಿತ್ತು. 

ಆದರೆ, ಅಸಲಿಗೆ ಅಲ್ಲಿ ಏನು ನಡೀತು ಅನ್ನೋದು ಇನ್ನೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದಕ್ಕೆ, ಕಾರಣ ದೀಪ್ತಿ ಪಿನ್ನಿಟಿ ಅನ್ನೋ ಮಹಿಳೆ ಮಾಡಿರೋ ಆರೋಪ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರೋ ಸಂದರ್ಶನದಲ್ಲಿ ಶ್ರೀದೇವಿಯನ್ನು ಹಾವಿನ ವಿಷದಿಂದ ಸಾಯಿಸಲಾಗಿದೆ ಎಂದು ದೀಪ್ತಿ ಪಿನ್ನಿಟ್ಟಿ ಹೇಳಿಕೆ ಕೊಟ್ಟಿದ್ದರು. ಸಂದರ್ಶನದಲ್ಲಿಈಕೆ ಕಳೆದ ಕೆಲವು ದಿನಗಳ ಹಿಂದಷ್ಟೇ ದೀಪ್ತಿ ಪಿನ್ನಿಟಿ  ಶ್ರೀದೇವಿಯ ನಿಗೂಢ ಸಾವಿನ ಬಗ್ಗೆ ಈ ಮಹಿಳೆ ಮಾಹಿತಿಯನ್ನು ಹಂಚಿಕೊಂಡಿದ್ದು, ಶ್ರೀದೇವಿ ಸಾವು ಸಹಜ ಅಲ್ಲ ಎಂದು ಹೇಳಿರೋದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

ಇದನ್ನು ಓದಿ: ಸಿಂಪಲ್‌ ಮ್ಯಾರೇಜ್‌ಗೆ ರೆಡಿಯಾದ ಪ್ರಥಮ್:‌ ಒಳ್ಳೆ ಹುಡುಗನ ಮದುವೆ ಯಾವತ್ತು ಗೊತ್ತೇ?

ದೀಪ್ತಿ ಪಿನ್ನಿಟಿ ಒಬ್ಬ ಉದ್ಯಮಿಯಾದರೂ, ಸ್ವಯಂ ಪ್ರೇರಿತರಾಗಿ ಸುಶಾಂತ್ ಸಿಂಗ್ ರಜಪೂತ್ ಹಾಗೂ ಶ್ರೀದೇವಿ ಸಾವಿನ ಬಗ್ಗೆ ಖಾಸಗಿಯಾಗಿ ತನಿಖೆ ಮಾಡುತ್ತಿದ್ದಾರೆ. ತನಗೆ ತನಿಖಾ ಸಂಸ್ಥೆಯೊಂದಿಗೆ ಸಂಪರ್ಕವಿರುವುದಾಗಿ ಹೇಳಿಕೊಂಡಿದ್ದು, ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಸಿಬಿಐಗೆ ಹಾರ್ಡ್ ಡ್ರೈ ನೀಡಿದ್ದಾಗಿ ಮಾಹಿತಿ ಹಂಚಿಕೊಂಡಿದ್ದರು. ಈಗ ಮಾಧ್ಯಮಗಳಲ್ಲಿ ಶ್ರೀದೇವಿ ಸಾವಿನ ಬಗ್ಗೆ ಆಗಿರುವ ವರದಿಗೂ ದುಬೈನಲ್ಲಿ ನಡೆದ ಘಟನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿಕೊಂಡಿದ್ದಾರೆ.

ದೀಪ್ತಿ ಪಿನ್ನಿಟಿ ತನಿಖೆಯ ಪ್ರಕಾರ ಶ್ರೀದೇವಿ ಸಾವು ಆಕಸ್ಮಿಕವಾಗದೆ, ಇವರನ್ನು ಮಾಮುಷಿ ಅನ್ನೋ ಡೇಂಜರಸ್ ಹಾವಿನ ವಿಷ ಕೊಟ್ಟು ಸಾಯಿಸಿರೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. "ನಾವು ಸಂಪೂರ್ಣ ತನಿಖೆಯನ್ನು ಮಾಡಿದಾಗ ಶ್ರೀದೇವಿಗೆ ಮಾಮುಷಿ ವಿಷವನ್ನು ಕೊಟ್ಟು ಸಾಯಿಸಿರೋದು ಗಮನಕ್ಕೆ ಬಂದಿದೆ. ಶ್ರೀದೇವಿ ಸಾಯುವುದಕ್ಕೆ 130 ಗಂಟೆಗಳ ಹಿಂದೆನೇ ವಿಷವನ್ನು ನೀಡಲಾಗಿದೆ. ಒರಿಜಿನಲ್ ಪೋಸ್ಟ್‌ ಮಾರ್ಟಮ್ ಪ್ರಕಾರ, ದುಬೈ ಸಮಯ ಸಂಜೆ 6.30ಕ್ಕೆ ಫೆಬ್ರವರಿ 23, 2018ರಂದೇ ಶ್ರೀದೇವಿ ಸಾವನ್ನಪ್ಪಿದ್ದರು." ಎಂದು ದೀಪ್ತಿ ಹೇಳಿಕೆ ಕೊಟ್ಟಿದ್ದಾರೆ. 

ಇದನ್ನು ಓದಿ: ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ದೀಪಾವಳಿ ಸೆಲಿಬ್ರೆಷನ್..‌!

ಇಷ್ಟೇ ಅಲ್ಲದೆ, " ಶ್ರೀದೇವಿ ಸಾಯುವುದಕ್ಕೆ 5 ದಿನ ಮುನ್ನ ಮುಂಬೈನಲ್ಲೇ ಈ ವಿಷವನ್ನು ನೀಡಲಾಗಿತ್ತು. ಇದು ನಿಧಾನವಾಗಿ ಒಂದೊಂದೇ ಅಂಗವನ್ನು ಡ್ಯಾಮೇಜ್ ಮಾಡಿದೆ. ಈ ವಿಷ ಎಲ್ಲಿಂದ ಬಂದಿದೆ? ಯಾರು ಕೊಟ್ಟಿದ್ದಾರೆ? ಅನ್ನೋದು ಗೊತ್ತಿದೆ. ಅದನ್ನು ಆನ್‌ಲೈನ್‌ನಲ್ಲಿ ರಿವೀಲ್ ಮಾಡುವ ಹಾಗಿಲ್ಲ." ಎಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಬೋನಿ ಕಪೂರ್ ಪತ್ನಿಯ ಸಾವಿನ ಬಗ್ಗೆ ಮಾತಾಡಿದ್ದರು. "ಶ್ರೀದೇವಿ ಸಾವು ಸಹಜ ಅಲ್ಲ ಆಕಸ್ಮಿಕ" ಎಂದಿದ್ದರು. " ಶ್ರೀದೇವಿ ತುಂಬಾ ಡಯೆಟ್ ಮಾಡುತ್ತಿದ್ದರು. ಯಾವಾಗಲೂ ಸುಂದರವಾಗಿ ಕಾಣಬೇಕು ಅನ್ನೋದು ಅವರ ಆಸೆಯಾಗಿತ್ತು. ಅವರು ಕುಸಿದು ಬೀಳುವುದು ಹೊಸದೇನು ಆಗಿರಲಿಲ್ಲ. ಈ ಹಿಂದೆ ಚಿತ್ರೀಕರಣದಲ್ಲಿ ಕುಸಿದು ಬಿದ್ದಿದ್ದನ್ನು ನಟ ನಾಗಾರ್ಜುನಾ ಕೂಡ ತಿಳಿದ್ದರು." ಎಂದು ಬೋನಿ ಕಪೂರ್ ಸಂದರ್ಶನ ಕೊಟ್ಟ ಬೆನ್ನಲ್ಲೇ ಆರೋಪ ಮಾಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News