Video:ಬಾಯ್ ಫ್ರೆಂಡ್ ಜೊತೆ ಮಾಜಿ ಭುವನ ಸುಂದರಿಯ 'ಪ್ರೇಮಯೋಗ'...!

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಹಾಗೂ ಮಾಡೆಲ್ ರೋಹ್ಮಾನ್ ಶಾಲ್ ಅವರ ನಡುವಿನ ಲವ್ವಿ ಡವ್ವಿ ಸಮಾಚಾರ ಈಗ ನಿಮಗೆ ಗೊತ್ತೇ ಇದೆ.

Last Updated : Dec 3, 2018, 02:26 PM IST
 Video:ಬಾಯ್ ಫ್ರೆಂಡ್ ಜೊತೆ ಮಾಜಿ ಭುವನ ಸುಂದರಿಯ 'ಪ್ರೇಮಯೋಗ'...!  title=
Photo courtesy: Instagram

ನವದೆಹಲಿ: ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಹಾಗೂ ಮಾಡೆಲ್ ರೋಹ್ಮಾನ್ ಶಾಲ್ ಅವರ ನಡುವಿನ ಲವ್ವಿ ಡವ್ವಿ ಸಮಾಚಾರ ಈಗ ನಿಮಗೆ ಗೊತ್ತೇ ಇದೆ.

ಇತ್ತೀಚಿಗೆ ಇಬ್ಬರು ಅಲ್ಲಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವುದು ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವುದುರ ಮೂಲಕ ತಮ್ಮ ಪ್ರೀತಿಯನ್ನು ಸಾಬೀತು ಪಡಿಸಿಸುತ್ತಿದ್ದಾರೆ.ಈ ಹಿಂದೆ ಈ ಇಬ್ಬರು ಮದುವೆಯಾಗುವ ಗಾಸಿಫ್ ಕೂಡ ಹರಡಿತ್ತು. ಆದರೆ ಸುಶ್ಮೀತಾ ಆಗ ತಮ್ಮ ಜೀವನವನ್ನು ರೋಹ್ಮಾನ್ಸಿಂಗ್ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು.

ಕೆಲವು ತಿಂಗಳ ಹಿಂದೆ ಅಷ್ಟೇ 27 ವರ್ಷ ವಯಸ್ಸಿನ ರೋಹ್ಮಾನ್ ಶಾಲ್ ಎನ್ನುವ ಮಾಡೆಲ್ ಇತ್ತೀಚಿಗೆ ಫ್ಯಾಶನ್ ಷೋವೊಂದರಲ್ಲಿ ಭೇಟಿಯಾಗಿದ್ದ ಸೇನ್, ಆಗಿನಿಂದ ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ.ಈಗ ಮದುವೆಗೂ ಕೂಡ ಮುಂದಾಗಿದ್ದಾರೆ ಎನ್ನುವ ಊಹಾಪೋಹ ಹರಡಿತ್ತು. ಇದಕ್ಕೆ ಪೂರಕ ಎನ್ನುವಂತೆ ಹಲವು ಪತ್ರಿಕೆಗಳು ಸಹಿತ ಈ ವಿಚಾರವಾಗಿ ವರದಿಯನ್ನು ಪ್ರಕಟ ಮಾಡಿದ್ದವು.

ಈಗ ಮತ್ತೊಮ್ಮೆ ರೋಹ್ಮಾನ್ ಶಾಲ್ ಜೊತೆಗಿನ ಪ್ರೀತಿ ಬಗ್ಗೆ ಬರೆದುಕೊಂಡಿರುವ ಸುಶ್ಮಿತಾ ಸೇನ್ " ಹೊಂದಾಣಿಕೆ ಎನ್ನುವುದು ಪ್ರೀತಿಗೆ ಹಾಕಿರುವ ಕಟ್ಟಪ್ಪಣೆ ಅಲ್ಲ, ಬದಲಾಗಿ ಅದು ಪ್ರೀತಿಗೆ ಸಿಕ್ಕಿರುವ ಗೆಲುವು' ಮತ್ತು ಅದೊಂದು ಧ್ಯಾನ ಸ್ಥಿತಿ ಜೊತೆಯಾಗುವಂತದ್ದು ಶಕ್ತಿ, ನಂಬಿಕೆ ಮತ್ತು ಅನಂತ ಸಾಮರ್ಥ್ಯವನ್ನು ಅರಿಯುವಂತದ್ದು" ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Trending News