Oscars 2023 Winner: ಭಾರತದ ​‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರಕ್ಕೆ ಒಲಿದ ಆಸ್ಕರ್‌

Oscars 2023 Winner The Elephant Whisperers : ಆಸ್ಕರ್ 2023 ಈವೆಂಟ್ ನಡೆಯುತ್ತಿದೆ ಮತ್ತು ಪ್ರಶಸ್ತಿಗಳ ಘೋಷಣೆಗಳು ನಡೆಯುತ್ತಿವೆ. 'ಅತ್ಯುತ್ತಮ ಡಾಕ್ಯುಮೆಂಟರಿ ಫೀಚರ್'ಗಾಗಿ ಆಸ್ಕರ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆಂದು ಇದೀಗ ಪ್ರಕಟಿಸಲಾಗಿದೆ. ಭಾರತೀಯ ಚಿತ್ರ 'ದಿ ಎಲಿಫೆಂಟ್ ವಿಸ್ಪರರ್ಸ್' ಗೆದ್ದಿದೆ.

Written by - Chetana Devarmani | Last Updated : Mar 13, 2023, 10:00 AM IST
  • Oscars 2023 ಈವೆಂಟ್
  • ​‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರಕ್ಕೆ ಒಲಿದ ಆಸ್ಕರ್‌
  • 'ಅತ್ಯುತ್ತಮ ಡಾಕ್ಯುಮೆಂಟರಿ ಫೀಚರ್'ಗಾಗಿ ಆಸ್ಕರ್ ಪ್ರಶಸ್ತಿ
Oscars 2023 Winner: ಭಾರತದ ​‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರಕ್ಕೆ ಒಲಿದ ಆಸ್ಕರ್‌  title=
The Elephant Whisperers

The Elephant Whisperers Oscars 2023 : ಆಸ್ಕರ್‌ ಅಂದರೆ ಅಕಾಡೆಮಿ ಪ್ರಶಸ್ತಿಗಳು ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿಗಳಾಗಿವೆ̤ ಈ ವರ್ಷ ಲಾಸ್ ಏಂಜಲೀಸ್‌ನಲ್ಲಿ ಆಸ್ಕರ್ 2023 ಈವೆಂಟ್ ನಡೆಯುತ್ತಿದೆ. ಈ ಪ್ರಶಸ್ತಿ ಕಾರ್ಯಕ್ರಮವು ಈ ವರ್ಷ ಭಾರತೀಯರಿಗೆ ಬಹಳ ವಿಶೇಷವಾಗಿದೆ ಮತ್ತು ಇದಕ್ಕೆ ಕಾರಣ ಭಾರತದಿಂದ ನಾಲ್ಕು ನಾಮನಿರ್ದೇಶನಗಳು. 

ಇದನ್ನೂ ಓದಿ : Oscars 2023 Winner: ʻನಾಟು ನಾಟುʼ ಹಾಡಿಗೆ ಆಸ್ಕರ್‌ ಪ್ರಶಸ್ತಿ, ಇತಿಹಾಸ ಸೃಷ್ಟಿಸಿದ RRR

ಈ ವರ್ಷವೂ ದೀಪಿಕಾ ಪಡುಕೋಣೆ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ. ಭಾರತಕ್ಕೆ ಈ ವರ್ಷದ ಮೊದಲ ಆಸ್ಕರ್ ಸಿಕ್ಕಿದ್ದು, ಈ ಪ್ರಶಸ್ತಿ ಸಮಾರಂಭದಲ್ಲಿ 'ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ'ವನ್ನು ಪ್ರಕಟಿಸಲಾಗಿದ್ದು, ಭಾರತದ 'ದಿ ಎಲಿಫೆಂಟ್ ವಿಸ್ಪರರ್ಸ್' ಪ್ರಶಸ್ತಿಯನ್ನು ಪಡೆದುಕೊಂಡಿದೆ. 

 

 

ನಾಟು ನಾಟುಗಿಂತ ಮೊದಲು 'ದಿ ಎಲಿಫೆಂಟ್ ವಿಸ್ಪರರ್ಸ್' ಭಾರತಕ್ಕೆ ಈ ವರ್ಷ ಆಸ್ಕರ್ ಪ್ರಶಸ್ತಿಯನ್ನು ತಂದಿದೆ. ಈ ಚಿತ್ರವು ಆಸ್ಕರ್ 2023 ರಲ್ಲಿ 'ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ' ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಸಾಕ್ಷ್ಯಚಿತ್ರವನ್ನು ಕಾರ್ತಿಕಿ ಗೊನ್ಸಾಲ್ವಿಸ್ ನಿರ್ದೇಶಿಸಿದ್ದಾರೆ ಮತ್ತು ಇದು ಅವರ ಮೊದಲ ಚಿತ್ರವಾಗಿದೆ. 

ಇದನ್ನೂ ಓದಿ : Photos: ಸಿನಿಮಾದ ಪಾತ್ರಕ್ಕಾಗಿ ಪೂರ್ತಿ ಬೆತ್ತಲಾದ ನಟಿಯರು ಇವರು

ಈ ಕಥೆಯು ಚಿಕ್ಕ ಆನೆ 'ರಘು'ವನ್ನು ಆರೈಕೆ ಮಾಡಿದ ಬೋಮನ್ ಮತ್ತು ಬೈಲಿ ದಂಪತಿಗಳ ಬಗ್ಗೆ ಹೇಳುತ್ತದೆ. ಈ ಭಾರತೀಯ-ಅಮೆರಿಕನ್ ಚಲನಚಿತ್ರವನ್ನು ತಮಿಳುನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಕಾರ್ತಿಕ್ ಜೊತೆಗೆ ಗುನ್ನೆಟ್ ಮೊಂಗಾ ನಿರ್ಮಿಸಿದ್ದಾರೆ. ಚಲನಚಿತ್ರವು 9 ನವೆಂಬರ್ 2022 ರಂದು ಅದರ ಜಾಗತಿಕ ಪ್ರಥಮ ಪ್ರದರ್ಶನವನ್ನು ಕಂಡಿತ್ತು ಮತ್ತು 8 ಡಿಸೆಂಬರ್ 2022 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಮಾಡಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News