Vijay Devarakonda- rashmika mandanna: ವಿಜಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ರಶ್ಮಿಕಾ ಮಂದಣ್ಣ! ಈ ದಿನ ನಡೆಯಲಿದೆ ಅದ್ಧೂರಿ ನಿಶ್ಚಿತಾರ್ಥ

Vijay Devarakonda- rashmika mandanna: ಬಹಳ ದಿನಗಳಿಂದ ಇಬ್ಬರ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಇವರಿಬ್ಬರ ನಿಶ್ಚಿತಾರ್ಥ ಹಾಗೂ ಮದುವೆ ಬಗ್ಗೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

Written by - Bhavishya Shetty | Last Updated : Jan 6, 2024, 10:27 PM IST
    • ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ
    • ನಿಶ್ಚಿತಾರ್ಥ ಹಾಗೂ ಮದುವೆ ಬಗ್ಗೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ
    • ಬಹಳ ದಿನಗಳಿಂದ ಇಬ್ಬರ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ
Vijay Devarakonda- rashmika mandanna: ವಿಜಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ರಶ್ಮಿಕಾ ಮಂದಣ್ಣ! ಈ ದಿನ ನಡೆಯಲಿದೆ ಅದ್ಧೂರಿ ನಿಶ್ಚಿತಾರ್ಥ title=
Vijay Devarakonda- rashmika mandanna

Vijay Devarakonda Rashmika Wedding News: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳು ತಮ್ಮ ನೆಚ್ಚಿನ ಜೋಡಿಯ ಮದುವೆ ವದಂತಿಗಳು ನಿಜವಾಗಲಿ ಎಂದು ಬಹಳ ದಿನಗಳಿಂದ ಹಾರೈಸುತ್ತಿದ್ದಾರೆ. ಅಷ್ಟೇ ಅಲ್ಲ, ಇವರಿಬ್ಬರು ಒಟ್ಟಿಗೆ ಕಂಡರೆ ಸಾಕು ಫ್ಯಾನ್ಸ್ ಖುಷಿಯಿಂದ ಕುಣಿದಾಡುತ್ತಾರೆ.

ಇದನ್ನೂ ಓದಿ: KGF ಮ್ಯೂಸಿಕ್ ಡೈರೆಕ್ಟರ್ ನಿಜವಾದ ಹೆಸರು ಹೀಗೆ… ರವಿ ಬಸ್ರೂರು ಅಂತ ಅಲ್ಲ! ಅವರೇ ಹೇಳಿದ ಸತ್ಯ

ಇನ್ನು ಈ ಬೆನ್ನಲ್ಲೇ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಬಹಳ ದಿನಗಳಿಂದ ಇಬ್ಬರ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಇವರಿಬ್ಬರ ನಿಶ್ಚಿತಾರ್ಥ ಹಾಗೂ ಮದುವೆ ಬಗ್ಗೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

'ಗೀತಾ ಗೋವಿಂದಂ' ಚಿತ್ರದ ಶೂಟಿಂಗ್ ವೇಳೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಭೇಟಿಯಾಗಿದ್ದರು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆ ನಂತರ ಇಬ್ಬರೂ 'ಡಿಯರ್ ಕಾಮ್ರೇಡ್' ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡರು, ಆದರೆ ಈ ಸಿನಿಮಾ ಪ್ರೇಕ್ಷಕರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ.

ಇನ್ನು ಯಾವುದೇ ಹಬ್ಬವಿರಲಿ, ವಿಜಯ್ ದೇವರಕೊಂಡ ಮನೆಗೆ ರಶ್ಮಿಕಾ ಮಂದಣ್ಣ ಬರುತ್ತಾರೆ ಎಂಬ ಚರ್ಚೆಗಳು ಬಹಳ ದಿನಗಳಿಂದ ನಡೆಯುತ್ತಿವೆ. ಇದಲ್ಲದೆ, ಇಬ್ಬರೂ ರಜೆಗಾಗಿ ಮಾಲ್ಡೀವ್ಸ್‌’ಗೆ ಹೋಗಿದ್ದಾರೆ ಎಂಬ ವದಂತಿಯೂ ಇದೆ.

ಇದನ್ನೂ ಓದಿ: ಕಿತ್ತಳೆ ಸಿಪ್ಪೆ ಎಂದೂ ಬಿಸಾಡದಿರಿ… 10 ನಿಮಿಷದಲ್ಲಿ ಬಿಳಿಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು!

ಇದೀಗ ವಿಜಯ್-ರಶ್ಮಿಕಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಇಬ್ಬರೂ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ, ಇದಕ್ಕೆ ಎರಡೂ ಕುಟುಂಬಗಳು ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದೆ. ಮಾಧ್ಯಮ ವರದಿಗಳಲ್ಲಿ, ಮೂಲವನ್ನು ಉಲ್ಲೇಖಿಸಿ, ಫೆಬ್ರವರಿ ಎರಡನೇ ವಾರದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗಿದೆ. ಈ ಹೇಳಿಕೆಗಳಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ನಂತರ ತಿಳಿಯಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News