Oscars 2023: 62 ವರ್ಷಗಳ ಹಳೆಯ ಸಂಪ್ರದಾವನ್ನು ಬ್ರೇಕ್ ಮಾಡಿತಾ ಆಸ್ಕರ್?

Oscars 2023: 62 ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದ ಸಂಪ್ರದಾಯವೊಂದನ್ನು ಆಸ್ಕರ್ ಬದಿಗೊತ್ತಿದೆ ಅದೇನು ಅಂತೀರಾ....

Written by - Zee Kannada News Desk | Last Updated : Mar 13, 2023, 04:48 PM IST
  • ರೆಡ್ ಕಾರ್ಪೆಟ್ ಬದಲಾಗಿ ಪಿಂಕು ಬಣ್ಣಕಾರ್ಪೆಟ್ ಬದಲಾಯಿಸಿದ ಆಸ್ಕರ್
  • 1967ರಲ್ಲಿ ಆಸ್ಕರ್ ಪ್ರಶಸ್ತಿ ಪ್ರಾರಂಭ
  • ಕಾರ್ಪೆಟ್ ಇವೆಂಟ್ ಜಗತ್ತಿನ ಪ್ರಮುಖ ಫ್ಯಾಷನ್ ಶೋ
Oscars 2023: 62 ವರ್ಷಗಳ ಹಳೆಯ ಸಂಪ್ರದಾವನ್ನು ಬ್ರೇಕ್ ಮಾಡಿತಾ ಆಸ್ಕರ್?  title=

Oscars 2023: 62 ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದ ಸಂಪ್ರದಾಯವೊಂದನ್ನು ಆಸ್ಕರ್ ಬದಿಗೊತ್ತಿದೆ ಅದೇನು ಅಂತೀರಾ....
ಹಲವು ಹಳೆಯ ಸಂಸ್ಥೆಗಳು ಹಳೆಯದಾಗುತ್ತಾ ಹೋದಂತೆ ನೆನಪಿಗಾಗಿ ಯಾವುದಾದರು ಒಂದು ಪದ್ದತಿಯನ್ನು ಹಾಗೆ ಉಳಿಸಿಕೊಳ್ಳುತ್ತಾ ಹೋಗುತ್ತೆ ಅದರ ಸಾಲಿನಲ್ಲಿ ಆಸ್ಕರ್ ವೇದಿಕೆಯು ಸೇರಿತ್ತು.

ಆದರೆ ಈ ಬಾರಿ ಪ್ರಶಸ್ತಿ ಸಮಾರಂಭರದಲ್ಲಿ ತುಸು ಬದಲಾವಣೆ ಮಾಡಿಕೊಂಡಿತ್ತು.. ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಾವ ಸಿನಿಮಾ ಯಾವ ಪ್ರಶಸ್ತಿ ಗಳಿಸಿತು, ಯಾವ ನಟ-ನಟಿಯರು ಪ್ರಶಸ್ತಿ ಪಡೆದರು ಎಂಬುದರ ಜೊತೆಗೆ, ರೆಡ್ ಕಾರ್ಪೆಟ್ ಮೇಲೆ ಯಾರು ಹೇಗೆ ಕಾಣಿಸಿಕೊಂಡರು, ಯಾವ ಉಡುಗೆ ತೊಟ್ಟರು, ಯಾವ ರೀತಿಯ ಫ್ಯಾಷನ್ ಮಾಡಿದರು, ಯಾರೊಟ್ಟಿಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು ಎಂಬುದು ಸಹ ಚರ್ಚೆಯಾಗುತ್ತದೆ.ಅಭಿಮಾನಿಗಳಿಗೆ ಅದೊಂದು ರೀತಿಯ ಕೂತುಹಾಲಕಾರಿ ಮೂಡಿಸುವ ವಿಷಯವು ಹೌದು!

ಇದನ್ನೂ ಓದಿ: Oscars 2023: ಆಸ್ಕರ್ ಪ್ರಶಸ್ತಿ ಕೈ ತಪ್ಪಿದ್ದ ಭಾರತೀಯ ಅತ್ಯುತ್ತಮ ಸಾಕ್ಷ್ಯಚಿತ್ರ ಯಾವುದು ಗೊತ್ತಾ?

 ಆದರೆ  ಈ ಬಾರಿ ಇದು ತುಸು ಬದಲಾದ ಕಾರ್ಪೆಟ್ ಇರುತ್ತದೆಯಾದರೂ  ಬೇರೆ  ಬಣ್ಣದಿಂದ ಕಂಗೊಳಿಸುತ್ತಿತ್ತು. ಕೆಂಪು ಬಣ್ಣದ ನೆಲಹಾಸಿನ ಬದಲಿಗೆ ತಿಳಿ ಪಿಂಕು ಬಣ್ಣ ಅಥವಾ ಮರಳಿನ ಬಣ್ಣದಿಂದ  ನೆಲಹಾಸು ಸೆಳೆಯುತ್ತಿತ್ತು.  ಇದರ ಮೇಲೆ ಹಲವು ದೇಶಗಳ ಸೆಲೆಬ್ರಿಟಿಗಳು ವಯ್ಯಾರದಿಂದ ನಡೆದಿದ್ದು ಇದರ ಮೇಲೆ  ತಮ್ಮ ಫ್ಯಾಷನ್ ಸೆನ್ಸ್ ಪ್ರದರ್ಶಿಸಿದ್ದಾರೆ. 1961 ರಲ್ಲಿ ಪ್ರಾರಂಭವಾದ ಆಸ್ಕರ್​ ವೇದಿಕೆ ಇಂದಿಗೆ 94 ವರ್ಷಗಳ ಸಂಭ್ರಮಕ್ಕೆ ಸಾಕ್ಷಿಯಾಯಿತು.. ರೆಡ್ ಕಾರ್ಪೆಟ್ ಕೆಂಪು ಬಣ್ಣದಲ್ಲಿಯೇ ಇತ್ತು. ಆದರೆ ಈ ಬಾರಿ ವಿಭಿನ್ನ ರೀತಿಯಲ್ಲಿ ಆಚರಿಸಲು ಇದು ಸಹ ಕಾರವಾಗಿದೆ..   ಆಸ್ಕರ್​ನ ಕ್ರಿಯೇಟಿವ್ ಕಂಸಲ್ಟಂಟ್​ಗಳಾದ ಲೀಸಾ ಲವ್, ರಾವಲ್ ಅವಿಲಾ ಇನ್ನಿತರರು ಸೇರಿ ಬದಲಾಯಿಸಿದ್ದಾರೆ. 

ಇದನ್ನೂ ಓದಿ: Oscars 2023 Winner: ಭಾರತದ ​‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರಕ್ಕೆ ಒಲಿದ ಆಸ್ಕರ್‌

 ರೆಡ್ ಕಾರ್ಪೆಟ್ ಪ್ರಾರಂಭವಾಗಿದ್ದು 62 ವರ್ಷಗಳ ಹಿಂದೆ  ಆದರೆ ಈ ರೆಡ್ ಕಾರ್ಪೆಟ್ ಜನರ ಗಮನ ಸೆಳೆಯಲು ಆರಂಭಿಸಿದ್ದು 1967 ರಿಂದ ಏಕೆಂದರೆ ಆಗಿನಿಂದಲೇ ಆಸ್ಕರ್​ ನೇರ ಪ್ರಸಾರ ಬಣ್ಣಗಳಲ್ಲಿ ಪ್ರಸಾರವಾಗಲು ಆರಂಭಿಸಿದ್ದು. ಆಗಿನಿಂದಲೂ ರೆಡ್ ಕಾರ್ಪೆಟ್ ಕೆಂಪು ಬಣ್ಣದಲ್ಲಿಯೇ ಇತ್ತು. ಆದರೆ ಈ ಬಾರಿ ಹಠಾತ್ತನೆ ಇದನ್ನು ಬದಲಾಯಿಸಿದ್ದಕ್ಕೆ ವಿಶೇಷ ಕಾರಣವೇನೂ ಇಲ್ಲ. ಬದಲಾವಣೆ ಇರಲೆಂಬ ಕಾರಣಕ್ಕೆ ಆಸ್ಕರ್​ನ ಕ್ರಿಯೇಟಿವ್ ಕಂಸಲ್ಟಂಟ್​ಗಳಾದ ಲೀಸಾ ಲವ್, ರಾವಲ್ ಅವಿಲಾ ಇನ್ನಿತರರು ಸೇರಿ ಬದಲಾಯಿಸಿದ್ದಾರೆ. ಅಕಾಡೆಮಿ ಮೋಷನ್ ಪಿಕ್ಚರ್ಸ್​ ನವರು ಸಹ ಒಪ್ಪಿಗೆ ಸೂಚಿಸಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News