ದೀಪಿಕಾ ಧರಿಸಿರುವ ಈ ಡ್ರೆಸ್ ನೋಡಿ ಜನ ಏನಂದ್ರು ನೀವೇ ಓದಿ

ಕೆಲವರು ಇಂತಹ ಡ್ರೆಸ್ ನಲ್ಲಿ ಯಾರೂ ತರಕಾರಿಗಳನ್ನು ಸಹ ಖರೀದಿಸಲು ಹೋಗುವುದಿಲ್ಲ ಎಂದಿದ್ದಾರೆ.

Written by - Nitin Tabib | Last Updated : Dec 30, 2019, 08:35 PM IST
ದೀಪಿಕಾ ಧರಿಸಿರುವ ಈ ಡ್ರೆಸ್ ನೋಡಿ ಜನ ಏನಂದ್ರು ನೀವೇ ಓದಿ title=

ನವದೆಹಲಿ: ಖ್ಯಾತ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ನಟಿ ದೀಪಿಕಾ ಪಡುಕೋಣೆ ತಮ್ಮ ಮುಂಬರುವ ಚಿತ್ರ 'ಛಪಾಕ್'ಮ ಪ್ರಮೋಶನ್ ಕಾರ್ಯದಲ್ಲಿ ವ್ಯಸ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಮೋಶನ್ ಮಾಡಲು ದೀಪಿಕಾ ಸೋಮವಾರ ಮುಂಬೈನ ಜೂಹುನಲ್ಲಿರುವ JW ಮೆರಿಯಟ್ ಗೆ ತಲುಪಿದ್ದಾರೆ. ಆದರೆ, ಈ ಸಂದರ್ಭದಲ್ಲಿ ದೀಪಿಕಾ ತೊಡದ ಉಡುಗೆ ಅವರ ಅಭಿಮಾನಿಗಳ ಟ್ರೋಲ್ ಗೆ ಗುರಿಯಾಗಿದೆ. ದೀಪಿಕಾ ಧರಿಸಿರುವ ಈ ಉಡುಗೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ಸಕತ್ ಟ್ರೋಲ್ ಮಾಡುತ್ತಿದ್ದಾರೆ. ವಿಷಯ ಏನು ಅಂದರೆ, ಈ ಸಂದರ್ಭದಲ್ಲಿ ದೀಪಿಕಾ ವೈಟ್ ಮೆಲುಡುಗೆಯ ಮೇಲೆ ಬ್ರಾಲೆಟ್ ಧರಿಸಿದ್ದಾರೆ. ಸದ್ಯ ದೀಪಿಕಾ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ದೀಪಿಕಾ ಅವರ ಈ ಫೋಟೋಗಳಿಗೆ ಕಾಮೆಂಟ್ ಮಾಡಲಾರಂಭಿಸಿದ್ದು, ಜನರು ಇದು ರಣವೀರ್ ಸಾಂಗತ್ಯದ ಪರಿಣಾಮ ಎಂದಿದ್ದಾರೆ. ಕೆಲ ದಿನಗಳಿಂದ ರಣವೀರ್ ಸಿಂಗ್ ಕೂಡ ಇಂತಹುದೇ ವಿಚಿತ್ರ ಡ್ರೆಸ್ ಧರಿಸಿ ಕಾಣಿಸಿಕೊಳ್ಳುತ್ತಿರುವುದು ಇಲ್ಲಿ ಉಲ್ಲೇಖನೀಯ. ಇನ್ನೊಂದೆಡೆ ಇಂತಹ ಡ್ರೆಸ್ ಧರಿಸಿ ಪ್ರಮೋಶನ್ ಬಿಡಿ, ಜನರು ತರಕಾರಿ ಖರೀದಿಸಲು ಕೂಡ ಹೋಗುವುದಿಲ್ಲ ಎಂದು ಕೆಲವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅದೇನೇ ಇರಲಿ 'ಛಪಾಕ್' ಚಿತ್ರದ ಮೂಲಕ ದೀಪಿಕಾ ಚಿತ್ರ ನಿರ್ಮಾಣಕ್ಕೆ ಅಡಿ ಇಡುತ್ತಿದ್ದಾರೆ. 'ಛಪಾಕ್', ದೀಪಿಕಾ ಅವರ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿರುವ ಮೊದಲ ಚಿತ್ರವಾಗಿದೆ. ಈ ಚಿತ್ರದಲ್ಲಿ ವಿಕ್ರಾಂತ್ ಮೈಸಿ ಅವರು ದೀಪಿಕಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ರಾಂತ್ ಓರ್ವ ಪತ್ರಕರ್ತನ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ನ್ಯಾಯದ ಹೋರಾಟದಲ್ಲಿ ಮಾಲತಿ ಅಂದರೆ ದೀಪಿಕಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ಚಿತ್ರ ಜನವರಿ 10, 2020ರಂದು ಬೆಳ್ಳಿ ಪರದೆಗೆ ಬರಲಿದೆ.

ಆಸಿಡ್ ದಾಳಿಯಿಂದ ಬದುಕುಳಿದ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಲಕ್ಷ್ಮಿ ಅಗರವಾಲ್ ಅವರ ಬದುಕನ್ನು ಆಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆ. ಈ ಚಿತ್ರದಲ್ಲಿ ದೀಪಿಕಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ದೀಪಿಕಾ ಮಾಲತಿ ಹೆಸರಿನ ಮಹಿಳೆಯ ಪಾತ್ರ ನಿರ್ವಹಿಸುತ್ತಿದ್ದು, ಇದೇ ಮೊದಲ ಬಾರಿಗೆ ಅವರು ಮೇಘನಾ ಗುಲ್ಜಾರ್ ಅವರ ನಿರ್ದೇಶನದ ಅಡಿ ಕೆಲಸ ಮಾಡಿದ್ದಾರೆ.

Trending News