ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಡಿ ಬಾಸ್‌..!

D Boss : ಪ್ರತಿಯೊಬ್ಬರು ಒಂದೊಂದು ದೇವರನ್ನು ನಂಬುತ್ತಾರೆ. ಹಾಗೆಯೇ ನಟ ದರ್ಶನ್‌ ಕೂಡ ತಿರುಪತಿ ತಿಮ್ಮಪ್ಪನನ್ನು ಹೆಚ್ಚು ನಂಬುತ್ತಾರೆ. ಅಲ್ಲದೆ ಅವರು ಆಗಾಗ ಬಿಡುವಿನ ಸಮಯದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯವುದು ಎಲ್ಲರಿಗೂ ತಿಳಿದಿರೋ ವಿಷಯ. ಈಗ ಮತ್ತೆ ದರ್ಶನ್‌ ತಮ್ಮ ಆಪ್ತರಂದಿಗೆ ತಿರುಪತಿ ದರ್ಶನ ಪಡೆದಿದ್ದಾರೆ.   

Written by - Zee Kannada News Desk | Last Updated : Mar 8, 2023, 08:35 PM IST
  • ಈ ಬಾರಿ ಕೂಡ ಆತ್ಮೀಯ ಗೆಳೆಯರಾಗಿರುವ ಸಚ್ಚಿದಾನಂದ ಜೊತೆಯಾಗಿದ್ದಾರೆ.
  • ಚಾಲೆಂಜಿಂಗ್‌ ಸ್ಟಾರ್‌ ಬಹುನೀರಿಕ್ಷಿತ ಸಿನಿಮಾ ಕ್ರಾಂತಿ ಸಿನಿಮಾ ಬಿಡುಗಡೆಯಾಗಿ ಒಟಿಟಿಯಲ್ಲೂ ಸದ್ದು ಮಾಡುತ್ತಿದೆ.
  • 'ಕಾಟೇರ' ಸಿನಿಮಾವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಡಿ ಬಾಸ್‌..!  title=
Photo Credits : — D Fans Company ® official (@Dfanscompany)

ಕ್ರಾಂತಿ ಸಿನಿಮಾಗಿಂತ ಮುಂಚೆ ದರ್ಶನ್‌ ತಿಮ್ಮಪ್ಪನ ದರ್ಶನ ಪಡೆದಿದ್ದರು. ಆ ವೇಳೆ ದರ್ಶನ್ ಆತ್ಮೀಯರಾಗಿದ್ದ ಸಚ್ಚಿದಾನಂದ ಹಾಗೂ ಎಂಎಲ್‌ಎ ಸತೀಶ್ ರೆಡ್ಡಿ ಕೂಡ ಚಾಲೆಂಜಿಂಗ್‌ ಸ್ಟಾರ್‌ಗೆ ಜೊತೆಯಾಗಿದ್ದರು. 

ಈಗ ಮತ್ತೆ ಚಾಲೆಂಜಿಂಗ್ ಸ್ಟಾರ್ ತಿರುಪತಿಯಲ್ಲಿ ಭೇಟಿ ಕೊಟ್ಟಿದ್ದಾರೆ. ಈ ಬಾರಿ ಕೂಡ ಆತ್ಮೀಯ ಗೆಳೆಯರಾಗಿರುವ ಸಚ್ಚಿದಾನಂದ ಜೊತೆಯಾಗಿದ್ದಾರೆ. ಇವರೊಂದಿಗೆ 'ಮೆಜೆಸ್ಟಿಕ್' ಸಿನಿಮಾದ ನಿರ್ಮಾಪಕ ಎಂ ಜಿ ರಾಮಮೂರ್ತಿ ಕೂಡ ಜೊತೆಯಾಗಿದ್ದರು. ಆ ಫೋಟೊಗಳನ್ನು ದರ್ಶನ್ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದು, ಇವು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

ಇದನ್ನೂ ಓದಿ-Womens Day 2023 : ಕ್ಯಾನ್ಸರ್ ಮಹಾಮಾರಿ ವಿರುದ್ದ ಹೋರಾಡಿ ಗೆದ್ದ ಸಾಹಸಿ ನಟಿ ; ಹಂಸ ನಂದಿನಿ 

ಚಾಲೆಂಜಿಂಗ್‌ ಸ್ಟಾರ್‌ ಬಹುನೀರಿಕ್ಷಿತ ಸಿನಿಮಾ ಕ್ರಾಂತಿ ಸಿನಿಮಾ ಬಿಡುಗಡೆಯಾಗಿ ಒಟಿಟಿಯಲ್ಲೂ ಸದ್ದು ಮಾಡುತ್ತಿದೆ.  ಇದಲ್ಲದೇ ಡಿ ಬಾಸ್‌ ತರುಣ್ ಸುಧೀರ್ ನಿರ್ದೇಶಿಸುತ್ತಿರುವ ಈ ಸಿನಿಮಾಗೆ 'ಕಾಟೇರ' ಅನ್ನೋ ಟೈಟಲ್ ಫಿಕ್ಸ್ ಮಾಡಲಾಗಿದೆ. 'ಕಾಟೇರ' ಸಿನಿಮಾವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ಈ ಮಧ್ಯೆನೇ ದರ್ಶನ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದಾರೆ. ಅಂದ್ಹಾಗೆ ಈ ಸಿನಿಮಾದಲ್ಲಿ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಜೊತೆ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಹುಟ್ಟುಹಬ್ಬದಂದು ನಾಲ್ಕೈದು ಸಿನಿಮಾ ಅನೌನ್ಸ್ ಆಗಿವೆ. ಆ ಸಿನಿಮಾಗಳಿಗಾಗಿ ಇಡೀ ದರ್ಶನ್‌ ಅಭಿಮಾನಿ ಬಳಗವೇ ಕಾತುರದಿಂದ ಕಾಯುತ್ತಿದೆ.

ಇದನ್ನೂ ಓದಿ-Power Star Pawan : ವೇದಿಕೆ ಮೇಲಿದ್ದ ʼಪವರ್ ಸ್ಟಾರ್ ಪವನ್ʼ ಮೇಲೆ ದಾಳಿ..! ವಿಡಿಯೋ ವೈರಲ್‌ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 
 

Trending News