ಬೆಂಗಳೂರು: ರಮ್ಯ ದಿವ್ಯಸ್ಪಂದನ ಎಂದರೆ ಈಗ ಕೇವಲ ನಟಿ ಮಾತ್ರವಲ್ಲ ಯಶಸ್ವಿ ರಾಜಕಾರಣಿಯೂ ಕೂಡ, ಇತ್ತೀಚಿನ ಕೆಲವು ವರ್ಷಗಳಲ್ಲಿ ನಟನೆಯಿಂದ ದೂರ ಸರಿದು ವೃತ್ತಿಪರ ರಾಜಕಾರಣಕ್ಕೆ ದಾಪುಗಾಲು ಇಡುತ್ತಿರುವ ರಮ್ಯ, ಕರ್ನಾಟಕದ ಪಾಲಿಗೆ ಒಂದು ರೀತಿಯ ಯೂಥ್ ಐಕಾನ್ ಎಂದು ಹೇಳಬಹುದು.
Happy birthday @divyaspandana . Wishing you good health, happiness & success for the year ahead!
— Siddaramaiah (@siddaramaiah) November 29, 2017
ಹೌದು, 2003 ರಲ್ಲಿ ಪುನೀತ್ ರಾಜಕುಮಾರ್ ಅಭಿನಯದ 'ಅಭಿ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ದಶಕಗಳ ಕಾಲ ಚಂದನವನದ ಬೆಳ್ಳಿತೆರೆಯಲ್ಲಿ ರಾಣಿಯಾಗಿ ಮೆರೆದ ರಮ್ಯ ತಮ್ಮ ಯಶಶ್ವಿ ಚಿತ್ರಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸಿದರು.ತದಂತರ ರಾಜಕಾರಣದ ಇನ್ನೊಂದು ಇನ್ನಿಂಗ್ಸ್ ಗೆ ದಾಪುಗಾಲಿಟ್ಟರಲ್ಲದೆ ಮಂಡ್ಯದ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೆಲುವಿನ ನಗೆ ಬೀರಿದ್ದರು. ಆದರೆ ನಂತರ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕೇವಲ 5000 ಮತಗಳ ಅಂತರದಿಂದ ಸೋತಿದ್ದರು.
ಅದಾದ ನಂತರ ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ರಮ್ಯ ಇಂದು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮತ್ತು ಸಂಪರ್ಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಹೀಗೆ ಸಿನಿಮಾದಿಂದ ರಾಜಕಾರಣದಲ್ಲಿ ಭವಿಷ್ಯ ಕಂಡುಕೊಳ್ಳಲು ಯತ್ನಿಸುತ್ತಿರುವ ರಮ್ಯಾಗೆ ಇಂದು 34ನೇ ಹುಟ್ಟು ಹಬ್ಬದ ಸಂಭ್ರಮ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಟ್ವೀಟ್ ಮೂಲಕ ರಮ್ಯಾಗೆ ಶುಭಾಶಯಗಳನ್ನು ಕೋರಿದ್ದಾರೆ,ಹಾಗಾದರೆ ಅವರ ಈ ಹೊಸ ಪಾತ್ರಕ್ಕೆ ನಿಮ್ಮ ಹಾರೈಕೆಗಳು ಇರಲಿ.