Kabzaa : ʼಕಬ್ಜʼ ನೋಡುವ ಮೊದಲು ನೀವು ನೋಡಲೇಬೇಕಾದ ಟ್ಟೀಟ್‌ಗಳಿವು..!

Kabzaa Review : ನಟ ಉಪೇಂದ್ರ, ಕಿಚ್ಚ ಸುದೀಪ್‌ ಹಾಗೂ ಶಿವರಾಜಕುಮಾರ್‌ ನಟನೆಯ ಬಹುನಿರೀಕ್ಷಿತ ಕನ್ನಡದ ಪ್ಯಾನ್‌ ಇಂಡಿಯಾ ಸಿನಿಮಾ ಕಬ್ಜ ತೆರೆ ಕಂಡಿದೆ. ಆರ್‌. ಚಂದ್ರು ಸಿನಿಮಾ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಬ್ಜಕ್ಕೆ ಪ್ರೇಕ್ಷಕ ಫಿದಾ ಆಗಿದ್ದು, ಥಿಯೇಟರ್‌ಗಳತ್ತ ಮುಖ ಮಾಡುತ್ತಿದ್ದಾರೆ.

Written by - Krishna N K | Last Updated : Mar 17, 2023, 11:37 AM IST
  • ಬಹುನಿರೀಕ್ಷಿತ ಕನ್ನಡದ ಪ್ಯಾನ್‌ ಇಂಡಿಯಾ ಸಿನಿಮಾ ಕಬ್ಜ ತೆರೆ ಕಂಡಿದೆ.
  • ಆರ್‌. ಚಂದ್ರು ಸಿನಿಮಾ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
  • ಕಬ್ಜಕ್ಕೆ ಪ್ರೇಕ್ಷಕ ಫಿದಾ ಆಗಿದ್ದು, ಥಿಯೇಟರ್‌ಗಳತ್ತ ಮುಖ ಮಾಡುತ್ತಿದ್ದಾರೆ.
Kabzaa : ʼಕಬ್ಜʼ ನೋಡುವ ಮೊದಲು ನೀವು ನೋಡಲೇಬೇಕಾದ  ಟ್ಟೀಟ್‌ಗಳಿವು..! title=

Kabzaa tweet Review : ಸ್ಯಾಂಡಲ್‌ವುಡ್‌ ಸೂಪರ್ ಸ್ಟಾರ್ ಉಪೇಂದ್ರ ನಟನೆಯ ಆರ್‌. ಚಂದ್ರು ನಿರ್ದೇಶನಕ ಕಬ್ಜ ಚಿತ್ರ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್, ಶ್ರಿಯಾ ಸರಣ್ ಮತ್ತು ಶಿವ ರಾಜ್‌ಕುಮಾರ್ ನಟಿಸಿದ್ದಾರೆ. ಕನ್ನಡ, ಮಲಯಾಳಂ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ 4,000 ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ.

ಕಬ್ಜದ ಕಥಾವಸ್ತುವು ಗಾಂಧಿವಾದಿ ಅನುಯಾಯಿ ಮತ್ತು ಕ್ರೂರವಾಗಿ ದಾಳಿಗೊಳಗಾದ ಸ್ವಾತಂತ್ರ್ಯ ಹೋರಾಟಗಾರನ ಸುತ್ತ ಸುತ್ತುತ್ತದೆ. ಅನಿವಾರ್ಯ ಸಂದರ್ಭಗಳಿಂದಾಗಿ, ಸ್ವಾತಂತ್ರ್ಯ ಹೋರಾಟಗಾರ ಮಗ ಮಾಫಿಯಾ ಜಗತ್ತಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಈ ಕಥೆಯು 1942 ರಿಂದ 1986 ರ ನಡುವೆ ಸುತ್ತುತ್ತದೆ. ಈ ವಾರಾಂತ್ಯದಲ್ಲಿ ನೀವು ಕಬ್ಜವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಯೋಜಿಸುತ್ತಿದ್ದರೆ, ಪ್ಯಾನ್-ಇಂಡಿಯಾ ಆಕ್ಷನ್ ಬಗ್ಗೆ ಸಾಮಾಜಿಕ ಮಾಧ್ಯಮಗಳು ಏನು ಹೇಳುತ್ತದೆ ಎಂಬುದನ್ನು ನೋಡಿ.

ಆರ್ ಚಂದ್ರು ನಿರ್ದೇಶನದ ಈ ಚಿತ್ರವನ್ನು ನಿರ್ಮಾಪಕ ಅಶೋಕ್ ಪಂಡಿತ್ ಹಿಂದಿಯಲ್ಲಿ ವಿತರಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ವಿತರಕರು, “ಚಿತ್ರವು ಭೂಗತ ಜಗತ್ತಿನ ಕಾಲ್ಪನಿಕ ಕಥೆಯಾಗಿದ್ದು, ಯಾವುದೇ ಭೂಗತ ಪಾತಕಿಯಿಂದ ಸ್ಫೂರ್ತಿ ಪಡೆದಿಲ್ಲ. 'ಕಬ್ಜಾ' ಚಿತ್ರವು ಸ್ವಾತಂತ್ರ್ಯದ ಅವಧಿಯನ್ನು ಬಿಂಬಿಸುವ ಅವಧಿಯ ಚಿತ್ರವಾಗಿದೆ. ಅಂಡರ್‌ವರ್ಲ್ಡ್ ಅಂತಹ ಒಂದು ವಿಷಯವಾಗಿದ್ದು ಅದು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಸ್ಟ್ರೈಕ್ ರೇಟ್ ಹೊಂದಿದೆ ಎಂದಿದ್ದಾರೆ.

 

 

 

ಇದನ್ನೂ ಓದಿ: ಸಾಕಷ್ಟು ಪ್ರಶಸ್ತಿ, ಸೂಪರ್‌ ಸ್ಟಾರ್‌ ಮಗ.. ʼಬೆಟ್ಟದ ಹೂವಿʼಗೆ ಅಹಂಕಾರವೇ ಇರಲಿಲ್ಲ

ಕಬ್ಜಾ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಶ್ರಿಯಾ ಸರಣ್ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ʼನನಗೆ ಮೊದಲು ಈ ಸಿನಿಮಾದಲ್ಲಿ ಇಷ್ಟು ಹೀರೋಗಳಿದ್ದಾರೆ. ಇವರ ನಡುವೆ ನನ್ನ ಪಾತ್ರ ಏನು, ನನಗೇನಾದರೂ ಪಾತ್ರವಿದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಇದ್ದವು. ಆದ್ರೆ ಆರ್ ಚಂದ್ರು ನನಗೆ ಕಥೆಯನ್ನು ಹೇಳುತ್ತಿದ್ದಾಗ, ಅವರ ಕಣ್ಣಲ್ಲಿ ಕಂಡ ಉತ್ಸಾಹ ನೋಡಿದ ನಂತರ ಈ ಚಿತ್ರದಲ್ಲಿ ಎನೋ ಅಡಗಿದೆ ಎನ್ನುವ ಭಾವನೆ ಬಂತು ಅಂತ ನಟಿ ಶ್ರಿಯಾ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News