ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದ Varun Dhawan-Natasha Dalal

ವರುಣ್ ಧವನ್ ಮತ್ತು ನಟಾಶಾ ದಲಾಲ್ ಅವರು ಜನವರಿ 24, 2021 ರಂದು ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ವಧು ನತಾಶಾ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದ್ದು ಅದರಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

Written by - Yashaswini V | Last Updated : Jan 25, 2021, 09:22 AM IST
  • ವರುಣ್-ನಟಾಶಾ ಸಂತೋಷದಿಂದ ಮದುವೆಯಾಗಿದ್ದಾರೆ
  • ವಧು-ವರರ ಅಲಂಕಾರದಲ್ಲಿ ಈ ಜೋಡಿ ಎಲ್ಲರ ಕಣ್ಮನ ಸೆಳೆಯಿತು
  • ನಟಾಶಾ ವಧುವಿನ ನೋಟದಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣುತ್ತಿದ್ದರು
ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದ Varun Dhawan-Natasha Dalal

ನವದೆಹಲಿ: ಬಾಲಿವುಡ್ ನಟರಾದ ವರುಣ್ ಧವನ್ ಮತ್ತು ನಟಾಶಾ ದಲಾಲ್ ಅವರು ಜನವರಿ 24, 2021 ರಂದು ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಜನವರಿ 24 ರಂದು ಅಲಿಬಾಗ್ ನ  'ದಿ ಮ್ಯಾನ್ಷನ್ ಹೌಸ್' ನಲ್ಲಿ ಇವರಿಬ್ಬರು ವಿವಾಹವಾದರು. ಅವರ ಮದುವೆ ಸಂಪೂರ್ಣವಾಗಿ ಖಾಸಗಿ ಸಮಾರಂಭವಾಗಿತ್ತು. ವರದಿಗಳ ಪ್ರಕಾರ ವಿವಾಹದ ಮುಖ್ಯ ಕಾರ್ಯಕ್ರಮ ಸಂಜೆ 5: 45 ಕ್ಕೆ ಪ್ರಾರಂಭವಾಯಿತು.

ಆಫ್ ವೈಟ್ ಲೆಹೆಂಗಾದೊಂದಿಗೆ ಕಂಗೊಳಿಸಿದ ವಧು :
ಖ್ಯಾತ ಬಾಲಿವುಡ್ ನಟ ವರುಣ್ ಧವನ್ (Varun Dhawan) ಹಾಗೂ ಫ್ಯಾಷನ್ ಡಿಸೈನರ್ ನಟಾಶಾ ದಲಾಲ್ (Natasha Dalal) ಜೋಡಿಯ ವಿವಾಹದ ಲುಕ್ ಎಲ್ಲರ ಕಣ್ಮನ ಸೆಳೆಯಿತು. ಅದರಲ್ಲೂ ವಧುವಿನ ಅಲಂಕಾರದಲ್ಲಿ ನಟಾಶ ದಲಾಲ್ ಹೆಚ್ಚು ಆಕರ್ಷಿಕವಾಗಿ ಕಾಣುತ್ತಿದ್ದರು. ಅವರ ಆಫ್ ವೈಟ್ ಲೆಹೆಂಗಾ ಅದ್ಭುತವಾಗಿತ್ತು. ಹಸಿರು ಹರಳು ಮತ್ತು ವಜ್ರಗಳಿಂದ ಕೂಡಿದ ಅವರ ಆಭರಣಗಳು ಅವರ ನೋಟವನ್ನು ಹೆಚ್ಚು ಆಕರ್ಷಕವಾಗಿ ಮಾಡಿತ್ತು. ಈ ಸಂಪೂರ್ಣ ಉಡುಪಿನಲ್ಲಿ ನಟಾಶಾ ಬಹಳ ಅದ್ಭುತವಾಗಿ ಕಾಣುತ್ತಿದ್ದರು.

 
 
 
 

 
 
 
 
 
 
 
 
 
 
 

A post shared by Weddingz.in (@weddingz.in)

ಇದನ್ನೂ ಓದಿ - ಸಪ್ತಪದಿ ತುಳಿದ ಬಾಲಿವುಡ್ ನಟ ವರುಣ್ ಧವನ್, ಗೆಳತಿ ನಟಾಶಾ ದಲಾಲ್

ಮದುವೆಯ ನಂತರ ಮಾಧ್ಯಮಗಳಿಗೆ ಫೋಸ್ ನೀಡಿದ ಜೋಡಿ :
ಮದುವೆಯ ನಂತರ ವರ ವರುಣ್ ಧವನ್ ಮತ್ತು ದುಲ್ಹಾನ್ ನಟಾಶಾ ದಲಾಲ್ ಹೊರಬಂದು ಬಹುನಿರೀಕ್ಷಿತ ಮಾಧ್ಯಮಗಳ ಮುಂದೆ ಪೋಸ್ ನೀಡಿದರು. ನಟಾಶಾ ವಧುವಿನ ನೋಟದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರೆ, ವರುಣ್ ಕೂಡ ವರನ ಲುಕ್ ನಲ್ಲಿ ಬಹಳ ಸುಂದವಾಗಿ ಕಾಣುತ್ತಿದ್ದರು. 

ಇದನ್ನೂ ಓದಿ - ಬಾಲಿವುಡ್ ನಟ ವರುಣ್ ಧವನ್-ನಟಾಷಾ ದಲಾಲ್ ಮದುವೆ ಸ್ಥಳ ಹೇಗೆಲ್ಲ ಇರಲಿದೆ ಗೊತ್ತೇ?

ವಾಸ್ತವವಾಗಿ ಕಳೆದ ವರ್ಷದಿಂದ ವರುಣ್ ಧವನ್ ಮತ್ತು ನಟಾಶಾ ದಲಾಲ್ ಅವರ ವಿವಾಹದ ಸುದ್ದಿ ಕೇಳಿ ಬರುತ್ತಿದ್ದರೂ, ಜನವರಿ ಮೂರನೇ ವಾರದಲ್ಲಿ ಇದು ದೃಢಪಟ್ಟಿದೆ. ಇದರ ನಂತರ ಈ ಭವ್ಯ ವಿವಾಹದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಈ ಖಾಸಗಿ ಸಮಾರಂಭಕ್ಕೆ ಬಾಲಿವುಡ್‌ನ ಕೆಲವೇ ಖ್ಯಾತನಾಮರನ್ನು ಮಾತ್ರ ಆಹ್ವಾನಿಸಲಾಗಿತ್ತು. ಈ ದಂಪತಿ ಶೀಘ್ರದಲ್ಲೇ  ಮಧುಚಂದ್ರಕ್ಕಾಗಿ ಟರ್ಕಿಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ದಂಪತಿಗಳು ತಮ್ಮ ಮಧುಚಂದ್ರವನ್ನು ಇಸ್ತಾಂಬುಲ್‌ನಲ್ಲಿ ಆಚರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News