ನವ ದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಅವರ ಆರತಕ್ಷತೆ ಸಮಾರಂಭ ಡಿ.21ರಂದು ನವದೆಹಲಿಯಲ್ಲಿ ನಡೆಯಿತು. ಈ ಆರತಕ್ಷತೆ ಪಾರ್ಟಿಯಲ್ಲಿ, ದೇಶದ ಪ್ರಸಿದ್ಧ ಕಪಲ್ಗೆ ಅಭಿನಂದನೆ ಮತ್ತು ಆಶೀರ್ವದಿಸಲು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಬಂದಿದ್ದರು. ಮೋದಿಯನ್ನು ನೋಡಿದ ಕ್ಷಣ ಈ ನವದಂಪತಿಗಳ ಮುಖ ಹೂವಿನಂತೆ ಅರಳಿತು.
ವಿರಾಟ್-ಅನುಷ್ಕಾ ಆರತಕ್ಷತೆಯನ್ನು ತಾಜ್ ಡಿಪ್ಲೋಮ್ಯಾಟಿಕ್ ಎನ್ಕ್ಲೇವ್ನ ದರ್ಬಾರ್ ಹಾಲ್ನಲ್ಲಿ ಆಯೋಜಿಸಲಾಗಿತ್ತು. ದೇಶದ ರಾಜಧಾನಿಯ ಈ ಲಾವಿಶ್ ಹೊಟೆಲ್ ಮೊಘಲ್ ಯುಗದ ವಿನ್ಯಾಸದೊಂದಿಗೆ ಅಲಂಕರಿಸಲ್ಪಟ್ಟಿದೆ. ಇದರಲ್ಲಿ ದೋಲ್ಪುರದ ಪಿಂಕ್ ಬಣ್ಣದ ಭವ್ಯವಾದ ಕಲ್ಲುಗಳಿವೆ ಮತ್ತು ವೀಕ್ಷಕನಿಗೆ ವೀಕ್ಷಿಸುತ್ತಲೇ ಇರಬೇಕೆನಿಸುವ ಹಸಿರು ಬಣ್ಣವನ್ನು ಇಲ್ಲಿ ಕಾಣಬಹುದು. ಆಂಟಿಕ್ ತುಣುಕುಗಳು ಮತ್ತು ಕಲಾತ್ಮಕ ವಸ್ತುಗಳನ್ನು ಆಂತರಿಕ ಮತ್ತು ಕೊಠಡಿಗಳಲ್ಲಿ ಅಲಂಕರಿಸಲಾಗುತ್ತದೆ. ಹೋಟೆಲ್ನಲ್ಲಿರುವ 292 ಐಷಾರಾಮಿ ಕೊಠಡಿಗಳಲ್ಲಿ ದೆಹಲಿಯ ನೋಟ ಸ್ಪಷ್ಟವಾಗಿ ಗೋಚರಿಸುತ್ತವೆ. ತಾಜ್ ಎನ್ಕ್ಲೇವ್ಗೆ ಅತಿ ದೊಡ್ಡ ಮತ್ತು ಅತ್ಯಂತ ದುಬಾರಿ ಸ್ಥಳವೆಂದರೆ ದರ್ಬಾರ್ ಹಾಲ್, ಅಲ್ಲಿ ವಿರಾಟ್-ಅನುಷ್ಕಾ ಆರತಕ್ಷತೆ ನಡೆಯಿತು.
ವಿರಾಟ್ ಮತ್ತು ಅನುಷ್ಕಾ ಡಿಸೆಂಬರ್ 11 ರಂದು ಇಟಲಿಯ ಅತ್ಯಂತ ಸುಂದರವಾದ ಸ್ಥಳವಾದ ಟಸ್ಕನಿ ಯಲ್ಲಿ ವಿವಾಹವಾದರು. ಅವರ ಆರತಕ್ಷತೆಯು ಎರಡು ಬಾರಿ ನಡೆಯಲಿದ್ದು, ಮೊದಲನೆಯ ಆರತಕ್ಷತೆ ಡಿಸೆಂಬರ್ 21 ರಂದು ದೆಹಲಿಯಲ್ಲಿ ನಡೆಯಿತು. ಇದರ ನಂತರ, ಡಿಸೆಂಬರ್ 26 ರಂದು ಮುಂಬೈಯಲ್ಲಿ ಎರಡನೇ ಆರತಕ್ಷತೆ ನಡೆಯಲಿದೆ.
ಪ್ರಧಾನಿ ಮೋದಿ ವೇದಿಕೆ ಏರಿ ನವ ಜೋಡಿಗೆ ಗುಲಾಬಿ ಹೂವನ್ನು ನೀಡಿ ಶುಭ ಹಾರೈಸಿದರು. ಮೋದಿಯನ್ನು ನೋಡಿದ ಕ್ಷಣ ವಿರಾಟ್-ಅನುಷ್ಕಾರ ಮುಖ ಹೂವಿನಂತೆ ಅರಳಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಇಡೀ ಕುಟುಂಬವನ್ನು ಭೇಟಿ ಮಾಡಿದರು ಮತ್ತು ಎಲ್ಲರೊಂದಿಗೆ ಫೋಟೋ ತೆಗೆಸಿಕೊಂಡರು.