VIDEO: ಮತ್ತೊಮ್ಮೆ ಮೋಹಕ ನೃತ್ಯ ಪ್ರದರ್ಶಿಸಿದ್ದಾಳೆ ಈ ನಟಿ, ನೃತ್ಯಗಾರ್ತಿ

ನಟಿ, ನೃತ್ಯಗಾರ್ತಿ ಸಪ್ನಾ ಚೌಧರಿ ಆವರ ಹಲವಾರು ಹೊಸ ವಿಡಿಯೋಗಳು ಅಲ್ಬಮ್ ಗಳು ಲಾಂಚ್ ಆಗಿವೆ. ಆದರೆ, ಅವರ ಕೆಲ ಹಳೆ ವಿಡಿಯೋಗಳು ಇಂದಿಗೂ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹವಾ ಸೃಷ್ಟಿಸುತ್ತಲೇ ಇವೆ.  

Written by - Nitin Tabib | Last Updated : Dec 21, 2019, 06:11 PM IST
VIDEO: ಮತ್ತೊಮ್ಮೆ ಮೋಹಕ ನೃತ್ಯ ಪ್ರದರ್ಶಿಸಿದ್ದಾಳೆ ಈ ನಟಿ, ನೃತ್ಯಗಾರ್ತಿ title=

ನವದೆಹಲಿ: ಹರಿಯಾಣಾದಿಂದ ತಮ್ಮ ವೃತ್ತಿ ಜೀವನ ಆರಂಭಿಸಿರುವ ಖ್ಯಾತ ನೃತ್ಯಗಾರ್ತಿ ಸಪ್ನಾ ಚೌಧರಿ, ಇಂದು ದೇಶಾದ್ಯಂತ ತನ್ನದೆ ಆದಂತಹ ಛಾಪು ಮೂಡಿಸಿದ್ದಾರೆ. ಅವರ ಖ್ಯಾತಿ ಯಾವ ಮಟ್ಟದಲ್ಲಿ ಇದೇ ಎಂದರೆ, ಸಪ್ನಾ ವೇದಿಕೆಯ ಮೇಲೆ ಬರುತ್ತಿದ್ದಂತೆ ಅವರ ಅಭಿಮಾನಿಗಳು ಹುಚ್ಚೆದ್ದು ಕುಣಿಯಲಾರಂಭಿಸುತ್ತಾರೆ. ಇಂದು ಮಾರುಕಟ್ಟೆಯಲ್ಲಿ ಸಪ್ನಾ ಅವರ ಹೊಸ ಹೊಸ ವಿಡಿಯೋ ಅಲ್ಬಮ್ ಗಳು ಬಿಡುಗಡೆಯಾಗಿವೆ. ಆದರೆ, ಇಂದಿಗೂ ಕೂಡ ಅವರ ಕೆಲ ಹಳೆ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಲೇ ಇವೆ.

ಸಪ್ನಾ ಚೌಧರಿ ಅವರ ಇಂತಹುದೇ ಒಂದು ವಿಡಿಯೋ ಇದೀಗ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಸಪ್ನಾ ಹರಿಯಾಣದ ಒಂದು ಹಾಡಿನ ಮೇಲೆ ವಿಶಿಷ್ಟವಾಗಿ ಹೆಜ್ಜೆ ಹಾಕುವುದನ್ನು ನೀವು ಗಮನಿಸಬಹುದು. ಈ ಹಾಡಿನ ಮೇಲೆ ಡಾನ್ಸ್ ಮಾಡುತ್ತಿರುವ ಸಪ್ನಾ ಮಧ್ಯದಲ್ಲಿಯೇ ತನ್ನ ಅಭಿಮಾನಿಗಳತ್ತ ಸ್ಮಿತಹಾಸ್ಯ ಬೀರುತ್ತಿದ್ದಾರೆ.

ತನ್ನ ಫ್ಯಾನ್ಸ್ ಗಳ ಜೊತೆ ಬೆರೆತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುವುದರಲ್ಲಿ ಸಪ್ನಾ ಚೌದರಿ ನಿರತರಾಗಿರುತ್ತಾರೆ. ಸದ್ಯ ಸಪ್ನಾ ಸ್ಟೇಜ್ ಷೋ ಮತ್ತು ಡಾನ್ಸ್ ಶೋಗಳಲ್ಲಿ ಭಾರಿ ಬ್ಯೂಸಿ ಆಗಿದ್ದಾರೆ. ಅಷ್ಟೇ ಅಲ್ಲ ಟಿಕ್ ಟಾಕ್ ನಲ್ಲಿಯೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಈ ರೀತಿಯ ಇತರೆ ಆಪ್ ಗಳ ಮೇಲೂ ಕೂಡ ಸಕ್ರೀಯರಾಗಿರುವ ಸಪ್ನಾ ಒಂದೆಡೆ ತಮ್ಮದೇ  ಡಾನ್ಸ್ ನ  ವಿಡಿಯೋಗಳನ್ನು ಹರಿಬಿಟ್ಟರೆ, ಇನ್ನೊಂದೆಡೆ ಹಾಸ್ಯಪ್ರದಾನ ವಿಡಿಯೋಗಳನ್ನು ಕೂಡ ಹಂಚಿಕೊಳ್ಳುತ್ತಾರೆ.

Trending News