'ವಿಜಯ್‌ ದೇವರಕೊಂಡ ಅಲ್ಲ ಅನಕೊಂಡ..!

ವಿಜಯ್‌ ದೇವರಕೊಂಡ ಅಭಿನಯದ 'ಲೈಗರ್'‌ ಸಿನಿಮಾ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಒಂದು ಕಡೆ 'ಲೈಗರ್'‌ ಸೋತಿರುವ ಮುನ್ಸೂಚನೆ ಸಿಗುತ್ತಿದ್ದರೆ, ಮತ್ತೊಂದು ಕಡೆ ವಿಜಯ್‌ ದೇವರಕೊಂಡ ವರ್ತನೆಗೆ ಸಿನಿಮಾ ತಜ್ಞರ ಕಡೆಯಿಂದ ತೀವ್ರ ಬೇಸರ ವ್ಯಕ್ತವಾಗುತ್ತಿದೆ. ಇದೇ ಹೊತ್ತಲ್ಲಿ ಮುಂಬೈ ಮೂಲದ ಫೇಮಸ್‌ ಪ್ರೊಡ್ಯೂಸರ್‌ & ಸಿನಿಮಾ ವಿತರಕರೊಬ್ಬರು ವಿಜಯ್‌ ದೇವರಕೊಂಡ ವಿರುದ್ಧ ಹರಿಹಾಯ್ದಿದ್ದು, 'ವಿಜಯ್‌ ದೇವರಕೊಂಡ ಅಲ್ಲ ಅನಕೊಂಡ' ಎಂದಿದ್ದಾರೆ.

Written by - Malathesha M | Edited by - Manjunath N | Last Updated : Aug 26, 2022, 03:53 PM IST
  • ಹಲವು ದಶಕಗಳಿಂದ ನಿರ್ಮಾಪಕರಾಗಿ ಮನೋಜ್ ದೇಸಾಯಿ ಬಾಲಿವುಡ್‌ ಅಂಗಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
  • ಮುಂಬೈ ಮೂಲದ ಮನೋಜ್ ದೇಸಾಯಿ ಕೆಲವು ಸಿನಿಮಾಗಳಲ್ಲಿ ನಟನೆ ಕೂಡ ಮಾಡಿದ್ದಾರೆ.
'ವಿಜಯ್‌ ದೇವರಕೊಂಡ ಅಲ್ಲ ಅನಕೊಂಡ..! title=
file photo

ನವದೆಹಲಿ: ವಿಜಯ್‌ ದೇವರಕೊಂಡ ಅಭಿನಯದ 'ಲೈಗರ್'‌ ಸಿನಿಮಾ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಒಂದು ಕಡೆ 'ಲೈಗರ್'‌ ಸೋತಿರುವ ಮುನ್ಸೂಚನೆ ಸಿಗುತ್ತಿದ್ದರೆ, ಮತ್ತೊಂದು ಕಡೆ ವಿಜಯ್‌ ದೇವರಕೊಂಡ ವರ್ತನೆಗೆ ಸಿನಿಮಾ ತಜ್ಞರ ಕಡೆಯಿಂದ ತೀವ್ರ ಬೇಸರ ವ್ಯಕ್ತವಾಗುತ್ತಿದೆ. ಇದೇ ಹೊತ್ತಲ್ಲಿ ಮುಂಬೈ ಮೂಲದ ಫೇಮಸ್‌ ಪ್ರೊಡ್ಯೂಸರ್‌ & ಸಿನಿಮಾ ವಿತರಕರೊಬ್ಬರು ವಿಜಯ್‌ ದೇವರಕೊಂಡ ವಿರುದ್ಧ ಹರಿಹಾಯ್ದಿದ್ದು, 'ವಿಜಯ್‌ ದೇವರಕೊಂಡ ಅಲ್ಲ ಅನಕೊಂಡ' ಎಂದಿದ್ದಾರೆ.

ಹಲವು ದಶಕಗಳಿಂದ ನಿರ್ಮಾಪಕರಾಗಿ ಮನೋಜ್ ದೇಸಾಯಿ ಬಾಲಿವುಡ್‌ ಅಂಗಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬೈ ಮೂಲದ ಮನೋಜ್ ದೇಸಾಯಿ ಕೆಲವು ಸಿನಿಮಾಗಳಲ್ಲಿ ನಟನೆ ಕೂಡ ಮಾಡಿದ್ದಾರೆ. ಆದರೆ ಈಗ 'ಲೈಗರ್'‌ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡುವಾಗ ನಟ ವಿಜಯ್‌ ದೇವರಕೊಂಡ ವಿರುದ್ಧ ಗರಂ ಆಗಿದ್ದಾರೆ. ಅಲ್ಲದೆ ವಿಜಯ್‌ ವರ್ತನೆ ಬದಲಿಸಿಕೊಳ್ಳಬೇಕು ಎಂಬ ಸಲಹೆಯನ್ನೂ ನಿರ್ಮಾಪಕ ಮನೋಜ್ ದೇಸಾಯಿ ನೀಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮೋತ್ಸವ ನಡೆಸಿದರೂ ರಾಜಕೀಯ ಅಲೆಮಾರಿಯಾಗಿರುವ ಸಿದ್ದರಾಮಯ್ಯ: ಸಂಸದ ಪ್ರಸಾದ್ ವ್ಯಂಗ್ಯ

ಅಮೀರ್‌ ಕಥೆ ಏನಾಯ್ತು..?

ಇನ್ನು ತಮ್ಮ ಮಾತು ಮುಂದುವರಿಸಿ ನಟ ವಿಜಯ್‌ ದೇವರಕೊಂಡ ವಿರುದ್ಧ ಹರಿಹಾಯ್ದಿರುವ ಮನೋಜ್ ದೇಸಾಯಿ, 'ವಿಜಯ್‌ ದೇವರಕೊಂಡ ನೀವು ಹೇಳ್ತೀರ, ಸಿನಿಮಾ ನೋಡೋದಾದ್ರೆ ನೋಡಿ ಇಲ್ಲ ಬೇಡ ಅಂತಾ. ಹಿಂಗೆಲ್ಲಾ ಮಾತನಾಡಬಾರದು, ಇದೇ ರೀತಿ ಮಾತನಾಡಿದ್ದ ಆಮೀರ್‌ ಖಾನ್‌ ಹಾಗೂ ತಾಪ್ಸಿ ಪನ್ನು ಕಥೆ ಏನಾಗಿದೆ ಈಗ ನೋಡಿ..? ಜನ ಸಿನಿಮಾ ನೋಡದೇ ಇದ್ರೆ ಏನಾಗುತ್ತೆ ಹೇಳಿ..? ವಿಜಯ್‌ ದೇವರಕೊಂಡ ಅಲ್ಲ ನೀವು ಅನಕೊಂಡ' ಎಂದು ಗರಂ ಆಗಿದ್ದಾರೆ ಮನೋಜ್ ದೇಸಾಯಿ.

ಇದನ್ನೂ ಓದಿ: DK Shivakumar : 'ಸೆ.1 ರಂದು ರಾಜ್ಯಕ್ಕೆ ಬರಲಿದೆ ದೆಹಲಿಯಿಂದ ಕಾಂಗ್ರೆಸ್ ಸ್ಪೆಷಲ್ ಟೀಂ' 

ಇನ್ನು ಲೈಗರ್‌ ಸಿನಿಮಾ ಮೊದಲ ದಿನ ₹25 ಕೋಟಿ ಕಲೆಕ್ಷನ್‌ ಮಾಡಿದೆ. ಆದ್ರೆ ಅಂದುಕೊಂಡಿದ್ದಕ್ಕಿಂತ ಇದು ಕಡಿಮೆ ಮೊತ್ತ ಎಂಬ ಮಾತುಗಳು ವಿತರಕರು ಹಾಗೂ ಸಿನಿಮಾ ತಜ್ಞರಿಂದ ಕೇಳಿಬರುತ್ತಿದೆ. ಮತ್ತೊಂದು ಕಡೆ ನಟ ವಿಜಯ್‌ ದೇವರಕೊಂಡ ಈ ಹಿಂದೆ ನೀಡಿದ್ದ ಹೇಳಿಕೆ, ಟ್ವೀಟ್ಟರ್‌ ಪೋಸ್ಟ್‌ಗಳು ವೈರಲ್‌ ಆಗುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ನಟ ದೇವರಕೊಂಡ ವಿರುದ್ಧ ಜನ ಮುಗಿಬಿದ್ದಿದ್ದು, 'ಲೈಗರ್'‌ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News