close

News WrapGet Handpicked Stories from our editors directly to your mailbox

ಚಂದನವನದಲ್ಲಿ 'ಮುಂದಿನ ನಿಲ್ದಾಣ' ಹುಡುಕಲು ಹೊರಟಿರುವ ವಿನಯ್ ಭಾರದ್ವಾಜ್

ಲೆಟ್ಸ್ ಟಾಕ್ ವಿಥ್ ವಿನಯ್ ಶೋ ಮೂಲಕ ಖ್ಯಾತಿ ಪಡೆದಿದ್ದ ವಿನಯ್ ಭಾರದ್ವಾಜ್  ಕನ್ನಡದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ.

Manjunath Naragund Manjunath Naragund | Updated: Aug 4, 2019 , 05:26 PM IST
ಚಂದನವನದಲ್ಲಿ 'ಮುಂದಿನ ನಿಲ್ದಾಣ' ಹುಡುಕಲು ಹೊರಟಿರುವ ವಿನಯ್ ಭಾರದ್ವಾಜ್

ಬೆಂಗಳೂರು: ಲೆಟ್ಸ್ ಟಾಕ್ ವಿಥ್ ವಿನಯ್ ಶೋ ಮೂಲಕ ಖ್ಯಾತಿ ಪಡೆದಿದ್ದ ವಿನಯ್ ಭಾರದ್ವಾಜ್  ಕನ್ನಡದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ.

ವೃತ್ತಿಯಲ್ಲಿ ಬ್ಯಾಂಕರ್ ಆಗಿರುವ ವಿನಯ್ ಭಾರದ್ವಾಜ್ ಈಗ ಕನ್ನಡದಲ್ಲಿ ಬೆಳೆಯುತ್ತಿರುವ ಪ್ರತಿಭಾನ್ವಿತ ಯುವ ನಿರ್ದೇಶಕರಲ್ಲಿ ಒಬ್ಬರು. ಈಗಾಗಲೇ 'ದಿ ಗಿವಿಂಗ್' ಶಾರ್ಟ್ ಮೂವಿ ಹಾಗೂ 'ಇನ್ ಸರ್ಚ್ ಆಫ್ ಇನ್ ಕ್ರೆಡಿಬಲ್' ಇಂಡಿಯಾ ಸಾಕ್ಷ್ಯಚಿತ್ರದ ಮೂಲಕ ಅವರು ಗಮನ ಸೆಳೆದಿದ್ದಾರೆ.

ಈಗ ಇನ್ನೊಂದು ಹೊಸ ಪ್ರಯತ್ನವಾಗಿ 'ಮುಂದಿನ ನಿಲ್ದಾಣ' ಎನ್ನುತ್ತಲೇ ಸಿನಿ ಪಯಣಕ್ಕೆ ಪೂರ್ಣ ಪ್ರಮಾಣದ ಸಿದ್ದತೆ ನಡೆಸಿದ್ದಾರೆ. ಅದರ ಭಾಗವಾಗಿ ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ ನಲ್ಲಿ ವಿನಯ್ ಭಾರದ್ವಾಜ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಮುಂದಿನ ನಿಲ್ದಾಣ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಸಿನಿಮಾ ಅದರ ಪೋಸ್ಟರ್ ಕೂಡ ಅಷ್ಟೇ ಚೆನ್ನಾಗಿ ಮೂಡಿ ಬಂದಿದೆ. 

ವಿನಯ್ ಅವರೇ ಹೇಳುವಂತೆ ಮುಂದಿನ ನಿಲ್ದಾಣ ಸುಮಾರು 18 ತಿಂಗಳ ಪರಿಶ್ರಮದಿಂದ ಸಿನಿಮಾದ ಕನಸು ಸಾಕಾರಗೊಳ್ಳುತ್ತಿದೆ. ನಿಮ್ಮ ಪ್ರೀತಿ ಹಾಗೂ ಹಾರೈಕೆ ಹಾಗೆ ಇರಲಿ ಎಂದು ಅವರು ಕನ್ನಡದ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.