VIRAL VIDEO: MALAIKA ARORA ಡ್ರೆಸ್ ಕಂಡು ನೆಟ್ಟಿಗರು ಏನಂದ್ರು ನೀವೇ ಓದಿ

ಇಂತಹ ಡ್ರೆಸ್ ಧರಿಸಿ ಜಿಮ್ ನಿಂದ ಹೊರಬಂದ ಮಲೈಕಾ ಅರೋರಾ ಅವರನ್ನು ಕಂಡ ನೆಟ್ಟಿಗರು ಮಲೈಕಾ ಅವರನ್ನು ಭಾರಿ ಟ್ರೊಲ್ ಮಾಡುತ್ತಿದ್ದಾರೆ.

Last Updated : Mar 13, 2020, 08:41 PM IST
VIRAL VIDEO: MALAIKA ARORA ಡ್ರೆಸ್ ಕಂಡು ನೆಟ್ಟಿಗರು ಏನಂದ್ರು ನೀವೇ ಓದಿ title=

ನವದೆಹಲಿ: ಖ್ಯಾತ್ ಬಾಲಿವುಡ್ ಬೆಡಗಿ ಮಲೈಕಾ ಆರೋರಾ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರೀಯರಾಗಿರುತ್ತಾರೆ. ಯಾವಾಗಲು ತಮ್ಮ ಫಿಟ್ನೆಸ್ ಹಾಗೂ ಮಾಡೆಲಿಂಗ್ ಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಮಲೈಕಾ ಹೆಡ್ ಲೈನ್ಸ್ ಸೃಷ್ಟಿಸುತ್ತಲೇ ಇರುತ್ತಾರೆ. ಸದ್ಯ ಮಲೈಕಾಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ಈ ವಿಡಿಯೋ ಅನ್ನು ಮಲೈಕಾ ಖುದ್ದಾಗಿ ಹಂಚಿಕೊಂಡಿಲ್ಲ. ಈ ವಿಡಿಯೋದಲ್ಲಿ ಮಲೈಕಾ ಚರ್ಮದ ಬಣ್ಣದ ಬಾಡಿ ಸೂಟ್ ಧರಿಸಿ ಜಿಮ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಲೈಕಾಗೆ ಸಂಬಂಧಿಸಿದ ವಿಡಿಯೋವೊಂದನ್ನು ವಂಪುಲಾ ಕೂಡಾ ಇನ್ಸ್ಟಾಗ್ರಾಮ್ ನಲ್ಲಿ  ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾರಿನಿಂದ ಕೆಳಗಿಳಿಯುವ ಮಲೈಕಾ ತಮ್ಮ ಜಿಮ್ ಕಡೆಗೆ ಧಾವಿಸುತ್ತಿದ್ದಾರೆ. ಇದೆ ವೇಳೆ ಪೋಸ್ ಗಾಗಿ ಮುಗಿಬಿದ್ದ ಛಾಯಾಗ್ರಾಹಕರಿಗೆ ಪೋಸ್ ನೀಡಿ ಮಲೈಕಾ ಅಲ್ಲಿನ ಜಿಮ್ ಒಳಗೆ ಹೋಗುತ್ತಾರೆ. ಈ ಮೊದಲೂ ಕೂಡ ಇನ್ನೋರ್ವ ಖ್ಯಾತ ನಟಿ ಕತ್ರಿನಾ ಕೈಫ್ ಇಂತಹ ಅವತಾರದಲ್ಲಿ ಕಾಣಿಸಿಕೊಂಡಿದ್ದಳು.

 
 
 
 

 
 
 
 
 
 
 
 
 

Spaceman take me up with you as there is a pandemic 😢. #malaikaarora 🎼 #jassmann @babylonzoo.official #viralbhayani @viralbhayani

A post shared by Viral Bhayani (@viralbhayani) on

ಮಲೈಕಾ ಅವರ ಈ ಫೋಟೋ ಮತ್ತು ವಿಡಿಯೋಗೆ ಜನರು ಇಲ್ಲ ಸಲ್ಲದ ಕಾಮೆಂಟ್ ಗಳನ್ನು ಮಾಡಲಾರಂಭಿಸಿದ್ದಾರೆ. ಮಲೈಕಾ ಅವರ ಈ ವಿಡಿಯೋ ಕುರಿತು ಕಾಮೆಂಟ್ ಮಾಡಿರುವ ಓರ್ವ ಬಳಕೆದಾರ 'ಅಗ್ಗದ ಕಿಮ್ ಕರ್ದಾಶಿಯಾ' ಎಂದು ಕಾಮೆಂಟ್ ಮಾಡಿದ್ದರೆ, ಮತ್ತೋರ್ವ ಬಳಕೆದಾರ 'ನಾಚಿಕೆಗೇಡಿ, ಸ್ವಲ್ಪವಾದರೂ ನಿನ್ನ ವಯಸ್ಸನ್ನು ಪರಿಗಣಿಸು' ಎಂದು ಬರೆದುಕೊಂಡಿದ್ದಾನೆ. ಇನ್ನೊಂದೆಡೆ ಕೆಲವರು ಮಲೈಕಾ ಫಿಟ್ನೆಸ್ ಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದು, 'ಉತ್ತಮ ಬಾಡಿ, ತುಂಬಾ ಸುಂದರವಾಗಿ ಕಾಣಿಸುತ್ತಿದ್ದೀರಿ' ಎಂದು ಹೇಳುತ್ತಿದ್ದಾರೆ.

46ರ ಹರೆಯದ ಮಲೈಕಾ ತಮ್ಮ ಫಿಟ್ನೆಸ್ ಕುರಿತು ಹೆಚ್ಚಿಗೆ ಗಮನ ನೀಡುತ್ತಾರೆ. ಜಿಮ್ ಜೊತೆಗೆ ಮಲೈಕಾ ಯೋಗಾ ಕೂಡ ಮಾಡುತ್ತಾರೆ. ತುಂಬಾ ರೆಗ್ಯುಲರ್ ಆಗಿ ಅವರು ಎಕ್ಸರ್ಸೈಸ್ ನಡೆಸುತ್ತಾರೆ. ಅಷ್ಟೇ ಯಾಕೆ ಅವರು ತಮ್ಮದೇ ಆದ ಯೋಗಾ ಸ್ಟುಡಿಯೋ ಕೂಡ ತೆರೆದಿದ್ದಾರೆ.

ಮಲೈಕಾ ಆರೋರಾ ಅವರ ಪರ್ಸನಲ್ ಲೈಫ್ ಕುರಿತು ಹೇಳುವುದಾದರೆ, ಖ್ಯಾತ ಬಾಲಿವುಡ್ ಅರ್ಬಾಜ್ ಖಾನ್ ಅವರಿಂದ ಮಲೈಕಾ ವಿಚ್ಛೇದನೆ ಪಡೆದಿದ್ದಾರೆ. ಈ ಇಬ್ಬರಿಗೆ ಅರಹನ್ ಖಾನ್ ಹೆಸರಿನ ಪುತ್ರ ಕೂಡ ಇದ್ದಾನೆ. ಇತ್ತೀಚಿಗೆ ಮಲೈಕಾ ಅರ್ಜುನ್ ಕಪೂರ್ ಅವರ ಜೊತೆ ಡೇಟ್ ಕೂಡ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೇಲೆ ಈ ಉಭಯಾರು ತಮ್ಮ ಸಂಬಂಧವನ್ನು ಕೂಡ ಒಪ್ಪಿಕೊಂಡಿದ್ದಾರೆ. ಈ ಇಬ್ಬರ ವಿವಾಹದ ಕುರಿತು ಊಹಾಪೋಹಗಳು ಕೂಡ ಕೇಳಿ ಬಂದಿವೆ. ಆದರೆ, ಯಾರೊಬ್ಬರು ಕೂಡ ಈ ಕುರಿತು ಅಧಿಕೃತ ಘೋಷಣೆ ಮಾಡಿಲ್ಲ.

Trending News