Watch: ಎರಡು ವರ್ಷದ ನಂತರ ಮತ್ತೆ ಸಿನಿಮಾದತ್ತ ಮುಖ ಮಾಡಿದ ರಿಯಾ ಚಕ್ರವರ್ತಿ

ನಟಿ ರಿಯಾ ಚಕ್ರವರ್ತಿ 2 ವರ್ಷಗಳ ನಂತರ ಕೆಲಸಕ್ಕೆ ತೊಡಗಿಸಿಕೊಂಡಿರುವ ಮೊದಲ ದಿನದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

Written by - Zee Kannada News Desk | Last Updated : Feb 12, 2022, 05:44 PM IST
  • ನಟಿ ರಿಯಾ ಚಕ್ರವರ್ತಿ 2 ವರ್ಷಗಳ ನಂತರ ಕೆಲಸಕ್ಕೆ ತೊಡಗಿಸಿಕೊಂಡಿರುವ ಮೊದಲ ದಿನದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
 Watch: ಎರಡು ವರ್ಷದ ನಂತರ ಮತ್ತೆ ಸಿನಿಮಾದತ್ತ ಮುಖ ಮಾಡಿದ ರಿಯಾ ಚಕ್ರವರ್ತಿ title=
Pic courtesy: Instagram

ನವದೆಹಲಿ: ನಟಿ ರಿಯಾ ಚಕ್ರವರ್ತಿ 2 ವರ್ಷಗಳ ನಂತರ ಕೆಲಸಕ್ಕೆ ತೊಡಗಿಸಿಕೊಂಡಿರುವ ಮೊದಲ ದಿನದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಡಬ್ಬಿಂಗ್ ಸ್ಟುಡಿಯೋದಲ್ಲಿ ತನ್ನ ಕೈಯಲ್ಲಿ ಕಾಗವನ್ನು ಹಿಡಿದಿರುಕೊಂಡಿರುವ ವೀಡಿಯೊವನ್ನು ನಟಿ ಹಂಚಿಕೊಂಡಿದ್ದಾರೆ.ಸಂಪೂರ್ಣ ಕಪ್ಪು ಬಟ್ಟೆ ಮತ್ತು ಕರ್ಲಿ ಕೇಶ ವಿನ್ಯಾಸದಲ್ಲಿ ಅವರು ಸಂತೋಷದಿಂದ ಮತ್ತು ಸುಂದರವಾಗಿ ಕಾಣುತ್ತಿದ್ದಾರೆ.

ಇದನ್ನೂ ಓದಿ-#JamesTeaser: ದೊಡ್ಮನೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್; ಬಹುನಿರೀಕ್ಷಿತ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್

ತಮ್ಮ ವಿಡಿಯೋ ಜೊತೆಗೆ ಸ್ಪೂರ್ತಿದಾಯಕ ಪೋಸ್ಟ್ ವೊಂದನ್ನು ಹಂಚಿಕೊಂಡಿರುವ ಅವರು 'ನಿನ್ನೆ, ನಾನು 2 ವರ್ಷಗಳ ನಂತರ ಕೆಲಸಕ್ಕೆ ಹೋಗಿದ್ದೆ.ನನ್ನ ಕಷ್ಟದ ಸಮಯದಲ್ಲಿ ನನ್ನೊಂದಿಗೆ ನಿಂತ ಎಲ್ಲ ಜನರಿಗೆ ದೊಡ್ಡ ಧನ್ಯವಾದಗಳು.ಏನೇ ಇರಲಿ, ಸೂರ್ಯ ಯಾವಾಗಲೂ ಬೆಳಗುತ್ತಾನೆ.ಎಂದಿಗೂ ನಿಮ್ಮ ಪ್ರಯತ್ನ ಬಿಡಬೇಡಿ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ-10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ? ಗೊಂದಲ ನಿವಾರಿಸಿದ ಸರ್ಕಾರ

ಇದಕ್ಕೆ ಹಾಸ್ಯನಟ ಮಲ್ಲಿಕಾ ದುವಾ, ವಿಜೆ ಶಿಬಾನಿ ದಾಂಡೇಕರ್, ಪ್ರಿಯಾಂಕಾ ಖಿಮಾನಿ ಅವರು ಪ್ರತಿಕ್ರಿಯಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

2020 ರಲ್ಲಿ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಮತ್ತು ಆಕೆಯ ಸಹೋದರ ಶೋಕ್ ಚಕ್ರವರ್ತಿ ಅವರನ್ನು ಎನ್‌ಸಿಬಿ ಬಂಧಿಸಿತ್ತು. ನಟಿ ಮುಂಬೈನ ಬೈಕುಲ್ಲಾ ಜೈಲಿನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಇದ್ದರು.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ದೇಶದ ಮೂರು ಪ್ರಮುಖ ಏಜೆನ್ಸಿಗಳಾದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ), ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸಿದ್ದವು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News