AFG vs BAN: ಅಫ್ಘಾನಿಸ್ತಾನ ತಂಡದ ಸಾಧನೆಗೆ ʼಕ್ರಿಕೆಟ್‌ ದೇವರʼ ಮೆಚ್ಚುಗೆ, ಏನಂದ್ರು ಸಚಿನ್?

ICC Mens T20 World Cup 2024: ಅಫ್ಘಾನಿಸ್ತಾನ ತಂಡದ ಈ ಐತಿಹಾಸಿಕ ಸಾಧನೆಯಿಂದ ಸಂತಸದಲ್ಲಿ ತೇಲಾಡಿದ ಆಫ್ಘನ್ನರು ತಮ್ಮ ದೇಶದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ವಿಶ್ವಕಪ್‌ ಗೆದ್ದಷ್ಟೇ ಖುಷಿಯಲ್ಲಿ ಸಂಭ್ರಮಾಚರಣೆ ನಡೆಸಿರುವ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿವೆ. ​

Written by - Puttaraj K Alur | Last Updated : Jun 25, 2024, 06:50 PM IST
  • ಬಾಂಗ್ಲಾದೇಶ ಮಣಿಸಿ ಟಿ-20 ವಿಶ್ವಕಪ್​ ಸೆಮಿಫೈನಲ್​ ಪ್ರವೇಶಿಸಿದ ಅಫ್ಘಾನಿಸ್ತಾನದಿಂದ ಐತಿಹಾಸಿಕ ಸಾಧನೆ
  • ಅಫ್ಘಾನಿಸ್ತಾನ ತಂಡದ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದ ʼಕ್ರಿಕೆಟ್‌ ದೇವರುʼ ಸಚಿನ್‌ ತೆಂಡೂಲ್ಕರ್‌
  • ಇಂದಿನ ಗೆಲುವು ನಿಮ್ಮ ಕಠಿಣ ಪರಿಶ್ರಮ ಮತ್ತು ಸಂಕಲ್ಪಕ್ಕೆ ಸಾಕ್ಷಿಯಾಗಿದೆ ಎಂದ ಮಾಸ್ಟರ್‌ ಬ್ಲ್ಯಾಸ್ಟರ್
AFG vs BAN: ಅಫ್ಘಾನಿಸ್ತಾನ ತಂಡದ ಸಾಧನೆಗೆ ʼಕ್ರಿಕೆಟ್‌ ದೇವರʼ ಮೆಚ್ಚುಗೆ, ಏನಂದ್ರು ಸಚಿನ್?  title=
ಅಪ್ಘನ್‌ ತಂಡಕ್ಕೆ ಸಚಿನ್‌ ಮೆಚ್ಚುಗೆ

Afghanistan vs Bangladesh: ಬಾಂಗ್ಲಾದೇಶವನ್ನು ಮಣಿಸಿ ಇದೇ ಮೊದಲ ಬಾರಿಗೆ ಟಿ-20 ವಿಶ್ವಕಪ್​ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಅಫ್ಘಾನಿಸ್ತಾನ ತಂಡಕ್ಕೆ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಟ್ವೀಟ್‌ ಮಾಡಿರುವ ಮಾಸ್ಟರ್‌ ಬ್ಲಾಸ್ಟರ್‌ ಖ್ಯಾತಿಯ ಸಚಿನ್‌ ತೆಂಡೂಲ್ಕರ್‌, ಆಫ್ಘನ್​ ತಂಡದ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದ್ದಾರೆ. ʼಬಲಿಷ್ಠ ತಂಡಗಳಾದ ನ್ಯೂಜಿಲ್ಯಾಂಡ್​ & ಆಸ್ಟ್ರೇಲಿಯಾವನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿರುವ ನಿಮ್ಮ ಗೆಲುವಿನ ಹಾದಿ ತುಂಬಾ ಅದ್ಭುತವಾಗಿದೆ. ಇಂದಿನ ಗೆಲುವು ನಿಮ್ಮ ಕಠಿಣ ಪರಿಶ್ರಮ ಮತ್ತು ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ನಿಮ್ಮ ಪ್ರಗತಿಯ ಬಗ್ಗೆ ತುಂಬಾ ಹೆಮ್ಮೆ ಇದೆ. ಹೀಗೇ ಮುಂದುವರಿಯಿರಿ ಎಂದುʼ ಅವರು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ನಟಿಯರಿಗಿಂತಲೂ ಬ್ಯೂಟಿಫುಲ್ ಸೂರ್ಯಕುಮಾರ್ ಯಾದವ್ ಪತ್ನಿ! ಈಕೆಯ ಡ್ಯಾನ್ಸ್ ನೋಡಿಯೇ ಲವ್ವಲ್ಲಿ ಬಿದ್ದ ಭಾರತದ ಮಿ.360

ಹಲವು ಬಾರಿ ಮಳೆಯಿಂದ ಅಡಚಣೆಯಾದ ಈ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಅಫ್ಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್(43) ಏಕಾಂಗಿ ​ಹೋರಾಟದ ನೆರವಿನಿಂದ 5 ವಿಕೆಟ್​ಗೆ 115 ರನ್​ ಗಳಿಸಿತ್ತು. ನಾಯಕ ರಶೀದ್‌ ಖಾನ್(ಅಜೇಯ 19), ಇಬ್ರಾಹಿಂ ಜದ್ರಾನ್(18) ಮತ್ತು ಅಜ್ಮತುಲ್ಲಾ ಒಮರ್ಜಾಯ್(10) ರನ್‌ ಗಳಿಸಿದರು. ಬಾಂಗ್ಲಾದೇಶದ ಬ್ಯಾಟಿಂಗ್‌ ವೇಳೆ ಮಳೆಯಿಂದ ಪದೇ ಪದೇ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಅಂತಿಮವಾಗಿ DLS ನಿಯಮದಡಿ 1 ಓವರ್‌ ಕಡಿತಗೊಳಿಸಿ ಬಾಂಗ್ಲಾಗೆ 19 ಓವರ್​ಗೆ 114 ರನ್‌ಗಳ​ ಗೆಲುವಿನ ಗುರಿ ನೀಡಲಾಗಿತ್ತು.

ಬಾಂಗ್ಲಾ ಪರ ಏಕಾಂಗಿ ಹೋರಾಟ ನಡೆಸಿದ ಲಿಟ್ಟನ್ ದಾಸ್(ಅಜೇಯ 54) ಆರಂಭದಿಂದ ಕೊನೆವರೆಗೂ ಹೋರಾಟ ನಡೆಸಿದರು. ಒಂದು ಹಂತದಲ್ಲಿ ಬಾಂಗ್ಲಾ ಗೆಲುವಿನ ಅಂಚಿಗೆ ಬಂದು ತಲುಪಿತ್ತು. ಆದರೆ ಅಂತಿಮ ಹಂತದಲ್ಲಿ ಅಪ್ಘನ್‌ ತಂಡದ ಬೌಲರ್‌ಗಳು ಮೇಲುಗೈ ಸಾಧಿಸಿದರು. ಪರಿಣಾಮ ಬಾಂಗ್ಲಾ 17.5 ಓವರ್‌ಗೆ 105 ರನ್‌ ಗಳಿಸಿ ಸರ್ವಪತನ ಕಂಡಿತು. ಅಪ್ಘನ್‌ ಪರ ಅದ್ಭುತ ಬೌಲಿಂಗ್‌ ದಾಳಿ ನಡೆಸಿದ ನವೀನ್-ಉಲ್-ಹಕ್ (26ಕ್ಕೆ‌ 4 ವಿಕೆಟ್) ಬಾಂಗ್ಲಾಗೆ ಆಘಾತ ನೀಡಿದರು. 18ನೇ ಓವರ್‌ನಲ್ಲಿ 2 ವಿಕೆಟ್‌ ತೆಗೆದುಕೊಳ್ಳುವ ಮೂಲಕ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು. ನಾಯಕ ರಶೀದ್‌ ಖಾನ್‌‌ (23ಕ್ಕೆ 4 ವಿಕೆಟ್) ಕೂಡ ಬಾಂಗ್ಲಾಗೆ ದೊಡ್ಡ ಆಘಾತವನ್ನುಂಟು ಮಾಡಿದರು. ಫಜಲ್ಹಕ್ ಫಾರೂಕಿ ಮತ್ತು ಗುಲ್ಬದಿನ್ ನಾಯಬ್ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. 

ಇದನ್ನೂ ಓದಿ:  ಅಫ್ಘನ್ ವಿರುದ್ಧ ಭಾರತ ಗೆಲ್ಲಲು ಇವರೇ ಕಾರಣ: ಗೆಲುವಿನ ಸಂಪೂರ್ಣ ಕ್ರೆಡಿಟ್ ಈ ಇಬ್ಬರಿಸಿಗೆ ಸಲ್ಲಿಸಿದ ರೋಹಿತ್ ಶರ್ಮಾ

ಅಪ್ಘನ್‌ ತಂಡದ ಅತ್ಯದ್ಭುತ ಪ್ರದರ್ಶನಕ್ಕೆ ದಿಗ್ಗಜ ಆಟಗಾರರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನ ತಂಡದ ಈ ಐತಿಹಾಸಿಕ ಸಾಧನೆಯಿಂದ ಸಂತಸದಲ್ಲಿ ತೇಲಾಡಿದ ಆಫ್ಘನ್ನರು ತಮ್ಮ ದೇಶದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ವಿಶ್ವಕಪ್‌ ಗೆದ್ದಷ್ಟೇ ಖುಷಿಯಲ್ಲಿ ಸಂಭ್ರಮಾಚರಣೆ ನಡೆಸಿರುವ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News