close

News WrapGet Handpicked Stories from our editors directly to your mailbox

ಬಹು ನಿರೀಕ್ಷಿತ 'ಕಳಂಕ್' ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಯಾವಾಗ ಗೊತ್ತಾ?

ಈಗಾಗಲೇ ಚಿತ್ರ ತಂಡ ಕಳಂಕ್ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ನಾಳೆ(ಮಾರ್ಚ್ 29) ಬಿಡುಗಡೆ ಮಾಡಲಿದೆ. 

Updated: Mar 28, 2019 , 06:26 PM IST
ಬಹು ನಿರೀಕ್ಷಿತ 'ಕಳಂಕ್' ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಯಾವಾಗ ಗೊತ್ತಾ?

ನವದೆಹಲಿ: ಅಭಿಷೇಕ್ ವರಮಾನ ನಿರ್ದೇಶನದ 'ಕಳಂಕ್' ಸಿನಿಮಾ ಬಾಲಿವುಡ್'ನಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕಳೆದ ವಾರ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ಭಾರೀ ಮೆಚ್ಚುಗೆ ಗಳಿಸಿದ ಬೆನ್ನಲ್ಲೇ ಚಿತ್ರದ ಹಾಡೊಂದನ್ನೂ ಸಹ ಚಿತ್ರ ತಂದ ಬಿಡುಗಡೆ ಮಾಡಿತ್ತು. ಆ ಹಾಡನ್ನೂ ಸಹ ಸಿನಿಪ್ರಿಯರು ಕೊಂಡಾಡಿದ್ದರು. ಆ ಹಾಡಿನಲ್ಲಿ ಆಲಿಯಾ ಭಟ್ ಹಾಗೂ ಮಾಧುರಿ ದೀಕ್ಷಿತ್ ಪಾತ್ರಗಳು ವೀಕ್ಷಕರ ಮನಸೂರೆಗೊಂಡಿತ್ತು. ಇದೀಗ ಚಿತ್ರದ ಟೈಟಲ್ ಸಾಂಗ್ ರೀಲೀಸ್ ಯಾವಾಗ ಎಂಬ ಕುತೂಹಲ ಹಲವರಲ್ಲಿ ಮೂಡಿದೆ. 

ಈಗಾಗಲೇ ಚಿತ್ರ ತಂಡ ಕಳಂಕ್ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ನಾಳೆ(ಮಾರ್ಚ್ 29) ಬಿಡುಗಡೆ ಮಾಡಲಿದೆ. ಖ್ಯಾತ ಚಿತ್ರ ವಿಮರ್ಶಕ ತರಣ್ ಆದರ್ಶ್ ಚಿತ್ರದ ಎರಡು ಹೊಸ ಪೋಸ್ಟರ್ ಗಳೊಂದಿಗೆ ಟ್ವೀಟ್ ಮಾಡಿದ್ದು, 'ಕಳಂಕ್' ಚಿತ್ರದ ಟೈಟಲ್ ಸಾಂಗ್ ನಾಳೆ ರಿಲೀಸ್ ಆಗಲಿದೆ. ಏಪ್ರಿಲ್ 17, 2019 ರಂದು ಚಿತ್ರ ಬಿಡುಗಡೆಯಾಗಲಿದೆ" ಎಂದಿದ್ದಾರೆ.

ಆಲಿಯಾ ಭಟ್, ವರುಣ್ ಧವನ್, ಸಿದ್ಧಾರ್ಥ್ ರಾಯ್ ಕಪೂರ್, ಸಂಜಯ್ ದತ್, ಮಾಧುರಿ ದೀಕ್ಷಿತ್, ಸೋನಾಕ್ಷಿ ಸಿನ್ಹಾ ಮುಂತಾದವರನ್ನು ಒಳಗೊಂಡ ಬಹುತಾರಾಗಣದ 'ಕಳಂಕ್' ಚಿತ್ರ ಏಪ್ರಿಲ್ 12ರಂದು ಬಿಡುಗಡೆಯಾಗಲಿದೆ. ಅದ್ದೂರಿ ಸೆಟ್​ಗಳು, ಭಿನ್ನ ಪೋಷಾಕಿನಲ್ಲಿ ಕಾಣಿಸಿಕೊಂಡ ತಾರೆಯರು, ಸೂಪರ್ ಹಿನ್ನೆಲೆ ಸಂಗೀತ, ಕಲರ್​ಫುಲ್ ಆಗಿರುವ ಛಾಯಾಗ್ರಹಣ, ಖಡಕ್ ಡೈಲಾಗ್​ಗಳು, ರಾಜರ ಕಾಲದ ವೈಭವವನ್ನು ನೆನಪಿಸುವಂತಹ ವೇಷಭೂಷಣಗಳು ಚಿತ್ರದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ.