ʼಬಿಗ್‌ಬಾಸ್‌ʼ ಸ್ಪರ್ಧಿ, ʼರಂಗೋಲಿʼ ನಟಿ ಸಿರಿ ಇಷ್ಟು ವರ್ಷವಾದ್ರೂ ಮದುವೆಯಾಗದೆ ಇರೋದಕ್ಕೆ ಕಾರಣವೇನು?

Rangoli Kannada Serial Actress Siri: ಹಲವಾರು ವರ್ಷಗಳಿಂದ ಧಾರಾವಾಹಿ, ಸಿನಿಮಾಗಳಲ್ಲಿ ಮಿಂಚಿದ್ದ ಸ್ಯಾಂಡಲ್‌ವುಡ್‌ ನಟಿ ಸಿರಿ, ʼಬಿಗ್‌ಬಾಸ್ʼ ಮನೆಯಲ್ಲಿದ್ದ ಸಮಯದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬೆಳಕು ಚೆಲ್ಲಿದ್ದರು. ಇದೇ ವೇಳೆ ಅವರು ತಾವು ಏಕೆ ಇನ್ನೂ ಅವಾಹಿತರಾಗಿದ್ದೇನೆ ಅನ್ನೋದನ್ನು ಬಹಿರಂಗಪಡಿಸಿದ್ದರು.

Written by - Puttaraj K Alur | Last Updated : May 25, 2024, 11:16 AM IST
  • ʼರಂಗೋಲಿʼ ಧಾರವಾಹಿಯ ಮೂಲಕ ಭಾರೀ ಜನಪ್ರಿಯತೆ ಗಳಿಸಿದ್ದ ನಟಿ ಸಿರಿ
  • ʼಬಿಗ್‌ಬಾಸ್ ಕನ್ನಡ ಸೀಸನ್ 10ʼರಲ್ಲಿಯೂ ಸಖತ್‌ ಮಿಂಚಿದ್ದ ಸ್ಯಾಂಡಲ್‌ವುಡ್‌ ನಟಿ
  • ದೊಡ್ಮನೆಯಲ್ಲಿ ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದ ಕಿರುತೆರೆ ನಟಿ
ʼಬಿಗ್‌ಬಾಸ್‌ʼ ಸ್ಪರ್ಧಿ, ʼರಂಗೋಲಿʼ ನಟಿ ಸಿರಿ ಇಷ್ಟು ವರ್ಷವಾದ್ರೂ ಮದುವೆಯಾಗದೆ ಇರೋದಕ್ಕೆ ಕಾರಣವೇನು? title=
ನಟಿ ಸಿರಿ ಏಕೆ ಮದುವೆಯಾಗಿಲ್ಲ?

Rangoli Kannada Serial Actress Siri: ಕನ್ನಡದ ಕಿರುತೆರೆ ಲೋಕದಲ್ಲಿ ‘ರಂಗೋಲಿ’ ಧಾರಾವಾಹಿಯು ಸೂಪರ್ ಡೂಪರ್​ ಹಿಟ್​ ಆಗಿತ್ತು. ಈ ಧಾರಾವಾಹಿಯ ಪಾತ್ರಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಇದೇ ಸೀರಿಯಲ್​ ಮೂಲಕ ಭಾರೀ ಜನಪ್ರಿಯತೆ ಗಳಿಸಿದ ನಟಿ ಸಿರಿ ಪ್ರತಿಯೊಬ್ಬರಿಗೂ ಗೊತ್ತಿರುತ್ತಾರೆ. ಧಾರಾವಾಹಿ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದ ಸಿರಿ ʼಬಿಗ್‌ಬಾಸ್‌ ಕನ್ನಡ ಸೀಸನ್‌ 10ʼರಲ್ಲಿ ಭಾಗವಹಿಸಿ ಗಮನ ಸೆಳೆದರು. 7ನೇ ಕಂಟೆಸ್ಟೆಂಟ್​ ಆಗಿ ದೊಡ್ಮನೆ ಪ್ರವೇಶಿಸಿದ್ದ ಸಿರಿ ತಾವು ʼಬಿಗ್‌ಬಾಸ್‌ʼಗೆ ಬಂದಿದ್ದು ಯಾಕೆ ಅಂತಾ ತಿಳಿಸಿದ್ದರು. 

ʼಬಿಗ್‌ಬಾಸ್ ಕನ್ನಡ ಸೀಸನ್ 10ʼರಲ್ಲಿ ತಾವು ಇನ್ನೂ ಯಾಕೆ ಮದುವೆಯಾಗಿಲ್ಲವೆಂಬುದನ್ನು ಬಹಿರಂಗಪಡಿಸಿದ್ದರು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ಸಿರಿಯವರ ಮದುವೆಯದ್ದೇ ಸಖತ್‌ ಸೌಂಡ್‌ ಮಾಡಿತ್ತು. ತಮ್ಮ ವೈಯಕ್ತಿಯ ಬದುಕಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ಸಿರಿಯವರ ಬಗ್ಗೆ ಮೆಚ್ಚುಗೆ ಸಹ ವ್ಯಕ್ತವಾಗಿತ್ತು. ಆದರೂ ಸಹ ಅನೇಕರಿಗೆ ಇಷ್ಟು ಅಂದವಾಗಿರುವ ನಟಿ, ಏನೂ ಕೊರತೆಯಿಲ್ಲದ ನಟಿ ಇನ್ನೂ ಏಕೆ ಮದುವೆಯಾಗಿಲ್ಲ? ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿತ್ತು. ಇದರ ಬಗ್ಗೆ ಇಂದು ನಾವು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. 

 
 
 
 

 
 
 
 
 
 
 
 
 
 
 

A post shared by Colors Kannada Official (@colorskannadaofficial)

ಇದನ್ನೂ ಓದಿನನ್ನ ಮಗಳ ಜೊತೆ ಡೇಟಿಂಗ್ ಮಾಡಬೇಕೆಂದರೆ 7 ಷರತ್ತಗಳಿವೆ ಎಂದ SRK

ಹಲವಾರು ವರ್ಷಗಳಿಂದ ಧಾರಾವಾಹಿ, ಸಿನಿಮಾಗಳಲ್ಲಿ ಮಿಂಚಿದ್ದ ಸ್ಯಾಂಡಲ್‌ವುಡ್‌ ನಟಿ ಸಿರಿ, ʼಬಿಗ್‌ಬಾಸ್ʼ ಮನೆಯಲ್ಲಿದ್ದ ಸಮಯದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬೆಳಕು ಚೆಲ್ಲಿದ್ದರು. ಇದೇ ವೇಳೆ ಅವರು ತಾವು ಏಕೆ ಇನ್ನೂ ಅವಾಹಿತರಾಗಿದ್ದೇನೆ ಅನ್ನೋದನ್ನು ಬಹಿರಂಗಪಡಿಸಿದ್ದರು. ಸಹ ಸ್ಪರ್ಧಿಗಳ ಜೊತೆಗೆ ಮಾತನಾಡುತ್ತಿದ್ದ ವೇಳೆ ನಟಿ ಸಿರಿ ಮದುವೆಯ ವಿಚಾರವನ್ನು ಪ್ರಸ್ತಾಪಿಸಿದ್ದರು.   

ʼಇಷ್ಟು ವರ್ಷ ಜನರು ಒಂದು ಪಾತ್ರವಾಗಿ ನನ್ನನ್ನು ನೋಡಿದ್ದಾರೆ. ಈಗ ನಾನು ನಾನಾಗಿಯೇ ಇರಬೇಕು ಅಂತಾ ಆಸೆಪಡುತ್ತೇನೆ. ನನ್ನ ಜರ್ನಿ ನನಗೆ ತುಂಬ ಖುಷಿ ನೀಡಿದೆ. ಇಷ್ಟವಾದ ಪಾತ್ರಗಳನ್ನು ಮಾಡಿದ್ದೇನೆ. ಚಿಂತೆ ಏನೂ ಇಲ್ಲ. ಕೋಪ-ಖುಷಿಯಲ್ಲಿ ಸಿರಿ ಹೇಗೆ ಇರುತ್ತಾಳೆ ಅನ್ನೋದನ್ನು ಅಭಿಮಾನಿಗಳಿಗೆ ನಾನು ತೋರಿಸಬೇಕು. ನಾನು ಹೆಚ್ಚು ಸೆನ್ಸಿಟಿವ್​ ಹುಡುಗಿ. ಹೀಗಾಗಿ ಸಿಂಗಲ್​ ಆಗಿದ್ದೇನೆ. ನಮ್ಮ ಮನೆಗೆ ಬರುವ ಅಳಿಯ, ಒಬ್ಬ ಮಗನಾಗಿ ನಮ್ಮ ಮನೆಯಲ್ಲಿರಬೇಕು. ಈಗ ನಾನು ನಮ್ಮ ತಂದೆಯನ್ನು ಮಿಸ್​ ಮಾಡಿಕೊಳ್ಳುತ್ತೇನೆ. ಅವರು ಇದ್ದಿದ್ದರೆ ತುಂಬ ಸಂತೋಷಪಡುತ್ತಿದ್ದರು’ ಅಂತಾ ಸಿರಿ ʼಬಿಗ್‌ಬಾಸ್‌ʼ ಮನೆಯಲ್ಲಿ ಹೇಳಿದ್ದರು. 

ಇದನ್ನೂ ಓದಿರಂಗಾಯಣ ರಘು ಪತ್ನಿ ಈ ಖ್ಯಾತ ನಟಿ... ಮಗಳು ಸಹ ಫುಲ್‌ ಫೇಮಸ್‌ !

ʼನನಗೆ ಮದುವೆಯು ರಾಜಿ ಜೀವನಕ್ಕೆ ಸಮಾನವಾಗಿದೆ. ದಿನ ಕಳೆದಂತೆ ಹೆಚ್ಚು ಸಾಮಾನ್ಯರಾಗುವ ಸ್ನೇಹಿತರನ್ನು ನಾನು ನೋಡಿದ್ದೇನೆ. ನಾನು ಏಕೆ ಮದುವೆಯಾಗಿಲ್ಲ ಅನ್ನೋ ಪ್ರಶ್ನೆಗೆ ಉತ್ತರವೂ ಸ್ಪಷ್ಟವಾಗಿದೆ. ನನ್ನ ವ್ಯಕ್ತಿತ್ವವನ್ನು ರಾಜಿ ಮಾಡಿಕೊಳ್ಳುವ ಕಲ್ಪನೆಯನ್ನು ನಾನು ಇಷ್ಟಪಡುವುದಿಲ್ಲ, ಮದುವೆಯಾಗಿ ನನ್ನ ಮತ್ತು ಸಂಗಾತಿಯ ಜೀವನ ಎರಡನ್ನೂ ಹಾಳು ಮಾಡಿಕೊಳ್ಳಲು ನನಗೆ ಇಷ್ಟವಿಲ್ಲʼವೆಂದು ಹೇಳಿದ್ದರು. 

ನಟಿ ಸಿರಿಯವರು ಹೇಳಿದ ತಮ್ಮ ಮದುವೆ ವಿಚಾರವು ಸಹ ಸ್ಪರ್ಧಿಗಳಿಗೆ ಅಚ್ಚರಿಯನ್ನುಂಟು ಮಾಡಿತ್ತು. ಇದಲ್ಲದೆ ಅವರ ಸಾಕಷ್ಟು ಅಭಿಮಾನಿಗಳಿಗೂ ಆಶ್ಚರ್ಯವನ್ನುಂಟು ಮಾಡಿತ್ತು. ಕೆಲವರು ನಟಿಯ ವೈಯಕ್ತಿಕ ಜೀವನದ ಬಗ್ಗೆ ಗೌರವ ಭಾವನೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ನಟಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಸಹ ಮಾಡಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News